– ಪೊಲೀಸರು ಬಿಜೆಪಿ ಗುಂಡಾಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ
– ದೆಹಲಿ ಸಂಪೂರ್ಣ ಬಂದ್ ಮಾಡಿದ್ದಾರೆ ಎಂದು ಕಿಡಿ
ನವದೆಹಲಿ: ವಿದ್ಯಾರ್ಥಿಗಳ ಧ್ವನಿ ಹತ್ತಿಕ್ಕಲು ಸಂಪೂರ್ಣ ದೆಹಲಿಯನ್ನ (Delhi) ಬಂದ್ ಮಾಡಿದ್ದಾರೆ. ಪೊಲೀಸರು ಹಾಗೂ ಬಿಜೆಪಿಯ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ದೇಶದ ಪ್ರಜಾಪ್ರಭುತ್ವವನ್ನು ಪ್ರಧಾನಿ ಮೋದಿ ನಾಶಪಡಿಸುತ್ತಿದ್ದಾರೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚೆನ್ನೈನಲ್ಲಿ ನಡೆದ ‘ಛಾತ್ರೋನ್ ಕಿ ಗೂಂಜ್’ (Chhatron Ki Goonj) (ವಿದ್ಯಾರ್ಥಿಗಳ ಧ್ವನಿ) ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
LIVE: Chhatron Ki Goonj | Chennai, Tamil Nadu https://t.co/H0XIypqFso
— Rahul Gandhi (@RahulGandhi) October 10, 2026
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪ್ರತಿಭಟನೆಗಳ ವೇಳೆ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಇಷ್ಟು ಸಾಲದ್ದಕ್ಕೆ ವಿದ್ಯಾರ್ಥಿಗಳ ಧ್ವನಿ ಅಡಗಿಸಲು ಇಡೀ ದೆಹಲಿಯನ್ನ ಬಂದ್ ಮಾಡಿದ್ದಾರೆ. ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಮಧ್ಯೆ ಬಿಜೆಪಿ ಕಳುಹಿಸಿದ್ದ ಗೂಂಡಾಗಳು ವಿದ್ಯಾರ್ಥಿಗಳನ್ನ ಥಳಿಸಿದ್ದಾರೆ. ಈ ಮೂಲಕ ಮೋದಿ ಭಾರತದ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕುತೂಹಲವು ನಿಮ್ಮ ಪ್ರಗತಿಯ ಅಡಿಪಾಯವೂ ಹೌದು. ನೀವು ಮಾಡುವ ಯಾವುದೇ ಕೆಲಸ, ಸ್ಥಾಪಿಸುವ ಯಾವುದೇ ವ್ಯವಹಾರ, ನಿರ್ಮಿಸುವ ಯಾವುದೇ ದೇಶ, ಯಾವುದೇ ನಾವೀನ್ಯತೆ, ಕಲೆ, ನೃತ್ಯ ಅಥವಾ ಸಂಗೀತ – ಹೀಗೆ ನೀವು ಉತ್ತಮವಾಗಿ ಮಾಡುವ ಯಾವುದೇ ವಿಷಯವು ಯಾವಾಗಲೂ ನೀವು ಕೇಳುವ ಪ್ರಶ್ನೆಯೊಂದರಿಂದಲೇ ಶುರುವಾಗುತ್ತೆ. ಆದ್ದರಿಂದ, ಪ್ರಶ್ನೆ ಮಾಡುವುದು ಪ್ರಗತಿಯ ಅಡಿಪಾಯ ಇದ್ದಂತೆ. ಕುತೂಹಲವು ವಿದ್ಯಾರ್ಥಿಗಳಿಗೆ ಅಧಿಕಾರ ಇದ್ದವರನ್ನ ಪ್ರಶ್ನಿಸುವ, ಭವಿಷ್ಯವನ್ನು ಕಲ್ಪಿಸಿಕೊಳ್ಳುವ ಮತ್ತು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಅಧಿಕಾರದಲ್ಲಿರುವವರನ್ನ ಪ್ರಶ್ನಿಸುವ ನಾಗರಿಕರ ಹಕ್ಕನ್ನು ಸಂವಿಧಾನವು ರಕ್ಷಿಸುತ್ತದೆ. ಮತದಾನವು ಅವರಿಗೆ ಉತ್ತರಗಳನ್ನ ಪಡೆಯುವ ಸಾಧನ ಒದಗಿಸುತ್ತದೆ ಎಂದೂ ರಾಹುಲ್ ಪ್ರತಿಪಾದಿಸಿದ್ದಾರೆ.

