ಬಾಲಿವುಡ್ನ ಜನಪ್ರಿಯ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ಸುದ್ದಿಯನ್ನು ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ವಿಶೇಷ ಘೋಷಣೆಯಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಹೊಸ ಜೋಡಿ ಬೇಬಿ ಶೂಸ್ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅವರ ಮೊದಲ ಮಗಳು ಸಾರಾಯ ಕೂಡ ಇದ್ದಾಳೆ. ಕಳೆದ ವರ್ಷ ತಮ್ಮ ಮೊದಲ ಮಗುವಿನ ಆಗಮನದ ಸುದ್ದಿಯನ್ನು ಘೋಷಿಸಿದ್ದ ರೀತಿಯಲ್ಲೇ ಈ ಬಾರಿಯೂ ಕ್ಯೂಟ್ ಆಗಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.
“ಎಲ್ಲಕ್ಕಿಂತ ದೊಡ್ಡ ಉಡುಗೊರೆಯಿಂದ ಮತ್ತೊಮ್ಮೆ ಆಶೀರ್ವದಿಸಲ್ಪಟ್ಟಿದ್ದೇವೆ. ಎಂದು ಕಿಯಾರಾ ಸಿದ್ಧಾರ್ಥ್ ಪೋಸ್ಟ್ಗೆ ಕ್ಯಾಪ್ಷನ್ ನೀಡಿದ್ದಾರೆ.
ಪೋಸ್ಟ್ ಹೊರಬರುತ್ತಿದ್ದಂತೆ ಕಿಯಾರಾ ಮತ್ತು ಸಿದ್ಧಾರ್ಥ್ಗೆ ಅಭಿಮಾನಿಗಳು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ನಿರ್ದೇಶಕ ಕರಣ್ ಜೋಹರ್ “ಲವ್ ಲವ್ ಯು” ಎಂದು ಕಾಮೆಂಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವೇದಾವತಿ ನದಿಯಲ್ಲಿ ಈಜಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು
ನಟಿ ಭೂಮಿ ಪೆಡ್ನೇಕರ್ ಮತ್ತು ಕೊರಿಯೋಗ್ರಾಫರ್ ಬಾಸ್ಕೋ ಮಾರ್ಟಿಸ್ ರೆಡ್ ಹಾರ್ಟ್ ಎಮೋಜಿಗಳ ಮೂಲಕ ಶುಭಾಶಯ ತಿಳಿಸಿದ್ದಾರೆ. ಆಲಿಯಾ ಭಟ್, ಅನಿಲ್ ಕಪೂರ್, ಅನನ್ಯಾ ಪಾಂಡೆ, ಯಾಮಿ ಗೌತಮ್ ಧಾರ್, ನೀನಾ ಗುಪ್ತಾ ಮತ್ತು ಅಥಿಯಾ ಶೆಟ್ಟಿ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಪೋಸ್ಟ್ಗೆ ಲೈಕ್ ಮಾಡುವ ಮೂಲಕ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಪೂರೈಸಿದ ಮೋದಿ: ದೆಹಲಿಯ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

