ಹಾಸನ: ಡಿಸಿ ಉದ್ಧಟತನ ಇನ್ನೂ ಬಿಟ್ಟಿಲ್ಲ, ಇತಿಮಿತಿಲಿ ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಹಾಸನ ಡಿಸಿ ಲತಾಕುಮಾರಿ (DC Lathakumari) ವಿರುದ್ಧ ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಸನ ಜಿಲ್ಲಾ ಮಂತ್ರಿಗೆ ಹಾಗೂ ಜಿಲ್ಲಾಧಿಕಾರಿಗೆ ಸಂಘರ್ಷ ಶುರುವಾಗಿದೆ. ಅಧಿಕಾರಿಗಳನ್ನು ಯಾವ ರೀತಿ ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದ್ದೀರಿ? ಸಮನ್ವಯತೆ ನಿರ್ಮಾಣ ಮಾಡಿ ಅಧಿಕಾರ ಮಾಡಬೇಕು. ಆ ಹೆಣ್ಣಮಗಳು ಕೆಪಿಎಸ್‌ಸಿಯಲ್ಲಿ ಏನು ಮಾಡಿದ್ದರೂ ಅವರನ್ನು ರಜೆ ಮೇಲೆ ಕಳುಹಿಸಬೇಕಿತ್ತು, ಇಲ್ಲಾ ಸಸ್ಪೆಂಡ್ ಮಾಡಬೇಕಿತ್ತು. ಅದು ಬಿಟ್ಟು ಇಲ್ಲಿ ಕರೆದುಕೊಂಡು ಬಂದು ರಕ್ಷಣೆ ಕೊಟ್ಟು ಇಟ್ಟುಕೊಂಡಿದ್ದಾರೆ. ರಕ್ಷಣೆ ಕೊಟ್ಟು ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ. ಆದರೆ ಡಿಸಿ ಉದ್ಧಟತನ ಇನ್ನೂ ಬಿಟ್ಟಿಲ್ಲ, ಇತಿಮಿತಿಲಿ ಕೆಲಸ ಮಾಡಬೇಕು ಎಂದು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪ್ರತಿಭಟನಾಕಾರರನ್ನ ಬಿಡುಗಡೆ ಮಾಡದಿದ್ರೆ ಉಪವಾಸ ಸತ್ಯಾಗ್ರಹ: ಸೋನಂ ವಾಂಗ್‌ಚುಕ್ ವಾರ್ನಿಂಗ್
ಈ ಜಿಲ್ಲೆಯಲ್ಲಿ ಪ್ರತಿನಿತ್ಯ ಏನು ನಡೆಯುತ್ತಿದೆ? ಹಲವಾರು ವರ್ಷಗಳಿಂದ ದೇವಿಗೆರೆಯಲ್ಲಿ ಯಾವ ರೀತಿ ನಡೆದುಕೊಂಡು ಬಂದಿದೆ? ಎನ್ನೋದು ಗೊತ್ತಿರಬೇಕು. ಹಲವಾರು ಗಣಪತಿಗಳನ್ನು ಬಿಟ್ಟಿದ್ದಾರೆ. ಈಗ ಎಸ್‌ಪಿಗೆ ನೋಟಿಸ್ ಕೊಡ್ತಾರೆ ಎಂದರೆ ಅವರಿಗೆ ಜವಾಬ್ದಾರಿ ಇಲ್ವಾ? ಡಿಸಿ ಏನೇನು ಮಾಡಿದ್ದಾರೆ ಬಂಡವಾಳ ನಾನು ತೆಗೆಯಬಹುದಲ್ವಾ? ಐಪಿಎಸ್ ಅಧಿಕಾರಿಗೆ ನೋಟಿಸ್ ಕೊಡ್ತೀರಾ, ಹೀಗಾದರೆ ಈ ಜಿಲ್ಲೆಯಲ್ಲಿ ಆಡಳಿತ ಹೇಗೆ ನಡೆಸುತ್ತೀರಿ ಜ್ಞಾನ ಇಟ್ಟುಕೊಂಡು ಕೆಲಸ ಮಾಡಬೇಕು, ಇಲ್ಲವಾದಲ್ಲಿ ಆಡಳಿತ ಕೊಲ್ಯಾಪ್ಸ್ ಆಗುತ್ತೆ ಎಂದು ಕಿಡಿಕಾರಿದ್ದಾರೆ.
ಎಸ್ಪಿ ಜಿಲ್ಲಾಧಿಕಾರಿ ಕೈ ಕೆಳಗೆ ಕೆಲಸ ಮಾಡಬೇಕಾ? ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದೆ ಇದ್ದರೆ ಹೇಗೆ ಮಾಡ್ತೀರಾ? ಈ ರೀತಿ ನೋಟಿಸ್ ಕೊಟ್ಟಿರುವುದಕ್ಕೆ ಮೇಲಾಧಿಕಾರಿಗಳು ಸ್ಪಂದಿಸಬೇಕು. ಹೀಗಾದರೆ ಜನಸಾಮಾನ್ಯರ ಕಷ್ಟಗಳನ್ನು ಹೇಗೆ ನಿಭಾಯಿಸುತ್ತಾರೆ? ಇಷ್ಟೊಂದು ಸಂಘರ್ಷ ಮಾಡಿಕೊಂಡರೆ ಹೇಗೆ? ಎಂದಿದ್ದಾರೆ.ಇದನ್ನೂ ಓದಿ:ಖಾಸಗಿ ಆಸ್ಪತ್ರೆಗಳ ಬಿಲ್ ಕಳ್ಳಾಟಕ್ಕೆ ಬ್ರೇಕ್?- ಇನ್ಮುಂದೆ ರಶೀದಿಯಲ್ಲಿ ಔಷಧ ಬೆಲೆ ಕಡ್ಡಾಯ
ನಾನು ಇಲ್ಲಿಯವರೆಗೆ ಚರ್ಚೆ ಮಾಡಿಲ್ಲ. ಆ ಹೆಣ್ಣುಮಗಳಿಗೆ ನಾನು ಹೇಳೋದು, ಅವರು ಡಿಸಿ ಇರಬಹುದು, ಆದರೆ ಡಿಸಿಯಾಗಿ ಯಾವ ರೀತಿ ನಡೆದುಕೊಳ್ಳಬೇಕು. ನಾವೇನು ಅವರಿಗೆ ಉಪದೇಶ ಮಾಡುವುದು ಬೇಕಾಗಿಲ್ಲ. ಅವರಿಗೆ ಟ್ರೈನಿಂಗ್ ಕೊಡ್ತಾರೆ. ಕೆಪಿಎಸ್‌ಸಿಯಲ್ಲಿ ಯಾವ ರೀತಿ ಕೆಲಸ ಮಾಡಿದ್ದಕ್ಕೆ ಸಸ್ಪೆಂಡ್ ಆಗಬೇಕಿತ್ತು. ರಕ್ಷಣೆ ಕೊಟ್ಕಂಡು ಕರೆದುಕೊಂಡು ಬಂದು ಇಲ್ಲಿ ಡಿಸಿಯಾಗಿ ಹಾಕೊಂಡಿದ್ದಾರೆ. ಇನ್ನೂ ಉದ್ದಟತನ ನಿಲ್ಸಿಲ್ಲ, ನಾನು ಇದನ್ನೆಲ್ಲಾ ಗಮನಿಸುತ್ತಿದ್ದೇನೆ. ನಿನ್ನೆ ಮಂತ್ರಿ ಅವರಿಗೆ ಸಂಘರ್ಷ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಸಲಹೆ ಕೊಟ್ಟಿದ್ದೇನೆ. ಜನಗಳ ಪರಿಸ್ಥಿತಿಗೆ ತಕ್ಕಂತೆ ಕೆಲಸ ಮಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಸಿಎಂ ವಿಜಯ್ ಭೇಟಿಯಾದ ರಾಹುಲ್ ಗಾಂಧಿ – ಕೆಫೆಯಲ್ಲಿ ಕಾಫಿ ಜೊತೆ ತಿರಮಿಸು ಸವಿದ ನಾಯಕರು

