ಬಾಗಲಕೋಟೆ: ನಗರದಲ್ಲಿ ಬೀದಿ ನಾಯಿಗಳ(Street Dog) ಉಪಟಳ ಮಿತಿಮೀರಿದ್ದು, ಕರ್ತವ್ಯ ನಿರತ ಹೆಸ್ಕಾಂ ಮೀಟರ್ ರೀಡರ್(Meter Reader) ಒಬ್ಬರ ಮೇಲೆ ಬೀದಿ ಶ್ವಾನವೊಂದು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.
ನಾಗಣ್ಣ ಕೋಗಿಲ್ ಗಾಯಗೊಂಡ ಮೀಟರ್ ರೀಡರ್. ಬಾಗಲಕೋಟೆಯ(Bagalkote) ವಿದ್ಯಾಗಿರಿ 6ನೇ ಕ್ರಾಸ್ನಲ್ಲಿ ಈ ಘಟನೆ ಸಂಭವಿಸಿದೆ.
ನಾಗಣ್ಣ ಕೋಗಿಲ್ ಅವರು ಎಂದಿನಂತೆ ಮನೆಗಳಿಗೆ ವಿದ್ಯುತ್ ಬಿಲ್ ನೀಡುವ ಕಾಯಕದಲ್ಲಿ ತೊಡಗಿದ್ದರು. ವಿದ್ಯಾಗಿರಿಯ 6ನೇ ಕ್ರಾಸ್ ಬಳಿ ತೆರಳಿದ್ದ ವೇಳೆ, ದಿಢೀರನೆ ಎರಗಿದ ಬೀದಿ ಶ್ವಾನ ಅವರ ಕಾಲಿಗೆ ಬಲವಾಗಿ ಕಚ್ಚಿ ಗಾಯಗೊಳಿಸಿದೆ. ಪರಿಣಾಮವಾಗಿ ಕಾಲಿನಿಂದ ತೀವ್ರ ರಕ್ತಸ್ರಾವ ಉಂಟಾಗಿದ್ದು, ನೋವಿನಿಂದ ನರಳುತ್ತಿದ್ದ ಅವರನ್ನು ಸ್ಥಳೀಯರು ತಕ್ಷಣವೇ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ಅಮ್ಮ ಕೊಟ್ಟ ಗಿಫ್ಟ್ ಮಿನಿ ಕೂಪರ್ ಕಾರು ಕಸಿಯಿತು ಮೂವರ ಜೀವ – ಸುಳ್ಯದ ಯುವಕ ಸೇರಿ ಮೂವರು ದುರ್ಮರಣ

