ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ (Mysuru Dasara) ಮಹೋತ್ಸವ ಎಂದಕ್ಷಣ ನೆನಪಿಗೆ ಬರುವುದು ಅರಮನೆ ನಗರಿಯ ರಸ್ತೆಗಳಲ್ಲಿ ಕಂಗೊಳಿಸುವ ವಿದ್ಯುತ್ ದೀಪಾಲಂಕಾರದ ವೈಭವ. ಪ್ರತಿ ಬಾರಿಯಂತೆ ಈ ಬಾರಿಯೂ ದಸರಾ ಕಳೆಕಟ್ಟಿದ್ದು, ಸಾಂಸ್ಕೃತಿಕ ನಗರಿಯ ಪ್ರಮುಖ ವೃತ್ತಗಳು ಹಾಗೂ ಬೀದಿಗಳು ದ್ಯುತಿಪೂರ್ಣವಾಗಿ ಬೆಳಗುತ್ತಿವೆ. ಈ ಬಾರಿ ದಸರಾ ದೀಪಾಲಂಕಾರದ ಪ್ರಮುಖ ಹೈಲೈಟ್ಸ್ನಲ್ಲಿ ಒಂದಾಗಿರುವ ಎಲ್ಐಸಿ ವೃತ್ತದ ಕೃಷ್ಣಾರ್ಜುನರ ರಥ ಸದ್ಯ ಜನರನ್ನು ತನ್ನತ್ತ ಸಖತ್ ಸೆಳೆಯುತ್ತಿದೆ.
ಕಲಾಚತುರರ ಕೈಚಳಕದಲ್ಲಿ ಮೂಡಿಬಂದ ಕಲಾಕೃತಿ:
ಮೈಸೂರಿನ ಪ್ರಮುಖ ವೃತ್ತಗಳಲ್ಲಿ ನಮ್ಮ ಪರಂಪರೆ, ಇತಿಹಾಸ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಒಟ್ಟು 80 ಆಕರ್ಷಕ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಇದರಲ್ಲೂ ವಿಶೇಷವಾಗಿ ಎಲ್ಐಸಿ ವೃತ್ತದಲ್ಲಿ ನಿರ್ಮಾಣವಾಗಿರುವ ಭವ್ಯವಾದ `ಕೃಷ್ಣಾರ್ಜುನರ ರಥ’ ಎಲ್ಲರ ಕಣ್ಮನ ಸೆಳೆಯುತ್ತಿದೆ. ಇದನ್ನೂ ಓದಿ: ಖಾಸಗಿ ದರ್ಬಾರ್ – ಮೈಸೂರು ಅರಮನೆಯಲ್ಲಿ ಮರುಕಳಿಸಿದ ಗತವೈಭವ

ಪ್ರಸಿದ್ಧ ಕಲಾವಿದ ಪುನೀತ್ ಕುಮಾರ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಈ ಅದ್ಭುತ ರಥವು ಮೂಡಿಬರುತ್ತಿದೆ. ಕಳೆದ 45 ದಿನಗಳಿಂದ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿರುವ ಸುಮಾರು 100ಕ್ಕೂ ಹೆಚ್ಚು ಕಲಾವಿದರು ಮತ್ತು ಕಾರ್ಮಿಕರು ಈ ಕಲಾಕೃತಿಯನ್ನು ಅತ್ಯಂತ ನಿಖರತೆ ಹಾಗೂ ಸುಂದರವಾಗಿ ರೂಪಿಸಿದ್ದಾರೆ.

ಕೃಷ್ಣಾರ್ಜುನ ರಥದ ವಿಶೇಷತೆಗಳೇನು?
ಬರೋಬ್ಬರಿ 40 ಅಡಿ ಎತ್ತರ, 50 ಅಡಿ ಅಗಲ ಹಾಗೂ 80 ಅಡಿ ಉದ್ದದ ಬೃಹತ್ ಗಾತ್ರದಲ್ಲಿ ರಥ ನಿರ್ಮಾಣಗೊಂಡಿದೆ. ರಥದ ಮುಂಭಾಗದಲ್ಲಿ ಧಾವಿಸುತ್ತಿರುವ 5 ಭವ್ಯ ಅಶ್ವಗಳು (ಕುದುರೆಗಳು) ರಥಕ್ಕೆ ಜೀವ ತುಂಬಿದAತಿವೆ. ರಥದ ಒಳಭಾಗದಲ್ಲಿ ಗೀತೋಪದೇಶ ಮಾಡುವ ಭಂಗಿಯ ಕೃಷ್ಣ ಹಾಗೂ ಅರ್ಜುನನ ಆಕರ್ಷಕ ಪ್ರತಿಮೆಗಳನ್ನು ನಾಳೆ ನಾಡಿದ್ದು ಅಳವಡಿಸಲಾಗುತ್ತದೆ.ಇದನ್ನೂ ಓದಿ: ಹೂವಿನ ಲೋಕದಲ್ಲಿ ʻಪ್ರಜಾಪ್ರಭುತ್ವದ ಹಬ್ಬʼ – ದಸರಾ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ
ರಾಜಭಟ್ಟರ ಪತಾಕೆ:
146 ಕಿಲೋಮೀಟರ್ ದೂರ ವಿದ್ಯುತ್ ದೀಪಾಲಂಕಾರದ ಹೊಳಪು:
ದಸರಾ ಮಹೋತ್ಸವದ ಅಂಗವಾಗಿ ಮೈಸೂರು ನಗರದ ಒಟ್ಟು 199 ರಸ್ತೆಗಳ ಪೈಕಿ 146 ಕಿಲೋಮೀಟರ್ ವ್ಯಾಪ್ತಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕೇವಲ ಲೈಟಿಂಗ್ಸ್ ಮೂಲಕ ಜಗಮಗಿಸುವುದು ಮಾತ್ರವಲ್ಲದೆ, ಈ ದೀಪಾಲಂಕಾರದ ಮೂಲಕ ನಮ್ಮ ಪುರಾಣ, ಇತಿಹಾಸ ಹಾಗೂ ಪರಂಪರೆಯನ್ನು ಯುವಪೀಳಿಗೆಗೆ ಮತ್ತು ಪ್ರವಾಸಿಗರಿಗೆ ತಿಳಿಸಿಕೊಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಎಲ್ಐಸಿ ವೃತ್ತದ ಕೃಷ್ಣಾರ್ಜುನ ರಥದ ಜೊತೆಗೆ ಮೈಸೂರು ಅರಮನೆ, ತಾಜ್ ಮಹಲ್ ಸೇರಿದಂತೆ ಹತ್ತಾರು ಸುಂದರ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಲು ಸಾಂಸ್ಕೃತಿಕ ನಗ್ರಿಗೆ ಸಾಗರೋಪಾದಿಯಲ್ಲಿ ಪ್ರವಾಸಿಗರು ಹರಿದು ಬರುತ್ತಿದ್ದಾರೆ.
ವೆಚ್ಚ ಮತ್ತು ಮುಖ್ಯಾಂಶಗಳು
ಈ ದೀಪಾಲಂಕಾರಕ್ಕೆ ಒಟ್ಟು 9.50 ಕೋಟಿ ರೂ. ವೆಚ್ಚ ತಗುಲಿದ್ದು, 3,106 ಕಿಲೋವ್ಯಾಟ್ ವಿದ್ಯುತ್ ಬೇಕಾಗಿದೆ. ಇಂದಿನಿAದ ಮುಂದಿನ 20 ದಿನಗಳ ಕಾಲ ಮೈಸೂರು ನಗರವು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿದೆ. ನೀವು ಕೂಡ ಈ ಬಾರಿ ಮೈಸೂರು ದಸರಾಗೆ ಭೇಟಿ ನೀಡುತ್ತಿದ್ದರೆ, ಎಲ್ಐಸಿ ವೃತ್ತದಲ್ಲಿ ಕಂಗೊಳಿಸುತ್ತಿರುವ ಈ ಕೃಷ್ಣಾರ್ಜುನರ ರಥದ ದಿವ್ಯ ದರ್ಶನವನ್ನು ಮಿಸ್ ಮಾಡಿಕೊಳ್ಳಬೇಡಿ.ಇದನ್ನೂ ಓದಿ: ದೇವಿ ಕೃಪೆ ಜನರ ಮೇಲಿರಲಿ, ಜನರ ಕೃಪೆ ನಮ್ಮ ಸರ್ಕಾರದ ಮೇಲಿರಲಿ: ಸಿಎಂ ಡಿಕೆಶಿ

