BBK 13: ಟಾಸ್ಕ್ ಆಡುವ ವೇಳೆ ಸ್ಪರ್ಧಿಗಳ ಅತಿರೇಕದ ವರ್ತನೆಗೆ (Bigg Boss Kannada 13) ಕಿಚ್ಚ ಸುದೀಪ್ ( Kiccha sudeep) ಗರಂ ಆಗಿದ್ದಾರೆ.
ಬಿಗ್‌ಬಾಸ್ ಸೀಸನ್ 13 ಶುರುವಾದಾಗಿನಿಂದ ವಾರದ ಎಪಿಸೋಡ್‌ಗಳಿಗಿಂತ ವಾರಂತ್ಯದ ಕಿಚ್ಚನ ಪಂಚಾಯ್ತಿ ನೋಡೋದಕ್ಕೇನೆ ಆಡಿಯನ್ಸ್‌ಗಳು ಕಾಯ್ತಾ ಇರ್ತಾರೆ. ಈ ವಾರದಲ್ಲೂ ಸಹ ಹಿಂದೆಂದಿಗಿಂತ ಹೆಚ್ಚು ಕುತೂಹಲದಿಂದ ಕಾಯುತ್ತಿದ್ದಾರೆ.
ಕಳೆದ 12 ಸೀಸನ್‌ಗಳಲ್ಲೂ ಈ ರೀತಿಯ ಜಗಳ ಎಂದಿಗೂ ನಡೆದಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಹೀಗಿರುವಾಗ ʼವಾರದ ಕಥೆ ಕಿಚ್ಚನ ಜೊತೆʼ ಪ್ರೋಮೋ ಬಿಡುಗಡೆಯಾಗಿದೆ. ವಾರ ಪೂರ್ತಿ ಟಾಸ್ಕ್ ನೆಪದಲ್ಲಿ ಸ್ಪರ್ಧಿಗಳು ಮಾಡಿದ ಅತಿರೇಕಕ್ಕೆ ಬ್ರೇಕ್ ಹಾಕಲು ಕಿಚ್ಚ ಸಿದ್ದರಾಗಿದ್ದಾರೆ.
ಗಂಧರ್ವ ಮತ್ತು ರಾಕ್ಷಸರ ಟಾಸ್ಕ್‌ನಲ್ಲಿ ಮಾಡ್ರನ್ ಕವಿ ಮಂಜನ ವರ್ತನೆ ಹಾಗೂ ನಾಮಿನೇಷನ್ ವಿಚಾರಕ್ಕೆ ಗಾನವಿ ಮತ್ತು ಗಗನ್ ನಡುವೆ ನಡೆದ ಜಗಳ ಫುಲ್ ವೈರಲ್ ಆಗಿದೆ. ಜಗಳವಾಡುವ ಭರದಲ್ಲಿ ಕೆಟ್ಟದಾಗಿ ಪದಬಳಕೆ ಮಾಡಿದ್ದಾರೆ. ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಇಷ್ಟು ಬೀಪ್ ಸೌಂಡ್‌ಗಳನ್ನು ಹಾಕಿದ್ದು ಎಂದು ಸ್ಪರ್ಧಿಗಳನ್ನ ಟ್ರೋಲ್ ಮಾಡಲಾಗ್ತಿದೆ.ಇದನ್ನೂ ಓದಿ: ದೇಶ ವಿರೋಧಿ ಶಕ್ತಿಗಳು ಸಿಜೆಪಿ ಜೊತೆಗೆ ದೆಹಲಿಯಲ್ಲಿ ಹೋರಾಟ ಮಾಡ್ತಿವೆ: ಛಲವಾದಿ ನಾರಾಯಣಸ್ವಾಮಿ
ಪ್ರೋಮೋದಲ್ಲಿ ಸುದೀಪ್, ಈ ವಾರ ಚರ್ಚೆ ಮಾಡೋದಕ್ಕಿಂತ ಡಿಸಿಷನ್ ತೆಗೆದುಕೊಳ್ಳೋದೆ ಜಾಸ್ತಿ ಇದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಅಸಭ್ಯ ಪದ ಬಳಸಿದ ಮಾಡ್ರನ್ ಕವಿ ಮಂಜನಿಗೆ ತಮ್ಮದೇ ಶೈಲಿಯಲ್ಲಿ ಪಾಠ ಕೂಡ ಕಲಿಸಿದ್ದಾರೆ. ಮಂಜನಿಗೆ ಮನೆಯವರಿಂದಲೇ ಬುದ್ದಿ ಮಾತು ಹೇಳಿಸಿದ್ದಾರೆ ಸುದೀಪ್. ತಾಯಿ ಬೇಜಾರಿನಿಂದ ಆಡಿದ ಮಾತನ್ನ ಕೇಳಿ ಅಳುತ್ತಲೇ ಪ್ರತಿಕ್ರಿಯಿಸಿದ್ದಾನೆ ಮಾಡ್ರನ್ ಕವಿ ಮಂಜ. ಇನ್ನುಳಿದ ಸ್ಪರ್ಧಿಗಳ ನಡುವೆಯೂ ಜಗಳ ನಡೆದಿದ್ದು, ಅವರಿಗೆಲ್ಲಾ ಯಾವ ರೀತಿ ಕಿಚ್ಚ ಕ್ಲಾಸ್ ತೆಗೆದುಕೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ..ಇದನ್ನೂ ಓದಿ: ಯಾರು, ಯಾರ ವಿರುದ್ಧ ಸ್ಟಿಂಗ್ ಮಾಡುತ್ತಾರೆ ಪಟ್ಟಿ ಬಿಡುಗಡೆ ಮಾಡಿ: ಗೋವಿಂದ ಕಾರಜೋಳ

