ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ರಾಹು ಕಾಲ ಬಂದಿದೆ. ಅದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಪ್ರತಿಭಟನೆಗೆ ಅರ್ಥವಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ವ್ಯಂಗ್ಯವಾಡಿದ್ದಾರೆ.
ಚಿತ್ರದುರ್ಗದಲ್ಲಿ ಬಿಜೆಪಿಯಿಂದ ನಡೆದ ಸೇವಾ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣಾ ಆಯೋಗದ (ECI) ಮುಖ್ಯಸ್ಥರನ್ನು ತೆಗೆಯಲು ನಿಯಮಗಳಿವೆ. ನಾನು ಡಿಕೆಶಿ ವಿರುದ್ಧ ಭ್ರಷ್ಟಾಚಾರ ಹೆಚ್ಚಳ ಆರೋಪ ಮಾಡುತ್ತೇನೆ. ಡಿಕೆಶಿ ಸಿಎಂ ಸ್ಥಾನದಿಂದ ಇಳಿಯಬೇಕೆಂದು ರೋಡಲ್ಲಿ ಕೂಗಿದರೆ ಸಿಎಂ ಸ್ಥಾನದಿಂದ ಡಿಕೆಶಿ ಇಳಿಸಿಬಿಡುತ್ತೀರಾ? ವಿಧಾನಸಭೆಯಲ್ಲಿ ನಮ್ಮ ಬಹುಮತ ಸಾಬೀತಾದರೆ ಡಿಕೆಶಿ ಇಳಿಯುತ್ತಾರೆ. ರಸ್ತೆಯಲ್ಲಿ ಕೂಗಾಟ, ಚೀರಾಟ ಉಪಯೋಗ ಆಗಲ್ಲ. ಅದು ಸಂವಿಧಾನಾತ್ಮಕ ನಡೆ ಆಗಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ಭೇಟಿ ನೀಡಿದ್ದಕ್ಕೆ ಕೊಹ್ಲಿಗೆ ಸಿಕ್ತಾ 5 ಕೋಟಿ?
ಚುನಾವಣ ಆಯೋಗ ಸ್ವತಂತ್ರ ಸಂಸ್ಥೆ. ಹಿಂದೆ ನೆಹರು, ಇಂದಿರಾಗಾಂಧಿ ಅವರೆಲ್ಲ ರಚನೆ ಮಾಡಿರೋದು. ಹಿಂದೆ ರಾಹುಲ್ ಗಾಂಧಿಗೆ ನಯಾಪೈಸೆ ಬೆಲೆ ಇರಲಿಲ್ಲ. ಈಗ ಕಾಕ್ರೋಚ್ ಪಾರ್ಟಿ ಮೇಲೆ ಸವಾರಿ ಮಾಡಿದರೆ ರೀಚಾಗುವ ಹಂಬಲ. ಸಾಂವಿಧಾನಿಕ ಸಂಸ್ಥೆಗಳಿಗೆ ರಾಹುಲ್ ಗಾಂಧಿ ಅಗೌರವ ತೋರಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಆಗ ಚುನಾವಣೆ ಸರಿಯಿತ್ತಾ? ಸರಿಯಿಲ್ಲದಿದ್ದರೆ ರಾಜೀನಾಮೆ ಕೊಡಿ. ಮತ್ತೆ ಚುನಾವಣೆಗೆ ಹೋಗೋಣ ಎಂದು ಸವಾಲೆಸೆದರು. ಇದನ್ನೂ ಓದಿ: SIR ವಿವಾದ| ವಿಜಯ್‌ಗೆ ಹೆದರುತ್ತಿದ್ದೀರಾ?- ರಾಹುಲ್ ಮೌನ, ದ್ವಂದ್ವ ನೀತಿಗೆ ಡಿಎಂಕೆ ಆಕ್ರೋಶ
ತೆಲಂಗಾಣದಲ್ಲಿ ಚುನಾವಣೆ ನಡೆದಿದೆ. ಎಸ್‌ಐಆರ್ ಆದ ಬಳಿಕ ಕೇರಳದಲ್ಲಿ ಚುನಾವಣೆ ನಡೆದಿದೆ. ಕೇರಳದಲ್ಲಿ ಬಿಜೆಪಿ ಬಂದಿಲ್ಲ, ಬಹುಮತ ಪಡೆದಿದ್ದಾರಲ್ಲ. ಅಕ್ರಮ ಮಾಡುವಂತಿದ್ದರೆ ಬಿಜೆಪಿ ಬಹುಮತ ಗಳಿಸಬಹುದಿತ್ತು. ಕಾಂಗ್ರೆಸ್ ಗೆಲುವಾದಾಗ ಚುನಾವಣೆ ಆಯೋಗ ಭರ್ಜರಿ. ಕಾಂಗ್ರೆಸ್ ಸೋತಲ್ಲಿ ಚುನಾವಣೆ ಆಯೋಗ ಸರಿಯಿಲ್ಲ ಅಂತಾರೆ. ಇದು ರಾಹುಲ್ ಗಾಂಧಿಯ ರಾಹುಕಾಲದ ಕಥೆ. ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ. ಇಡಿ, ಸಿಬಿಐ, ಚುನಾವಣೆ ಆಯೋಗ ಬಿಜೆಪಿ ಏಜೆಂಟ್ ಅಂತೀರಿ. ಕೆಪಿಎಸ್‌ಸಿ ಬಗ್ಗೆ ಹೈಕೋರ್ಟ್ ತೀರ್ಪು ಸರಿಯಿಲ್ಲ ಎಂದು ಹೇಳಿದ್ದೀರಿ. ತ್ರಿವಳಿ ತಲಾಖ್ ಬಗ್ಗೆ ಸುಪ್ರೀಕೋರ್ಟ್ ತೀರ್ಪು ಸರಿಯಿಲ್ಲ ಅಂತ ಹೇಳಿದ್ದೀರಿ. ರಾಜ್ಯ, ದೇಶದ ಜನ ಕಾಂಗ್ರೆಸ್ ತಿರಸ್ಕಾರ ಮಾಡಿದ್ದಾರೆ. ತೆಲಂಗಾಣ, ಕರ್ನಾಟಕದಲ್ಲಿ ಮುಂದೆ ಕಾಂಗ್ರೆಸ್‌ಗೆ ಗೋವಿಂದ ಗ್ಯಾರಂಟಿ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ತಾಯಿ, 3 ವರ್ಷದ ಮಗು ಸಾವು

