ಚೆನ್ನೈ: ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಅವರು ತಮಿಳುನಾಡು ಮುಖ್ಯಮಂತ್ರಿ, ಟಿವಿಕೆ ಅಧ್ಯಕ್ಷ ಸಿ.ಜೋಸೆಫ್ ವಿಜಯ್ (Joseph Vijay) ಅವರನ್ನು ಶನಿವಾರ ಭೇಟಿಯಾಗಿದ್ದಾರೆ.
ಚೆನ್ನೈನ (Chennai) ನೀಲಂಕರೈನಲ್ಲಿರುವ ವಿಜಯ್ ಅವರ ನಿವಾಸದಲ್ಲಿ ಮಧ್ಯಾಹ್ನದ ಭೋಜನದ ವೇಳೆ ಇಬ್ಬರೂ ನಾಯಕರು ಭೇಟಿಯಾಗಿ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. ಬಳಿಕ ಸಮೀಪದ ಕೆಫೆಗೆ ತೆರಳಿ ಕಾಫಿ ಮತ್ತು ತಿರಮಿಸು ಸವಿದಿದ್ದಾರೆ. ದೆಹಲಿಯಲ್ಲಿ ಮತಗಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಭೇಟಿ ನಡೆದಿದೆ. ಇದನ್ನೂ ಓದಿ: ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ – ಚಾಮುಂಡೇಶ್ವರಿ ಉತ್ಸವ ಮೂರ್ತಿ ಶುದ್ಧಿಕಾರ್ಯ ಪೂರ್ಣ

ಚೆನ್ನೈನ ಐಲ್ಯಾಂಡ್ ಗ್ರೌಂಡ್ಸ್ನಲ್ಲಿ ಯುವಜನರ ಸಂಪರ್ಕ ಕಾರ್ಯಕ್ರಮವಾದ `ಛಾತ್ರೋಂ ಕಿ ಗೂಂಜ್’ (ಮಾಣವರಗಳಿನ್ ಕುರಲ್) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ರಾಹುಲ್ ಗಾಂಧಿ ವಿಜಯ್ ಅವರನ್ನು ಭೇಟಿಯಾಗಿದ್ದಾರೆ. ಇದನ್ನೂ ಓದಿ: ತಿನೈಘಾಟ್ ರೈಲು ನಿಲ್ದಾಣದಲ್ಲಿ ಕಬ್ಬಿಣದ ಅದಿರು ಸಾಗಣೆ ಪುನರಾರಂಭ
ಒಂದು ಗಂಟೆ ಮಾತುಕತೆ, ಬಳಿಕ ಕೆಫೆಯಲ್ಲಿ ಕಾಫಿ:
ರಾಹುಲ್ ಗಾಂಧಿ ಅವರು ಶನಿವಾರ ಬೆಳಗ್ಗೆ ದೆಹಲಿಯಿಂದ ಚೆನ್ನೈಗೆ ಆಗಮಿಸಿದ್ದರು. ಬಳಿಕ ವಿಜಯ್ ಅವರ ನೀಲಂಕರೈನ ನಿವಾಸಕ್ಕೆ ತೆರಳಿ ಮಧ್ಯಾಹ್ನದ ಭೋಜನದೊಂದಿಗೆ ಮಾತುಕತೆ ನಡೆಸಿದರು. ಪಕ್ಷದ ಮೂಲಗಳ ಪ್ರಕಾರ, ಸುಮಾರು ಒಂದು ಗಂಟೆ ಕಾಲ ನಡೆದ ಈ ಭೇಟಿಯಲ್ಲಿ ಇಬ್ಬರೂ ನಾಯಕರು ಹಲವು ರಾಜಕೀಯ ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಇದನ್ನೂ ಓದಿ: 35,000 ಜನಕ್ಕೆ 2,165 ಕೋಟಿ ವಂಚನೆ – ಶಿವಾನಂದ್ ನೀಲಣ್ಣನವರ್ ವಿರುದ್ಧ ಇಡಿ ಅಧಿಕಾರಿಗಳಿಂದ ಚಾರ್ಜ್ಶೀಟ್
ಭೇಟಿ ಮುಗಿದ ಬಳಿಕ ರಾಹುಲ್ ಗಾಂಧಿ ಮತ್ತು ವಿಜಯ್ ಪಳವಕ್ಕಂನಲ್ಲಿರುವ ಸಮೀಪದ ಕೆಫೆಯೊಂದಕ್ಕೆ ತೆರಳಿದ್ದಾರೆ. ಅಲ್ಲಿ ಇಬ್ಬರೂ ಕ್ಯಾಪುಚಿನೊ, ತಿರಮಿಸು, ಕುಕೀಸ್ ಮತ್ತು ಕಾಫಿ ಸವಿದಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬರ ಪರಿಣಾಮದಿಂದ ತುಮಕೂರಿನಲ್ಲಿ ʻಸರಳ ದಸರಾʼ: ಪರಮೇಶ್ವರ್

