ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಹಿಂಗಾರು ಮಳೆ ಅಬ್ಬರ ಜೋರಾಗಿದೆ. ಮೂಡಿಗೆರೆ (Mudigere) ತಾಲೂಕು ಸೇರಿದಂತೆ ಮಲೆನಾಡಿನ ಹಲವು ಭಾಗಗಳಲ್ಲಿ ಬಿರುಗಾಳಿಯೊಂದಿಗೆ ಧಾರಾಕಾರ ಮಳೆ (Rain) ಸುರಿಯುತ್ತಿದೆ.
ಮೂಡಿಗೆರೆ ತಾಲೂಕಿನ ಜಾಣಿಗೆ ಗ್ರಾಮದಲ್ಲಿ ಬಿರುಗಾಳಿ, ಮಳೆಯ ಆರ್ಭಟಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆಯ ನೂರಾರು ಹೆಂಚುಗಳು ಹಾರಿ ಹೋಗಿವೆ. ಭಾರೀ ಗಾಳಿಯ ರಭಸಕ್ಕೆ ಶಾಲೆಯ ಮೇಲ್ಛಾವಣಿಯ ಹೆಂಚುಗಳು ಕಿತ್ತುಹೋಗಿವೆ. ಇದನ್ನೂ ಓದಿ: ಯುಪಿ ಚುನಾವಣೆಗೂ ಮುನ್ನ ಅಖಿಲೇಶ್‌ಗೆ ಶಾಕ್ – ಅ.14 ರಂದು ಮೂವರು ರೆಬೆಲ್ ಶಾಸಕರು ಬಿಜೆಪಿ ಸೇರ್ಪಡೆ
ಮೂಡಿಗೆರೆ ತಾಲೂಕು, ಕೊಟ್ಟಿಗೆಹಾರ ಹಾಗೂ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲೂ ಮಳೆಯ ಅಬ್ಬರ ಮುಂದುವರಿದಿದೆ. ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿರುವುದರಿಂದ ಜನಜೀವನದ ಮೇಲೂ ಪರಿಣಾಮ ಉಂಟಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ | ಮದ್ವೆಯಾದ ಖುಷಿಯಲ್ಲಿದ್ದ ಚಿಕ್ಕಣ್ಣಗೆ ಶಾಕ್ – ಇಬ್ಬರು ನಟರಿಗೆ ಕೋರ್ಟ್ ಸಮನ್ಸ್
ಇತ್ತ ಮಲೆನಾಡಿಗರು ಕಾಫಿ ಬೆಳೆ ಉಳಿಸಿಕೊಳ್ಳಲು ಮಳೆಯನ್ನೇ ಎದುರು ನೋಡುತ್ತಿದ್ದಾರೆ. ಕಾಫಿ ಬೆಳೆಗೆ ಮಳೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಮಲೆನಾಡಿನ ರೈತರು ಹಿಂಗಾರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ಸಿಇಸಿ ವಿರುದ್ಧ ಪ್ರತಿಭಟನೆ – ವಿಪಕ್ಷ ನಾಯಕರು ಬರ್ತಿದ್ದಂತೆ ರಾಜ್‌ಘಾಟ್‌ನಿಂದ ತೆರಳಿದ ರಾಹುಲ್, ಪ್ರಿಯಾಂಕಾ

