ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳ ‘ಇಂಡಿಯಾ’ (INDIA) ಮೈತ್ರಿಕೂಟದ ಸಂಸದರು ಮಂಗಳವಾರ ಬೆಳಗ್ಗೆ ಸಂಸತ್ ಭವನದಿಂದ ಚುನಾವಣಾ ಆಯೋಗದ ಕೇಂದ್ರ ಕಚೇರಿಯಾದ ‘ನಿರ್ವಾಚನ್ ಸದನ’ದವರೆಗೆ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದವು. ಪ್ರತಿಭಟನಾ ಯಾತ್ರೆಯನ್ನು ಮಧ್ಯದಲ್ಲೇ ತಡೆದ ಪೊಲೀಸರು ಸಂಸರನ್ನು ವಶಕ್ಕೆ ಪಡೆದಿದ್ದಾರೆ.
ಆಕಾಶವಾಣಿ ಭವನ ಪ್ರವೇಶಿಸಿದ ರಾಹುಲ್
ಬಸ್ಸಿನಿಂದ ಇಳಿದು ಆಕಾಶವಾಣಿ ಭವನ ಪ್ರವೇಶಿಸಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ. ಗೇಟ್ 4ರ ಬಳಿಯ ಆಲದ ಮರದ ಕೆಳಗೆ ಕುಳಿತಿರುವ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ದೀಪೇಂದರ್ ಹೂಡಾ. ರಾಹುಲ್ ಜೊತೆ ಸೆಲ್ಫೀ ತೆಗೆದುಕೊಂಡ ಆಕಾಶವಾಣಿ ಸಿಬ್ಬಂದಿ. ರಾಹುಲ್ ಸುತ್ತುವರಿದವರನ್ನು ಕಳುಹಿಸಿದ ಪೊಲೀಸರು.
ಸಂಸದರು ವಶಕ್ಕೆ
ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಸೇರಿದಂತೆ INDIA ಒಕ್ಕೂಟದ ಸಂಸತ್ ಸದಸ್ಯರನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಡಿ ಸಂಸದರು ಭಾಗಿ
ಎಸ್‌ಐಆರ್ (SIR) ಮತ್ತು ಮತದಾರರ ಹೆಸರುಗಳ ಕೈಬಿಡುವಿಕೆ ವಿಷಯದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಪಕ್ಷಗಳ ಪ್ರತಿಭಟನಾ ಮೆರವಣಿಗೆಯಲ್ಲಿ ಬಿಜೆಡಿ ಸಂಸದರು ಭಾಗಿ.
ಪೊಲೀಸರ ಜೊತೆ ವಾಗ್ವಾದ
ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ ನಡೆಸಲು ಅನುಮತಿ ಕೋರಿ ಪೊಲೀಸರೊಂದಿಗೆ ಡೆರೆಕ್ ಓ’ಬ್ರಿಯನ್ ಮತ್ತು ಕೆ.ಸಿ. ವೇಣುಗೋಪಾಲ್ ವಾಗ್ವಾದ
ಮೋದಿ, ಶಾ ಕೈಗೊಂಬೆ
“ನಾವು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದೇವೆ… ಸ್ವಾತಂತ್ರ್ಯದ ನಂತರ ನಮಗೆ ಲಭಿಸಿದ ವಯಸ್ಕರ ಮತದಾನದ ಹಕ್ಕನ್ನು ಇಲ್ಲವಾಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಮುಖ್ಯ ಚುನಾವಣಾ ಆಯುಕ್ತರು ಸರ್ಕಾರದ ಕೈಗೊಂಬೆಯಾಗಿದ್ದಾರೆ. ಮೋದಿ ಮತ್ತು ಶಾ ಏನು ಹೇಳುತ್ತಾರೋ ಅವರು ಅದನ್ನೇ ಮಾಡುತ್ತಾರೆ… ಇದು ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ… ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ” – ಮಲ್ಲಿಕಾರ್ಜುನ ಖರ್ಗೆ
ಎಸ್‌ಐಆರ್ ಪ್ರಕ್ರಿಯೆ ಅಕ್ರಮ
“ಭಾರತೀಯ ಚುನಾವಣಾ ಆಯೋಗವು ಕೈಗೊಂಡಿರುವ ‘ಎಸ್‌ಐಆರ್’ (SIR) ಪ್ರಕ್ರಿಯೆಯು ನಮ್ಮ ನಾಗರಿಕರನ್ನು ಅವರ ಮೂಲಭೂತ ಹಕ್ಕಿನಿಂದ ವಂಚಿತರನ್ನಾಗಿಸುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಮತದಾರರ ಹೆಸರನ್ನು ತೆಗೆದುಹಾಕಲು 7,000 ನಮೂನೆ 7 ಅರ್ಜಿಗಳನ್ನು ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಇದು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ. ಮತದಾರರ ಪಟ್ಟಿಯೇ ದೋಷಪೂರಿತವಾಗಿದ್ದರೆ, ಆ ದೋಷಪೂರಿತ ಪಟ್ಟಿಯಿಂದ ಬರುವ ಫಲಿತಾಂಶಗಳು ಕೂಡ ಪ್ರಶ್ನಾರ್ಹವಾಗುತ್ತವೆ. ಆದ್ದರಿಂದ, ಚುನಾವಣಾ ಆಯೋಗವು ತಕ್ಷಣವೇ ತನ್ನನ್ನು ತಾನು ಸುಧಾರಿಸಿಕೊಳ್ಳಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು” – ಕಾರ್ತಿ ಚಿದಂಬರಂ
ರಾಜೀನಾಮೆ ನೀಡಲೇಬೇಕು
ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲೇಬೇಕು. ನಮ್ಮ ಹೋರಾಟದಿಂದ ಯಾವುದೇ ಕಾರಣಕ್ಕೂ ನಾನು ಹಿಂದೆ ಸರಿಯುವುದಿಲ್ಲ: ಪ್ರಿಯಾಂಕಾ ವಾದ್ರಾ ಗುಡುಗು
ಪ್ರಜಾಪ್ರಭುತ್ವ ರಕ್ಷಿಸಿ
ಕೈಯಲ್ಲಿ ಪ್ರಜಾಭುತ್ವ ರಕ್ಷಿಸಿ ಪ್ಲೇ ಕಾರ್ಡ್ ಹಿಡಿದು ಸಾಗುತ್ತಿರುವ ಸಂಸದರು

