ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ವರ್ಗವಾರು ಮೀಸಲಾತಿ ಅಧಿಸೂಚನೆಯನ್ನು ರಾಜ್ಯ ಪಂಚಾಯತ್ ರಾಜ್ ಇಲಾಖೆ ಪ್ರಕಟಿಸಿದೆ.
31 ಜಿಲ್ಲೆಗಳಿಗೆ ಎಸ್‌ಸಿ, ಎಸ್‌ಟಿ, ಓಬಿಸಿ ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿದ ಸ್ಥಾನಗಳ ಅಧಿಸೂಚನೆಯನ್ನು ಸರ್ಕಾರ ಪ್ರಕಟಿಸಿದೆ. ರಾಜ್ಯದಲ್ಲಿ ಒಟ್ಟು 1,129 ಜಿಲ್ಲಾ ಪಂಚಾಯತ್ ಸ್ಥಾನಗಳಿವೆ.
ಎಸ್‌ಸಿ ವರ್ಗ: 225
ಎಸ್‌ಟಿ ವರ್ಗ: 102
ಹಿಂದುಳಿದ ವರ್ಗ ಎ: 183
ಹಿಂದುಳಿದ ವರ್ಗ ಬಿ: 43
ಸಾಮಾನ್ಯ ವರ್ಗ: 576
ಅಂತೆಯೇ, ಒಟ್ಟು 3,656 ತಾಲೂಕು ಪಂಚಾಯಿತಿ ಸದಸ್ಯ ಸ್ಥಾನಗಳಿವೆ.
ಎಸ್‌ಸಿ: 733
ಎಸ್‌ಟಿ: 394
ಹಿಂದುಳಿದ ವರ್ಗ ಎ: 508
ಹಿಂದುಳಿದ ವರ್ಗ ಬಿ: 111
ಸಾಮಾನ್ಯ ವರ್ಗ: 1910

