-ಬಂಡೀಪುರ, ಬಿಳಿಗಿರಿರಂಗನ ಬೆಟ್ಟದಲ್ಲಿ ನಿಯಮ ಜಾರಿ
ಚಾಮರಾಜನಗರ: ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿ ಪಿಸಿಸಿಎಫ್ (ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ) ಕುಮಾರ್ ಪುಷ್ಕರ್ ಆದೇಶ ಹೊರಡಿಸಿದ್ದಾರೆ.
ಮೊಬೈಲ್ ನಿರ್ಬಂಧಕ್ಕೆ ಸಂಬಂಧಿಸಿದಂತೆ 2025ರ ನವೆಂಬರ್ 17ರಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಈ ಕುರಿತು ಎನ್ಟಿಸಿಎ ನೀಡಿದ ಸೂಚನೆ ಹಾಗೂ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆ ಇದೀಗ ಈ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಇದನ್ನೂ ಓದಿ: ದೇಶದಲ್ಲೇ ಹಾವು ಕಡಿತ ಪ್ರಕರಣದಲ್ಲಿ ಕರ್ನಾಟಕ ಮುಂಚೂಣಿ
ಈ ನಿರ್ಬಂಧವು ಕೋರ್ ಹಾಗೂ ಪರಿಸರ ಪ್ರವಾಸೋದ್ಯಮ ವಲಯಗಳಿಗೆ ಅನ್ವಯವಾಗಲಿದ್ದು, ಸಫಾರಿ ವೇಳೆಯಲ್ಲಿ ಮೊಬೈಲ್ ಬಳಕೆಯ ನಿಷೇಧಕ್ಕೆ ಅನ್ವಯವಾಗಲಿದೆ.
ಹೊಸ ನಿಯಮದ ಪ್ರಕಾರ, ತುರ್ತು ಸಂಪರ್ಕಕ್ಕಾಗಿ ಸಫಾರಿ ವಾಹನಗಳಲ್ಲಿ ವೈರ್ಲೆಸ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರಸ್ತುತ ಈ ಆದೇಶವನ್ನು ಚಾಮರಾಜನಗರ ಜಿಲ್ಲೆಯ ಬಂಡೀಪುರ ಹಾಗೂ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಸಫಾರಿಯಲ್ಲಿ ಜಾರಿಗೆ ತರಲಾಗಿದೆ. ಇದನ್ನೂ ಓದಿ: ಹೂವಿನ ಲೋಕದಲ್ಲಿ ʻಪ್ರಜಾಪ್ರಭುತ್ವದ ಹಬ್ಬʼ – ದಸರಾ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ

