ನವದೆಹಲಿ: ಸಿಇಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಇಂಡಿ (INDI) ಒಕ್ಕೂಟದ ಸದಸ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಇಂದು (ಅ.9) ರಾತ್ರಿ 8 ಗಂಟೆಗೆ ಭೇಟಿಯಾಗಲು ಸಮಯಾವಕಾಶ ನೀಡಿದ್ದಾರೆ.
ಭೇಟಿ ವೇಳೆ ಇಂಡಿ ಒಕ್ಕೂಟದ ನಾಯಕರು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೂರು ನೀಡಲಿದ್ದಾರೆ. ಇದನ್ನೂ ಓದಿ: ನೋಯ್ಡಾದ ಜೇವರ್ ಏರ್ಪೋರ್ಟ್ಗೆ ನರೇಂದ್ರ ಮೋದಿ ಹೆಸರು – ಪ್ರಧಾನಿ ಹೆಸರಿಡುವ ಪ್ರಸ್ತಾವನೆಗೆ ಯುಪಿ ಕ್ಯಾಬಿನೆಟ್ ಒಪ್ಪಿಗೆ
ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ತೇಜಸ್ವಿ ಯಾದವ್ ಸೇರಿದಂತೆ ಸೇರಿದಂತೆ 10 ಜನರ ಪ್ರಮುಖ ನಾಯಕರ ನಿಯೋಗ ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿಯಾಗಲಿದೆ.
ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಇಂಡಿ ಒಕ್ಕೂಟವು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಹಾಗೂ ಚುನಾವಣಾ ಆಯೋಗ ಸರ್ಕಾರದ ಕೆಗೊಂಬೆಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದೆ.ಇದನ್ನೂ ಓದಿ: CJP ಪ್ರತಿಭಟನೆಗೆ ಸಜ್ಜು; ಮೆಟ್ರೋ ನಿರ್ಬಂಧ, ರೈಲುಗಳ ರದ್ದು, 23,000 ಪೊಲೀಸರ ನಿಯೋಜನೆ

