ಬೆಂಗಳೂರು: ನಕಲಿ ಮೆಡಿಸಿನ್ ದಂಧೆ ಕರಾಳತೆ ಎಸ್‌ಐಟಿ ತನಿಖೆಯಲ್ಲಿ ಜಾಹೀರಾಗಿದೆ. ನಕಲಿ ಲೇಬಲ್ ಅಂಟಿಸಿ ಕೇವಲ 4 ತಿಂಗಳಲ್ಲಿ ಕಿಂಗ್‌ಪಿನ್ ಪ್ರಶಾಂತ್ ಮತ್ತು ಅವನ ಗ್ಯಾಂಗ್ 11-12 ಕೋಟಿ ಹಣ ಮಾಡಿದೆ.
ಟರ್ಕಿಗೆ ಹೋಗಿ ಲೇಬಲ್ ಖರೀದಿಸಿ ತಂದು, ಬೆಂಗಳೂರಿನಲ್ಲಿ ಸೇಮ್ ಲೇಬಲ್ ಪ್ರಿಂಟ್ ಮಾಡುತ್ತಿದ್ದರು. ಬೆಂಗಳೂರಿನಲ್ಲೇ ಫೈಜರ್ ಟ್ಯೂಬ್ ಖರೀದಿಸಿ ಆ ಮೆಡಿಸಿನ್‌ಗೆ ಲೇಬಲ್ ಅಂಟಿಸುತ್ತಿದ್ದರು. ಈ ಟ್ಯೂಬ್‌ಗೆ ಮೆಡಿಸಿನ್ ತುಂಬಲು ಅರುಣಾಚಲ ಪ್ರದೇಶದ ಔಷಧಿ ಕಂಪನಿ ಒಂದರಿಂದ ಕಡಿಮೆ ಬೆಲೆಗೆ ತರಿಸಿಕೊಳ್ಳುತ್ತಿದ್ದರು. ಅಂದರೆ, ಸುಮಾರು 200-300ರೂ ಇರುವ ಔಷಧಿ ತರಿಸಿಕೊಳ್ಳುತ್ತಿದ್ದ ಪ್ರಶಾಂತ್ ಅದಕ್ಕೆ 8,000-10,000 ರೂ. ಮೌಲ್ಯದ ಫೈಜರ್ ಕಂಪನಿಯ ಲೇಬಲ್ ಹಾಕಿ ಮಾರಾಟ ಮಾಡುತ್ತಿದ್ದ. ಇದನ್ನೂ ಓದಿ: GST ಅಡಿ ಬಂಧನದ ಅಧಿಕಾರ ರದ್ದು, ಡಬಲ್ ಟ್ಯಾಕ್ಸ್‌ಗೆ ಕಡಿವಾಣ, ಶೀಘ್ರ ಮರುಪಾವತಿ – GST ಮಂಡಳಿ ಮಹತ್ವದ ಸುಧಾರಣೆ!
ಥೇಟ್ ಫೈಜರ್ ಕಂಪನಿಯ ಲೇಬಲ್‌ನಂತೆಯೇ ಪ್ರಿಂಟ್ ಹಾಕುತ್ತಿದ್ದರು. ಈ ಬಗ್ಗೆ ಎಸ್‌ಐಟಿ ವಿಚಾರಣೆಯಲ್ಲಿ ಪ್ರಶಾಂತ್ ತಪ್ಪೊಪ್ಪಿಕೊಂಡಿದ್ದಾನೆ. 10 ದಿನಗಳ ಕಸ್ಟಡಿಗೆ ಪಡೆದಿರುವ ಎಸ್‌ಐಟಿ ಫುಲ್ ಗ್ರಿಲ್ ಮಾಡುತ್ತಿದ್ದು, ಡಿಸ್ಟಿçಬ್ಯೂಟರ್‌ಗಳ ಮೇಲೆ ಕಣ್ಣುನೆಟ್ಟಿದೆ. ಇದನ್ನೂ ಓದಿ: ನಾನಾ ಪಾಟೇಕರ್‌ಗೆ ಉಡುಪಿಯ ಮುಂಡ್ಕೂರು ನಂಟು

