ನವದೆಹಲಿ: ಚುನಾವಣೆಗಳಲ್ಲಿ ನಿರಂತರವಾಗಿ ಸೋತು ಹತಾಶಗೊಂಡಿರುವ ಕಾಂಗ್ರೆಸ್ ರಾಹುಲ್ ಗಾಂಧಿ(Rahul Gandhi) ಅವರನ್ನು ಮತ್ತೆ ಲಾಂಚ್ ಮಾಡಲು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ ಎಂದು ಬಿಜೆಪಿ(BJP) ವಕ್ತಾರ ಸುಧಾಂಶು ತ್ರಿವೇದಿ(Sudhanshu Trivedi) ಕಿಡಿ ಕಾರಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳ INDIA ಮೈತ್ರಿಕೂಟದ ನಾಯಕರು ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಸುಧಾಂಶು ತ್ರಿವೇದಿ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಯಾವುದೇ ದೃಢೀಕರಣ ಅಥವಾ ಪರಿಶೀಲನೆ ಇಲ್ಲದೆ ಅಸ್ತಿತ್ವದಲ್ಲೇ ಇಲ್ಲದ, ಸ್ಥಳಾಂತರಗೊಂಡಿರುವ, ಮೃತಪಟ್ಟಿರುವ ಹಾಗೂ ನಕಲಿ ಮತದಾರರಿಗೆ ಮತದಾನದ ಹಕ್ಕನ್ನು ಉಳಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಯಾರಿಗೆ ಅನುಕೂಲ ಮಾಡಿಕೊಡಲು ಬಯಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಹುನ್ನಾರದ ಹಿಂದಿರುವ ಕಾಂಗ್ರೆಸ್‌ನ ಅಸಲಿ ಉದ್ದೇಶವೇನು ಎಂದು ಪ್ರಶ್ನಿಸಿದರು.
Delhi: BJP MP Sudhanshu Trivedi says, “Rahul Gandhi himself and many of his senior leaders have said that there is voter duplication at several places. Abhishek Manu Singhvi has also been saying this, as have Ashok Gehlot, Sachin Pilot and many other prominent leaders. K.C. Venugopal has also been saying this. So, we want to ask them: Were you right in 2016, 2018, 2020 and 2021, or are you right today? The Congress should clarify whether it was telling the truth then or is telling the truth today…”
— IANS (@ians_india) October 6, 2026
ಹಿಂದೆ ನಕಲಿ ಮತದಾರರ ಬಗ್ಗೆ ಕಾಂಗ್ರೆಸ್ ನಾಯಕರೇ ನೀಡಿದ್ದ ಹೇಳಿಕೆಗಳನ್ನು ನೆನಪಿಸಿದ ತ್ರಿವೇದಿ, ರಾಹುಲ್ ಗಾಂಧಿ, ಅಭಿಷೇಕ್ ಮನು ಸಿಂಘ್ವಿ, ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಹಾಗೂ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್‌ನ ಹಲವು ಪ್ರಮುಖ ನಾಯಕರು ಹಲವೆಡೆ ನಕಲಿ ಮತದಾರರಿದ್ದಾರೆ ಎಂದು ಈ ಹಿಂದೆ ಬಹಿರಂಗವಾಗಿ ಹೇಳಿದ್ದರು. ಹಾಗಾದರೆ 2016, 2018, 2020 ಮತ್ತು 2021ರಲ್ಲಿ ನೀವು ಹೇಳಿದ್ದು ಸತ್ಯವೋ? ಅಥವಾ ಇಂದು ನೀವು ಹೇಳುತ್ತಿರುವುದು ಸತ್ಯವೋ? ಅಂದು ಸತ್ಯ ಹೇಳುತ್ತಿದ್ದಿರಾ ಅಥವಾ ಇಂದು ಸತ್ಯ ಹೇಳುತ್ತಿದ್ದೀರಾ ಎಂಬುದನ್ನು ಕಾಂಗ್ರೆಸ್ ದೇಶದ ಜನರಿಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: Live Updates |ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಬೀದಿಗಿಳಿದ INDIA ಸಂಸದರು
ವಿರೋಧ ಪಕ್ಷದ ಪ್ರಥಮ ಕುಟುಂಬವು ಕಳೆದ ನಾಲ್ಕು ತಲೆಮಾರುಗಳಿಂದ ಪ್ರಜಾಪ್ರಭುತ್ವದ ಮುಖವಾಡ ಧರಿಸಿ, ವಾಸ್ತವದಲ್ಲಿ ಅದರ ಕತ್ತು ಹಿಸುಕಿ ವಂಶಪಾರಂಪರ್ಯ ಆಡಳಿತವನ್ನು ನಡೆಸಿದೆ. ಈಗ ಅವರು ಆಕಾಶವಾಣಿಯನ್ನೂಅತಿಕ್ರಮಿಸಲು ಯತ್ನಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

