ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ರಾಕ್ಷಸರು ಮತ್ತು ಗಂಧರ್ವರು ನೆಲೆಸಿದ್ದಾರೆ. ದೊಡ್ಮನೆ ಮಂದಿಗೆ ಬಿಗ್ ಬಾಸ್ ನೀಡಿದ ಸ್ಪೆಷಲ್ ಟಾಸ್ಕ್ ಇದು. ಸೌಮ್ಯ ಸ್ವಭಾವದ ಗಂಧರ್ವರ ಮೇಲೆ ಮೃಗೀಯ ಮನಸ್ಥಿತಿಯ ರಾಕ್ಷಸರ ಅಟ್ಟಹಾಸ ನಡೆದಿದೆ.
ಮೊದಲಿಗೆ ಬಿಗ್ ಬಾಸ್ ಈ ಟಾಸ್ಕ್ ನೀಡಿದಾಗ ಮಾಡರ್ನ್ ಮಹಾಕವಿ ಮಂಜ (Modern Mahakavi Manja) ರಾಕ್ಷಸರ ಗುಂಪಿನ ನಾಯಕನಾಗಿ ಅಟ್ಟಹಾಸ ಮೆರೆದಿದ್ದರು. ಗಂಧರ್ವರ ಬಟ್ಟೆಯನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ, ಮನಸ್ಸಿಗೆ ನಾಟುವಂತಹ ಪದಗಳಿಂದ ಬೈದು, ಕೊಡಬಾರದ ಚಿತ್ರಹಿಂಸೆ ಕೊಟ್ಟಿದ್ದರು. ಗಗನ್ ಚಿನ್ನಪ್ಪ, ಪ್ರಶಾಂತ್, ಜಗ್ಗಿ, ಸೌಂದರ್ಯ, ಸಂಗೀತಾ ಕೂಡ ರಾಕ್ಷಸರಾಗಿ ಅಬ್ಬರಿಸಿದ್ದರು.
ಗಂಧರ್ವ ಲೋಕದಲ್ಲಿದ್ದ ಗಾನವಿ, ತಾಂಡವ್, ಕಾವ್ಯ, ಯಶಸ್, ಕಿರಣ್ ಶಾಸ್ತ್ರಿಗೆ ಟಾರ್ಚರ್ ನೀಡಿದ್ದರು. ಮನೆ ಕ್ಲೀನ್, ಅಡುಗೆ, ತಮ್ಮ ಸೇವೆ ಎಲ್ಲವನ್ನೂ ಗಂಧರ್ವರ ಕೈಲಿ ರಾಕ್ಷಸರು ಮಾಡಿಸಿಕೊಂಡರು. ಅಸಲಿಗೆ ಖಡಕ್ ವ್ಯಕ್ತಿತ್ವದ ಮಂಜನ ರಾಕ್ಷಸ ವರ್ತನೆ ಭಯಾನಕವಾಗಿತ್ತು. ಗಂಧರ್ವರಿಗೆ ಮಂಜನೇ ತಲೆನೋವಾಗಿದ್ದರು.
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/R3syDeZ1Gb
— Colors Kannada (@ColorsKannada) October 8, 2026
ಈ ನಡುವೆ ಬಿಗ್ ಬಾಸ್ ಮತ್ತೊಂದು ಟ್ವಿಸ್ಟ್ ನೀಡಿದಂತಿದೆ. ಗಂಧರ್ವರನ್ನು ರಾಕ್ಷಸರಾಗಿಯೂ, ರಾಕ್ಷಸರರನ್ನು ಗಂಧರ್ವರಾಗಿಯೂ ಬದಲಾಯಿಸಿರುವುದು ಕಲರ್ಸ್ ಕನ್ನಡ ಹಂಚಿಕೊಂಡಿರುವ ಹೊಸ ಪ್ರೋಮೊದಲ್ಲಿ ತಿಳಿದುಬಂದಿದೆ.
ರಾಕ್ಷಸರಾಗಿ ಮಂಜನ ನೇತೃತ್ವದಲ್ಲಿ ತಮಗೆ ನೀಡಿದ ಟಾರ್ಚರ್ ಅನ್ನು ಮರೆಯದ ಗಂಧರ್ವರು, ಈಗ ರಾಕ್ಷಸರಾಗಿ ತಮ್ಮ ಸೇಡನ್ನು ತೀರಿಸಿಕೊಳ್ಳಲು ಹಪಹಪಿಸುತ್ತಿದ್ದಾರೆ. ‘ನಾವು ರಾಕ್ಷಸರಾದ್ರೆ ಮಂಜನ ಮಾತ್ರ ಬಿಡಲ್ಲ’ ಅಂತ ತಾಂಡವ್ ಗುಡುಗಿದ್ದಾರೆ. ಅದರಂತೆ ಗಂಧರ್ವರಾದ ಮಂಜ ಮತ್ತು ಟೀಂ ಅನ್ನು ರಾಕ್ಷಸರಾಗಿ ತಾಂಡವ್ ತಂಡ ಇನ್ನಿಲ್ಲದಂತೆ ಕಾಡಿದೆ.
ರಾಕ್ಷಸರ ಗುಂಪು ಗಂಧರ್ವನಾದ ಮಂಜನನ್ನೇ ಟಾರ್ಗೆಟ್ ಮಾಡಿದಂತಿದೆ. ಎಲ್ಲರೂ ಸೇರಿಕೊಂಡು ಮಂಜನನ್ನು ಹಿಂಡಿಹಿಪ್ಪೆ ಮಾಡಿದ್ದಾರೆ. ಮಂಜನ ಮೇಲೆ ಯಶಸ್, ಕಾವ್ಯ, ಕಿರಣ್ ಶಾಸ್ತ್ರಿ ದರ್ಪ ತೋರಿದ್ದಾರೆ. ಒಳಗೊಳಗೆ ಕೊತಕೊತ ಕುದಿಯುತ್ತಿರುವ ಮಂಜ ಎಲ್ಲವನ್ನೂ ಸಹಿಸಿಕೊಂಡು ಗಂಧರ್ವನಾಗಿದ್ದಾನೆ. ಹಾಗಾದ್ರೆ, ರಾಕ್ಷಸರೆಲ್ಲ ಸೇರಿಕೊಂಡು ಗಂಧರ್ವ ಮಂಜನಿಗೆ ಏನೆಲ್ಲ ಹಿಂಸೆ ಕೊಟ್ಟರು ಎಂಬುದು ಸದ್ಯದ ಕುತೂಹಲವಾಗಿದೆ.

