ರತ್ನಾ ಸಿಂಗ್ ವಶಕ್ಕೆ
ಯೂಟ್ಯೂಬರ್ ಧ್ರುವ್ ರಾಠೀ ವಶಕ್ಕೆ ಪಡೆದ ಬೆನ್ನಲ್ಲೇ ಸಿಜೆಪಿಯ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಅವರನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು
ದಬ್ಬಾಳಿಕೆಯ ಕ್ರಮ
ಧ್ರುವ್ ರಾಠೀ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿರುವುದನ್ನು ಸಿಜೆಪಿ ಖಂಡಿಸಿದೆ. ಇದು ದಬ್ಬಾಳಿಕೆಯ ಕ್ರಮ ಎಂದ ಬಣ್ಣಿಸಿದೆ. ವಶದಲ್ಲಿರುವ ರಾಠೀ ಹಾಗೂ ನೂರಾರು ಇತರ ನಾಗರಿಕರು ಮತ್ತು ವಿದ್ಯಾರ್ಥಿ ಕಾರ್ಯಕರ್ತರನ್ನು ತಕ್ಷಣವೇ ಮತ್ತು ಯಾವುದೇ ಷರತ್ತುಗಳಿಲ್ಲದೆ ಬಿಡುಗಡೆ ಮಾಡುವಂತೆ ಸಿಜೆಪಿ ಆಗ್ರಹಿಸಿದೆ.
ಸ್ಪೈಕ್ ಸ್ಟ್ರಿಪ್ ಅಳವಡಿಕೆ
ಕಾಕ್ರೋಚ್ ಜನತಾ ಪಾರ್ಟಿ’ (CJP) ಇಂದು ನಡೆಸಲಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಪೊಲೀಸರು ಮೋಹನ್ ಎಸ್ಟೇಟ್ ಪ್ರದೇಶದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಇಲ್ಲಿ ಸ್ಪೈಕ್ ಸ್ಟ್ರಿಪ್‌ಗಳನ್ನು (ವಾಹನಗಳ ಟೈರ್ ಒಡೆಯುವ ಸಾಧನ) ಅಳವಡಿಸಲಾಗಿದೆ.
7 ಹಂತದ ಬ್ಯಾರಿಕೇಡ್
ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್ ಸುತ್ತಮುತ್ತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಪ್ರತಿಭಟನಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯುದ್ದಕ್ಕೂ ಕನಿಷ್ಠ ಏಳು ಹಂತಗಳ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಪ್ರತಿಭಟನಾಕಾರರು ಭೇದಿಸುವುದನ್ನು ತಡೆಯಲು ಕೊನೆಯ ಹಂತದ ಕೆಲವು ಬ್ಯಾರಿಕೇಡ್‌ಗಳನ್ನು ಪರಸ್ಪರ ವೆಲ್ಡ್ ಹಾಕಲಾಗಿದೆ.
ಧ್ರುವ್ ರಾಠಿ ಪೊಲೀಸ್ ವಶಕ್ಕೆ
ಜಂತರ್ ಮಂತರ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ(Dhruv Rathee) ಅವರನ್ನು ದೆಹಲಿ ಪೊಲೀಸರು(Delhi Police) ಶನಿವಾರ ಬೆಳಿಗ್ಗೆ ವಶಕ್ಕೆ ಪಡೆದಿದ್ದಾರೆ.
ಸಿಎಎ ಪ್ರತಿಭಟನೆಯಲ್ಲಿ ಭಾಗಿಯಾದವರು ವಶಕ್ಕೆ
ಶನಿವಾರ ಮಧ್ಯರಾತ್ರಿ 12:30ರ ಸುಮಾರಿಗೆ ವಶಕ್ಕೆ ಪಡೆಯಲಾದವರ ಪೈಕಿ ಸುಮಾರು 250 ಮಂದಿ ದೆಹಲಿಯ ಆಗ್ನೇಯ (ಸೌತ್ ಈಸ್ಟ್) ಜಿಲ್ಲೆಗೆ ಸೇರಿದವರಾಗಿದ್ದಾರೆ. ವಿಶೇಷವಾಗಿ 2020ರ ಸಿಎಎ ವಿರೋಧಿ ಪ್ರತಿಭಟನೆಯ(CAA Protest) ಕೇಂದ್ರಬಿಂದುವಾಗಿದ್ದ ಶಾಹೀನ್ ಬಾಗ್ ಸುತ್ತಮುತ್ತಲಿನ ಪ್ರದೇಶಗಳಿಂದ ಈ ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

