– ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮೀಕ್ಷೆ
ಬೆಂಗಳೂರು: ಬೆಂಗಳೂರು ರಸ್ತೆಗಳಲ್ಲಿ ಗುಂಡಿಗಳ (Pothole) ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಗರ ಪಾಲಿಕೆ ಈಗ ಕೃತಕ ಬುದ್ಧಿಮತ್ತೆ ಅಂದರೆ ಎಐ (AI) ತಂತ್ರಜ್ಞಾನದ ಮೊರೆ ಹೋಗಿದೆ. ನಗರ ಪಾಲಿಕೆ ವ್ಯಾಪ್ತಿಯ 7 ವಿಭಾಗಗಳ 72 ವಾರ್ಡ್ಗಳಲ್ಲಿ ಒಟ್ಟು 2,493.5 ಕಿಲೋಮೀಟರ್ ರಸ್ತೆಗಳನ್ನು ಸಮೀಕ್ಷೆ ನಡೆಸಲಾಗಿದೆ. ಡ್ಯಾಶ್ಕ್ಯಾಮ್ ಮೂಲಕ ರಸ್ತೆಗಳ ಸ್ಥಿತಿಗತಿಯನ್ನು ಪರಿಶೀಲಿಸಿರುವ ಎಐ ತಂತ್ರಜ್ಞಾನ ಬರೋಬ್ಬರಿ 14,393 ರಸ್ತೆ ಗುಂಡಿಗಳನ್ನು ಗುರುತಿಸಿದೆ. ಈಗ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಶಾಶ್ವತ ಪರಿಹಾರಕ್ಕೆ ಜಿಬಿಎ ಪ್ಲಾನ್ ಮಾಡಿದೆ.
ರಾಜಧಾನಿಯ ರಸ್ತೆಗಳಲ್ಲಿ ಗುಂಡಿ ಗಂಡಾಂತರಗಳ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಪ್ರತಿನಿತ್ಯ ವಾಹನ ಸವಾರರ ಸಂಕಷ್ಟ ತಪ್ಪಿದ್ದಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಉತ್ತರ ನಗರ ಪಾಲಿಕೆ ಈಗ ತಂತ್ರಜ್ಞಾನದ ಮೊರೆ ಹೋಗಿದೆ. ಪಾಲಿಕೆ ವ್ಯಾಪ್ತಿಯ 7 ವಿಭಾಗಗಳ 72 ವಾರ್ಡ್ಗಳಲ್ಲಿ ಒಟ್ಟು 2,493.5 ಕಿಲೋಮೀಟರ್ ರಸ್ತೆಗಳನ್ನು ಎಐ ಆಧಾರಿತ ತಂತ್ರಜ್ಞಾನ ಬಳಸಿ ಸಮೀಕ್ಷೆ ನಡೆಸಲಾಗಿದೆ. ಇದನ್ನೂ ಓದಿ: ಉಕ್ರೇನ್ಗೆ ಹೊಸ ಅಧ್ಯಕ್ಷರ ಅಗತ್ಯವಿದೆ – ಝೆಲೆನ್ಸ್ಕಿ ವಿರುದ್ಧ ಕೆರಳಿ ಕೆಂಡವಾದ ಟ್ರಂಪ್
ಡ್ಯಾಶ್ಕ್ಯಾಮ್ ಮೂಲಕ ಸಂಗ್ರಹಿಸಿದ ರಸ್ತೆ ಚಿತ್ರಗಳನ್ನು ವಿಶ್ಲೇಷಿಸಿ, ರಸ್ತೆ ಮೇಲ್ಮೈ ಸ್ಥಿತಿ, ಗುಂಡಿಗಳು, ದುರಸ್ತಿ ಅಗತ್ಯವಿರುವ ಸ್ಥಳಗಳು ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳಿಂದ ಉಂಟಾದ ಹಾನಿಯನ್ನು ಗುರುತಿಸಲಾಗಿದೆ. ಇದನ್ನೂ ಓದಿ: ಸಂಪರ್ಕಕ್ಕೆ ಸಿಗದ ದೀಪ್ಕೆ, ರಾಂಕಾ, ಸೌರವ್ – ಮತ್ತೆ ಜಂತರ್ ಮಂತರ್ ಚಲೋಗೆ ಸಿಜೆಪಿ ಕರೆ
ಇನ್ನು, ಗುಂಡಿ ಮುಚ್ಚಿ ಕೆಲ ದಿನಗಳಲ್ಲಿ ಮತ್ತೆ ಗುಂಡಿ ಬೀಳೋ ದೂರುಗಳು ಹೆಚ್ಚಾಗುತ್ತಿವೆ. ಹೀಗಾಗಿ ಜಿಬಿಎ ಇನ್ಮುಂದೆ ಈ ರೀತಿ ಆಗದಂತೆ ವೈಜ್ಞಾನಿಕ ರೀತಿ ಗುಂಡಿ ಮುಚ್ಚುವ ಪ್ಲಾನ್ ಮಾಡಿದೆ. ಈಗ ಎಐ ತಂತ್ರಜ್ಞಾನ ಗುರುತಿಸಿರುವ ಗುಂಡಿಗಳನ್ನ ಸರಿಯಾದ ರೀತಿಯಲ್ಲಿ ಮುಚ್ಚುವ ಹೊಣೆಯನ್ನ ಎಂಜಿನಿಯರ್ಸ್ಗೆ ನೀಡಿದೆ. ಎಂಜಿನಿಯರ್ಸ್ ಸಣ್ಣ ಗುಂಡಿ ಆಗಿದ್ರು ಅದನ್ನ ಮುಚ್ಚುವಾಗ ರೋಲರ್ ಬಳಕೆ ಮಾಡಬೇಕು. ಮತ್ತೆ ಮಳೆ ನೀರು ನಿಲ್ಲದಂತೆ ನಿಗಾವಹಿಸಿಬೇಕು ಎಂದು ಸೂಚಿಸಿದ್ದಾರೆ. ಒಂದು ವೇಳೆ ಎಂಜಿನಿಯರ್ಗಳು ತಪ್ಪಾಗಿ ಕೆಲಸ ಮಾಡಿದ್ರೆ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನ ಹಿರಿಯ ಅಧಿಕಾರಿಗಳು ನೀಡಿದ್ದಾರೆ. ಇದನ್ನೂ ಓದಿ: ಮೋದಿ ದೇಶದ ಪ್ರಜಾಪ್ರಭುತ್ವವನ್ನೇ ನಾಶ ಮಾಡ್ತಿದ್ದಾರೆ; ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ರಾಹುಲ್ ತೀವ್ರ ಖಂಡನೆ

