ಬೀದರ್: ನಾರಿ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ (Transport Dept) ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಡೀಸೆಲ್ ಕೊರತೆ ಬಳಿಕ ಪ್ರಯಾಣಿಕರಿಗೆ ನೀಡುವ ಟಿಕೆಟ್ ರೋಲ್ ಕೊರತೆ ಉಂಟಾಗಿದ್ದ ಬಗ್ಗೆ ಪಬ್ಲಿಕ್ ಟಿವಿ ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಆದೇಶ ಮಾಡಿದೆ.
ಬೀದರ್ (Bidar) ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಂದ್ರ ಜಾದವ್ ಆದೇಶ ಮಾಡಿದ್ದು, ಯಾವುದೇ ರೀತಿ ಟಿಕೆಟ್ ರೋಲ್ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಡೀಸೆಲ್ ಬಳಿಕ ಟಿಕೆಟ್ ರೋಲ್ ಕೊರತೆ; 3-4 ಜನರಿಗೆ ಸೇರಿ ಒಂದೇ ಟಿಕೆಟ್ ವಿತರಣೆ
ಪ್ರತಿಯೊಬ್ಬರಿಗೆ ನೀಡಬೇಕಿದ್ದ ಟಿಕೆಟ್‌ಗಳನ್ನು ಮೂರು, ನಾಲ್ಕು ಜನಕ್ಕೆ ಸೇರಿಸಿ ಕಂಡಕ್ಟರ್‌ಗಳು ಒಂದೇ ಟಿಕೆಟ್ ನೀಡುತ್ತಿದ್ದಾರೆ. ಬೀದರ್‌ನಿಂದ ಕಲಬುರಗಿ, ಬಳ್ಳಾರಿ ಸೇರಿದಂತೆ ವಿವಿಧ ಕಡೆ ಹೋಗುವ ಬಸ್‌ಗಳಲ್ಲಿ ಎರಡು ಮೂರು ಪ್ರಯಾಣಿಕರಿಗೆ ಒಂದೇ ಟಿಕೆಟ್ ನೀಡುತ್ತಿದ್ದಾರೆ.
ಒಂದೇ ಟಿಕೆಟ್ ನೀಡಿ ಟಿಕೆಟ್ ರೋಲ್ ಕೊರತೆಯನ್ನು ಕಂಡಕ್ಟರ್‌ಗಳು ಹರಸಾಹಸ ಪಟ್ಟು ನೀಗಿಸುತ್ತಿದ್ದು, ಈ ಬಗ್ಗೆ ಸಾರಿಗೆ ಸಿಬ್ಬಂದಿ ಪಬ್ಲಿಕ್ ಟಿವಿಗೆ ತಿಳಿಸಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.ಇದನ್ನೂ ಓದಿ: ಧಾರವಾಡ | ಶಾರ್ಟ್ ಸರ್ಕ್ಯೂಟ್‌ನಿಂದ ಸ್ಟೀಲ್ ಅಂಗಡಿಗೆ ಬೆಂಕಿ; ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

