ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿಯ(CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ(Abhijit Dipke) ಮತ್ತು ವಕ್ತಾರರಾದ ಸೌರವ್ ದಾಸ್(Sourav Das), ಅಶುತೋಷ್ ರಾಂಕಾ(Ashutosh Ranka) ಅವರನ್ನು ದೆಹಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.
ಈ ಮೂವರನ್ನೂ ಹಿಂದಿನ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 107 ಮತ್ತು 151 ರ ಅಡಿಯಲ್ಲಿ ಮುನ್ನೆಚ್ಚರಿಕೆ ವಶಕ್ಕೆ (Preventive Detention) ಒಳಪಡಿಸಲಾಗಿದ್ದು, ಸದ್ಯದಲ್ಲೇ ಅವರನ್ನು ಎಕ್ಸುಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುತ್ತದೆ. ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ – 7,000ಕ್ಕೂ ಅಧಿಕ ಮಂದಿ ವಶಕ್ಕೆ, ಎಫ್‌ಐಆರ್ ದಾಖಲು ಸಾಧ್ಯತೆ
It’s SEM court, Delhi Cantt.
— Ratna Singh (@whattalawyer) October 11, 2026
ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಸಲಾದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ನಾಯಕರು ಕರೆ ನೀಡಿದ್ದರು. ಈ ಪ್ರತಿಭಟನೆಯ ಸಂದರ್ಭದಲ್ಲೇ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಈ ಮುನ್ನೆಚ್ಚರಿಕೆಯಾಗಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: Delhi Protest | ಸಿಜೆಪಿ ನಾಯಕರನ್ನ ಹೊರತುಪಡಿಸಿ ವಶಕ್ಕೆ ಪಡೆದ ಎಲ್ಲರೂ ಬಿಡುಗಡೆ

