ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ (Mysuru Dasara) ಆಗಮಿಸುವ ಪ್ರವಾಸಿಗರಿಗೆ ಸುಗಮ ಮತ್ತು ವೈವಿಧ್ಯಮಯ ಪ್ರವಾಸಿ ಅನುಭವ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ವಿಶೇಷ ಪ್ರವಾಸ ವ್ಯವಸ್ಥೆಗಳನ್ನು ರೂಪಿಸಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ (KJ George) ತಿಳಿಸಿದ್ದಾರೆ.
ದಸರಾ ಸಂದರ್ಭದಲ್ಲಿ ಮೈಸೂರಿನ ಪ್ರಮುಖ ತಾಣಗಳು ಮತ್ತು ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಲು ಏSಖಿಆಅಯ ಜನಪ್ರಿಯ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ವಿಶೇಷವಾಗಿ ನಡೆಸಲಾಗುತ್ತಿದೆ. ಇದರ ಜೊತೆಗೆ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳನ್ನು ಪರಿಚಯಿಸುವ ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ. ಇದನ್ನೂ ಓದಿ: ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರಲು ಧನಂಜಯನ ಆಯ್ಕೆ ಬಹುತೇಕ ಖಚಿತ

ಅಂಬಾರಿಯಲ್ಲಿ ದಸರಾ ದೀಪಾಲಂಕಾರ ವೀಕ್ಷಣೆ:
ಅಂಬಾರಿ ಡಬಲ್ ಡೆಕ್ಕರ್ ಬಸ್ ಹಗಲು ವೇಳೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ರತಿ ಗಂಟೆಗೊಮ್ಮೆ ಸಂಚರಿಸಲಿದೆ. ಹಗಲಿನಲ್ಲಿ ಸವಾರಿಗೆ ಪ್ರತಿ ವ್ಯಕ್ತಿಗೆ 250 ರೂ. ನಿಗದಿಪಡಿಸಲಾಗಿದೆ. ಮೈಸೂರಿನ ದಸರಾ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಲು ಸಂಜೆ 6:30, ರಾತ್ರಿ 8 ಹಾಗೂ 9:30ಕ್ಕೆ ವಿಶೇಷ ಸವಾರಿಗಳು ಇರಲಿವೆ. ರಾತ್ರಿ ಸವಾರಿಯಲ್ಲಿ ಕೆಳಗಿನ ಡೆಕ್‌ಗೆ 250 ರೂ. ಹಾಗೂ ಮೇಲಿನ ಡೆಕ್‌ಗೆ 500 ರೂ. ನಿಗದಿಪಡಿಸಲಾಗಿದೆ.
ನಗರದ ಪ್ರಮುಖ ವೃತ್ತಗಳು, ಅರಮನೆ ಸುತ್ತಮುತ್ತಲಿನ ಪ್ರದೇಶಗಳು, ಸಯ್ಯಾಜಿರಾವ್ ರಸ್ತೆ ಸೇರಿದಂತೆ ದಸರಾ ದೀಪಾಲಂಕಾರದಿಂದ ಕಂಗೊಳಿಸುವ ಪ್ರಮುಖ ಭಾಗಗಳ ಮೂಲಕ ಅಂಬಾರಿ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ.ಇದನ್ನೂ ಓದಿ: ಮೈಸೂರು ದಸರಾ | ರಾಜ್ಯಾದ್ಯಂತ ಹೆಚ್ಚುವರಿ 3,000 KSRTC ಬಸ್ ವ್ಯವಸ್ಥೆ – ವಿಶೇಷ ಪ್ಯಾಕೇಜ್‌ಗಳೂ ಲಭ್ಯ
ಏಳು ದಸರಾ ವಿಶೇಷ ಪ್ರವಾಸ ಪ್ಯಾಕೇಜ್‌ಗಳು:
ದಸರಾಕ್ಕೆ ಆಗಮಿಸುವ ಪ್ರವಾಸಿಗರು ಮೈಸೂರು ನಗರಕ್ಕೆ ಮಾತ್ರ ಸೀಮಿತವಾಗದೆ ಕರ್ನಾಟಕದ ಇತರೆ ಪ್ರಮುಖ ಪ್ರವಾಸಿ ತಾಣಗಳನ್ನೂ ವೀಕ್ಷಿಸಲು ಅನುಕೂಲವಾಗುವಂತೆ KSTDC ಏಳು ವಿಶೇಷ ಪ್ರವಾಸ ಯೋಜನೆಗಳನ್ನು ರೂಪಿಸಿದೆ.
ಊಟಿಯ ಎರಡು ದಿನಗಳ ಪ್ರವಾಸ, ಮೈಸೂರು ಸ್ಥಳೀಯ ಪ್ರವಾಸ, ಬೇಲೂರು-ಹಳೇಬೀಡು-ಶ್ರವಣಬೆಳಗೊಳ, ಕೊಡಗಿನ ಪ್ರಮುಖ ತಾಣಗಳು, ಶಿವನಸಮುದ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ನಂಜನಗೂಡು ಸೇರಿದಂತೆ ವಿವಿಧ ಧಾರ್ಮಿಕ, ಐತಿಹಾಸಿಕ ಮತ್ತು ನೈಸರ್ಗಿಕ ಪ್ರವಾಸಿ ತಾಣಗಳನ್ನು ಒಳಗೊಂಡ ಒಂದು ಹಾಗೂ ಎರಡು ದಿನಗಳ ಪ್ಯಾಕೇಜ್‌ಗಳು ಲಭ್ಯವಿವೆ. ಇದನ್ನೂ ಓದಿ: ಅಂಬಾರಿ ತೂಕ ತಡೆಯಲಾಗದೇ ತಾಲೀಮು ಅರ್ಧಕ್ಕೆ ಮೊಟಕು – ಬಹುತೇಕ ಕ್ಯಾಪ್ಟನ್ ರೇಸ್‌ನಿಂದ ಮಹೇಂದ್ರ ಔಟ್
ಮೈಸೂರು ದಸರಾವನ್ನು ನೋಡಲು ಬರುವ ಪ್ರವಾಸಿಗರು ಕೇವಲ ಒಂದು ಕಾರ್ಯಕ್ರಮವನ್ನು ನೋಡಿ ಹಿಂದಿರುಗದೆ, ಮೈಸೂರಿನ ವೈಭವದ ಜೊತೆಗೆ ಸುತ್ತಮುತ್ತಲಿನ ಇತರೆ ಪ್ರವಾಸಿ ತಾಣಗಳನ್ನೂ ಅನುಭವಿಸಬೇಕು. ಅದಕ್ಕಾಗಿ ಸುಗಮ ಪ್ರಯಾಣ, ವಿಶ್ವಾಸಾರ್ಹ ಸೇವೆ ಮತ್ತು ವೈವಿಧ್ಯಮಯ ಪ್ರವಾಸ ಪ್ಯಾಕೇಜ್‌ಗಳನ್ನು ಏSಖಿಆಅ ಮೂಲಕ ಒದಗಿಸಲಾಗುತ್ತಿದೆ. ಪ್ರವಾಸಿಗರಿಗೆ ದಸರಾ ಅನುಭವವನ್ನು ಇನ್ನಷ್ಟು ಸ್ಮರಣೀಯವಾಗಿಸುವುದು ನಮ್ಮ ಉದ್ದೇಶ, ಎಂದು ಸಚಿವರು ತಿಳಿಸಿದ್ದಾರೆ.
ಪ್ರವಾಸ ಪ್ಯಾಕೇಜ್‌ಗಳು, ಅಂಬಾರಿ ಬಸ್ ಸೇವೆ ಹಾಗೂ ಬುಕ್ಕಿಂಗ್ ಸಂಬಂಧಿತ ಮಾಹಿತಿಗಾಗಿ ಪ್ರವಾಸಿಗರು ಏSಖಿಆಅ ಸಹಾಯವಾಣಿ ಸಂಖ್ಯೆ 080-4334 4334/35/36/ 42, 0821-2423652 ಅಥವಾ 8970656400 ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ www.kstdc.co ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ info@kstdc.coಗೆ ಇ-ಮೇಲ್ ಮಾಡಬಹುದು. ಇದನ್ನೂ ಓದಿ: ಅಡವಿ ದೇವರ ಮೊರೆ ಹೋದ ಮಾವುತರು, ಕಾವಾಡಿಗರು – ದಸರಾ ನಿರ್ವಿಘ್ನವಾಗಿ ನಡೆಯಲಿ ಎಂದು ವಿಶೇಷ ಪೂಜೆ

