ಬೀದರ್: ನಾರಿ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ (Transport Department) ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಡಿಸೇಲ್ ಕೊರತೆ ಬಳಿಕ ಈಗಾ ಪ್ರಯಾಣಿಕರಿಗೆ ಟಿಕೆಟ್ ನೀಡುವ ರೋಲ್ (Ticket Roll) ಕೊರತೆಯಾಗಿದೆ. ಪ್ರತಿಯೊಬ್ಬರಿಗೆ ನೀಡಬೇಕಿದ್ದ ಟಿಕೆಟ್ಗಳನ್ನು ಸಾರಿಗೆ ಸಿಬ್ಬಂದಿ ಮೂರು ನಾಲ್ಕು ಜನಕ್ಕೆ ಸೇರಿಸಿ ಒಂದೇ ಟಿಕೆಟ್ ನೀಡುತ್ತಿದ್ದು, ಬೀದರ್ ಟು ಕಲಬುರಗಿ ಸೇರಿದಂತೆ ವಿವಿಧ ಕಡೆ ಹೋಗುವ ಬಸ್ಗಳಲ್ಲಿ ಎರಡು ಮೂರು ಪ್ರಯಾಣಿಕರಿಗೆ ಒಂದೇ ಟಿಕೆಟ್ ನೀಡಲಾಗುತ್ತಿದೆ.
ಒಂದೇ ಟಿಕೆಟ್ ನೀಡಿ ಟಿಕೆಟ್ ರೋಲ್ ಕೊರತೆಯನ್ನು ಹರಸಾಹಸ ಪಟ್ಟು ಕಂಡಕ್ಟರ್ಗಳು ನೀಗಿಸುತ್ತಿದ್ದು, ಟಿಕೆಟ್ ಕೊರತೆಯನ್ನು ನೀಗಿಸಲು ರೋಲ್ಗಳು ಇರುವ ಕಂಡಕ್ಟರ್ಗಳಿಂದ ಪಡೆದು ಪ್ರಯಾಣಿಕರಿಗೆ ಟಿಕೆಟ್ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಟಿಕೆಟ್ ರೋಲ್ ಕೊರತೆಯಿಂದ ಸಾರಿಗೆ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಮುನ್ನೆಚ್ಚರಿಕಾ ಕ್ರಮವಾಗಿ ದೀಪ್ಕೆ, ರಾಂಕಾ, ದಾಸ್ ವಶಕ್ಕೆ – ದೆಹಲಿ ಪೊಲೀಸ್
ಇಷ್ಟು ದಿನ ಹಣ ಪಾವತಿ ಮಾಡಲಾಗದ್ದಕ್ಕೆ ಡಿಸೇಲ್ ಕೊರತೆಯಿಂದ ಬಸ್ ಸೇವೆ ಸ್ಥಗಿತವಾಗಿತ್ತು. ಈಗ ಪ್ರಯಾಣಿಕರಿಗೆ ನೀಡುವ ಬಸ್ ಟಿಕೆಟ್ ರೋಲ್ ಕೂಡಾ ಕೊರತೆಯಾಗಿದ್ದು, ನಾರಿ ಶಕ್ತಿ ಗ್ಯಾರಂಟಿಯಿಂದಾಗಿ ಸಾರಿಗೆ ಇಲಾಖೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಖಾಕಿ ಘರ್ಜನೆ: 40ಕ್ಕೂ ಹೆಚ್ಚು ಕ್ಲಬ್, ಪಬ್, ಹೋಟೆಲ್ಗಳ ಮೇಲೆ ಏಕಕಾಲಕ್ಕೆ ರೇಡ್!

