ನವದೆಹಲಿ: ದೆಹಲಿ ಪೊಲೀಸರ ವಶದಿಂದ ಬಿಡುಗಡೆಯಾದ ನಂತರ, ಯೂಟ್ಯೂಬರ್ ಧ್ರುವ್ ರಾಠಿ (Dhruv Rathee) ಬಂಧನದ ನೆಪದಲ್ಲಿ ನನ್ನನ್ನು ಅಪಹರಿಸಲಾಗಿತ್ತು ಎಂದು (Delhi Protest) ಗಂಭೀರ ಆರೋಪ ಮಾಡಿದ್ದಾರೆ.
ಭಾನುವಾರ ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ಬಿಡುಗಡೆಯಾದ ನಂತರ, ರಾಠಿ ಬಂಧನದ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ ಧ್ರುವ್ , ನಾನು ಗುರುಗ್ರಾಮ್ ನಿವಾಸದಲ್ಲಿ ಇದ್ದಾಗ ನನ್ನನ್ನು ಪೊಲೀಸರು ಏಕಾಏಕಿ ಅರೆಸ್ಟ್ ಮಾಡಿದ್ದಾರೆ. ನನ್ನನ್ನು ಕಾನೂನುಬದ್ಧವಾಗಿ ಬಂಧಿಸಲಾಗಿಲ್ಲ, ನಾನಿನ್ನು ಆಗ ಮಲಗಿದ್ದೆ, ಅಪರಿಚಿತರು ಬಂದು ನನ್ನನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.
ನಿಷೇಧಾಜ್ಞೆಗಳ ನಡುವೆ ಪ್ರತಿಭಟನಾಕಾರರು ಸೇರುವುದನ್ನು ತಡೆಯಲು, ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದರು ಮತ್ತು ಗುರುಗ್ರಾಮ್ನಲ್ಲಿರುವ ಅವರ ನಿವಾಸದಿಂದ ರಾಠಿ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದರು.
ವಿಡಿಯೋದಲ್ಲಿ.ಶನಿವಾರ ಬೆಳಿಗ್ಗೆ 7:00 ಗಂಟೆಗೆ ಸಾಮಾನ್ಯ ಉಡುಪಿನಲ್ಲಿದ್ದ ಸುಮಾರು 20 ಜನ ನನ್ನ ಮಲಗುವ ಕೋಣೆಗೆ ಪ್ರವೇಶಿಸಿದರು. ನನ್ನನ್ನು ಕರೆದುಕೊಂಡು ಹೋದರು. ನನನ್ನು ಹಲವು ಪೊಲೀಸ್ ಠಾಣೆಗಳಿಗೆ ಸ್ಥಳಾಂತರಿಸಲಾಯಿತು. ಸುಮಾರು 22 ರಿಂದ 23 ಗಂಟೆಗಳ ಕಾಲ ನನ್ನ ಕಾನೂನು ಸಲಹೆಗಾರರು ಅಥವಾ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಅವಕಾಶ ಕೊಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಅಕ್ರಮ ಪಬ್ಗಳ ಮೇಲೆ ಖಾಕಿ ದಾಳಿ: ಅಪ್ರಾಪ್ತರಿಗೆ ಮದ್ಯ ಸರಬರಾಜು ಪತ್ತೆ
I was not arrested or detained, I was KIDNAPPED.
Thank you for your support, here’s the full story 👇 https://t.co/gcN8cAUOmY
— Dhruv Rathee (@dhruv_rathee) October 11, 2026
ನನ್ನ ಮನೆಯಿಂದ ಹೊರಗೆ ಕರೆದೊಯ್ಯುವಾಗ ಸಣ್ಣಪುಟ್ಟ ಗಾಯಗಳು ಕೂಡ ಅಗಿವೆ. ವೀಡಿಯೊದಲ್ಲಿ, ತನ್ನ ಪಾಸ್ಪೋರ್ಟ್ ತೋರಿಸಿ ಈಗಲೂ ಕೂಡ ನಾನು ಭಾರತೀಯ ಪ್ರಜೆ. ಭಾರತೀಯ ಪ್ರಜೆಯಾಗಿ, ಶಾಂತಿಯುತ ಪ್ರತಿಭಟನೆಗಳು ಮತ್ತು ಪ್ರಜಾಪ್ರಭುತ್ವ ಚಳುವಳಿಗಳಲ್ಲಿ ಭಾಗವಹಿಸುವ ಮೂಲಭೂತ ಹಕ್ಕು ನನಗೂ ಇದೆ ಎಂದು ಹೇಳಿದ್ದಾರೆ.
ರಾಠಿ ಅವರನ್ನು ಬಿಡುಗಡೆ ಮಾಡಲಾಗಿದ್ದರೂ, ಅವರು ನಿಷೇಧಾಜ್ಞೆಗಳನ್ನು ಉಲ್ಲಂಘಿಸಲು ಅಥವಾ ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಮತ್ತೆ ಪ್ರವೇಶಿಸಲು ಪ್ರಯತ್ನಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪೊಲೀಸ್ ಮೂಲಗಳು ಸೂಚಿಸಿವೆ.ಇದನ್ನೂ ಓದಿ: BBK 13: ನವರಾತ್ರಿ ಉಡುಗೊರೆ – ದೊಡ್ಮನೆಗೆ ಹೊಸ ಸ್ಪರ್ಧಿ ಎಂಟ್ರಿ

