ಬೆಂಗಳೂರು: ರಾಜ್ಯದಲ್ಲಿ ನಕಲಿ ಔಷಧ ಜಾಲ (Fake Medicine) ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಡಿಎ ಆಯುಕ್ತರು ಫೈಜರ್ ಕಂಪನಿಯ ಪ್ರಧಾನ ಕಚೇರಿಗೆ 48 ಗಂಟೆಗಳ ಡೆಡ್‌ಲೈನ್ ನೀಡಿದ್ದಾರೆ.
ಬಿಡದಿ ಸಮೀಪ ಪತ್ತೆಯಾದ ನಕಲಿ ಔಷಧಿಗಳಲ್ಲಿ ಫೈಜರ್ ಕಂಪನಿಯ ಔಷಧಿಗಳು ಪತ್ತೆಯಾಗಿವೆ. ಆದರೆ ಭಾರತದಲ್ಲಿ ಇರುವ ಫೈಜರ್ ಕಂಪನಿ ತನಿಖೆಗೆ ಅಸಹಕಾರ, ಸೂಕ್ತ ದಾಖಲೆಗಳು ಮತ್ತು ಸೂಕ್ತ ಮಾಹಿತಿ ಒದಗಿಸುತ್ತಿಲ್ಲ. ಹೀಗಾಗಿ ನ್ಯೂಯಾರ್ಕ್‌ನಲ್ಲಿ ಇರುವ ಫೈಜರ್ ಕಂಪನಿಯ ಪ್ರಧಾನ ಕಚೇರಿಗೆ ಎಫ್‌ಡಿಎ ಆಯುಕ್ತ ಶ್ರೀನಿವಾಸ್ ಅವರು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸೌಜನ್ಯ ಅತ್ಯಾಚಾರ & ಕೊಲೆ ಕೇಸ್; ತನಿಖಾಧಿಕಾರಿಯಾಗಿ ಓರ್ವ ಹಿರಿಯ IPS ಅಧಿಕಾರಿ ನೇಮಕ
ಪತ್ರದಲ್ಲೇನಿದೆ?
ಬಿಡದಿ ಸಮೀಪ ಪತ್ತೆಯಾದ ನಕಲಿ ಔಷಧಿಗಳಲ್ಲಿ ತಮ್ಮ ಕಂಪನಿಯ ಔಷಧಿಗಳು ಪತ್ತೆಯಾಗಿವೆ. ಜೊತೆಗೆ ಫೈಜರ್ ಕಂಪನಿಯ ನಕಲಿ ಔಷಧಿಗಳು ತಯಾರಿಸುತ್ತಿದ್ದ ಅಕ್ರಮ ಘಟಕ ಪತ್ತೆಯಾಗಿದೆ. ಈ ಸಂಬಂಧ ಭಾರತದಲ್ಲಿ ಇರುವ ಫೈಜರ್ ಕಂಪನಿಗೆ ದಾಖಲೆಗಳನ್ನು ಕೇಳಿದ್ರೆ ಕೊಡುತಿಲ್ಲ. ತನಿಖೆಗೆ ಅಸಹಕಾರ ತೋರಿಸ್ತಿದೆ. ಹೀಗಾಗಿ ತನಿಖೆಗೆ ಸಹಕಾರ ನೀಡಿ, ದಾಖಲಾತಿಗಳನ್ನ ಸಲ್ಲಿಸಿ. ಅಸಲಿ ಔಷಧಿ ಜೊತೆ ನಕಲಿ ಮಿಕ್ಸ್ ಪತ್ತೆ ಹಚ್ಚುವುದೇ ಕಷ್ಟ ಆಗಿದೆ.
ಫೈಜರ್ ಕಂಪನಿಯ ಔಷಧಗಳ ಮಾರಾಟ, ಸರಬರಾಜು ನಕಲಿ ಔಷಧಿಗಳ ವಿತ್ ಡ್ರಾ ಮಾಹಿತಿ ನೀಡ್ತಿಲ್ಲ. ಒಂದು ತಿಂಗಳಾದ್ರು ಪೈಜರ್ ಕಂಪನಿ ದಾಖಲೆಗಳನ್ನು ನೀಡಿಲ್ಲ, ಸಹಕರಿಸಿಲ್ಲ. ಇದನ್ನೂ ಓದಿ: ಗಾಂಧಿ ಜಯಂತಿ; ರಾಜಘಾಟ್‌ನಲ್ಲಿ ಮೋದಿ ಗೌರವ
ಫೈಜರ್‌ಗೆ ನೀಡಿದ 3 ತುರ್ತು ನಿರ್ದೇಶನಗಳು:
1.ತಕ್ಷಣದ ಡೇಟಾ ಸಲ್ಲಿಕೆ ಮಾಡಿ. ಭಾರತದಲ್ಲಿ ಇರುವ ಫೈಜರ್ ಸಂಸ್ಥೆಗೆ ಔಷಧಿಗಳ ಸರಬರಾಜು, ಎಲ್ಲೆಲ್ಲಿ ಮಾರಾಟ ಆಗಿದೆ, ವಿತ್ ಡ್ರಾ ಎಲ್ಲಿ ಆಗಿದೆ ಅಂತಾ 48 ಗಂಟೆಗಳ ಒಳಗಡೆ ಮಾಹಿತಿ ನೀಡಲು ಸೂಚನೆ
2.ಆಸ್ಪತ್ರೆಗಳು ಮತ್ತು ಹೋಲ್ ಸೇಲ್‌ಗಳಲ್ಲಿ ಅಸಲಿ ಸ್ಟಾಕ್ ಅನ್ನು ನಕಲಿ ಸ್ಟಾಕ್ ಪತ್ತೆಹಚ್ಚಲು ಭಾರತೀಯ ಸಂಸ್ಥೆಗೆ ನಿರ್ದೇಶಿಸಿ
3. ನಕಲಿ ಔಷಧಿಗಳು ಕ್ಲಿನಿಕ್‌ಗೆ ಸರಬರಾಜು ಆಗಲು ಸಹಕರಿಸಿದ ನಿಮ್ಮ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಆಗಬೇಕು. ಇದನ್ನೂ ಓದಿ: ‘ನನ್ನನ್ನು ಕೊಂದುಬಿಡಿ..’: ಸಹ-ಪೈಲಟ್ ಇಸ್ಲಾಮಿಸ್ಟ್ ಉಗ್ರಗಾಮಿ ಸಿದ್ಧಾಂತ ಪ್ರಭಾವಕ್ಕೆ ಒಳಗಾಗಿದ್ದ ಎಂದ ನೆತನ್ಯಾಹು

