ಬೆಂಗಳೂರು: ನನಗೆ ಮದ ಅಂತ ಹೇಳುತ್ತಾರೆ. ಮದ ಇಳಿಸಲಿ ಯಾರು ಬೇಡ ಅಂದರು. ಮದ ನನಗೆ ಇದ್ದರೆ ಇಳಿಸಲಿ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ.
ಲಿಂಗಾಯತ ಸ್ವಾಮೀಜಿಗಳು (Lingayat Swamiji) ನನ್ನ ಸೇವೆ ಮಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಸಿಎಂ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ನನ್ನ ಹೇಳಿಕೆ ತಿರುಚಲಾಗಿದೆ. ನನ್ನ ಸೇವೆ ಮಾಡಬೇಕು ಅಂತ ನಾನು ಸ್ವಾಮೀಜಿಗಳಿಗೆ ಹೇಳಿಲ್ಲ. ಯಾವ ಸ್ವಾಮೀಜಿಗೂ ನಾನು ಅಗೌರವ ತೋರಿಸಿಲ್ಲ. ನಾನು ಜನರಿಗೆ, ಮತದಾರರಿಗೆ ಅದನ್ನ ಹೇಳಿದ್ದು. ಸ್ವಾಮೀಜಿಗಳಿಗೆ ನಾನು ಹೇಳಿಲ್ಲ. ಅವರ ಪ್ರತಿನಿಧಿಗಳಿಗೆ, ಮತದಾರರಿಗೆ ನಮ್ಮ ಸೇವೆ ಮಾಡಬೇಕು, ನಮ್ಮ ರಕ್ಷಣೆ ಮಾಡಬೇಕು ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕದ ಬಿಜೆಪಿ ನಾಯಕರು ಕುತಂತ್ರ ರಾಜಕಾರಣ ಮಾಡ್ತಾ ಇದ್ದಾರೆ: ಡಿ.ಕೆ.ಶಿವಕುಮಾರ್
ನನಗೆ ಮಠಗಳು, ಸ್ವಾಮೀಜಿಗಳ ಮೇಲೆ ಗೌರವ ಈ ರಾಜ್ಯದಲ್ಲಿ ಯಾರಿಗೆ ಇದೆಯೋ ಗೊತ್ತಿಲ್ಲ.ನನಗೆ ಅವರ ಮೇಲೆ ಗೌರವ ಇದೆ. ಪಂಚಪೀಠದವರು ಎಲ್ಲರು ಬಂದಿದ್ದರು. ಪ್ರತಿ ಸಮಯದಲ್ಲೂ ಅವರ ಪಾದಗಳಿಗೆ ನಮಸ್ಕಾರ ಮಾಡಿದ್ದೇನೆ, ನಾನು ದೊಡ್ಡ ಭಕ್ತ. ದೈವರ ಮೇಲೆ ನಂಬಿಕೆ ಇರೋನು. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ಶಾಂತಿ ಅಂತ ಎಲ್ಲಾ ಜಾತಿ, ಧರ್ಮಕ್ಕೆ ಗೌರವ ಕೊಡುತ್ತಿದ್ದೇನೆ. ಎಲ್ಲರು ಒಂದೇ ಎಂಬ ಭಾವನೆಯಿಂದ ರಾಜಕೀಯ ಶುರು ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಮತ್ತೆ ಲಾಂಚ್ ಮಾಡಲು ಕಾಂಗ್ರೆಸ್‌ನಿಂದ ಪ್ರತಿಭಟನೆ: ಸುಧಾಂಶು ತ್ರಿವೇದಿ

