ಬೆಂಗಳೂರು: ಬಿಟ್ ಕಾಯಿನ್ (Bit Coin) ಹಗರಣ ಸಂಬಂಧ ಇಡಿ (ED) ಅಧಿಕಾರಿಗಳಿಂದ ಬಂಧಿತರಾಗಿದ್ದ ಆರೋಪಿ ಶ್ರೀಕಿ ಮತ್ತು ರಾಬಿನ್ ಖಂಡೇಲವಾಲಗೆ ಜಾಮೀನು (Bail) ಮಂಜೂರು ಮಾಡಲಾಗಿದೆ.
ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠದ ಮುಂದೆ ಜಾಮೀನು ಅರ್ಜಿ ವಿಚಾರಣೆಗೆ ಬಂದಿತ್ತು. ಇಡಿ ಪರ ವಕೀಲ ಮಧು ಎನ್ ರಾವ್ ವಾದ ಮಂಡಿಸಿ ಆರೋಪಿಗಳು, ಹ್ಯಾಕ್ ಮಾಡಿ ಸಂಗ್ರಹಿಸಿದ ಹಣದಲ್ಲಿ ಐಷಾರಾಮಿ ಬದುಕಿಗೆ ವೆಚ್ಚ ಮಾಡಿದ್ದಾರೆ. ಡಾರ್ಕ್ ವೆಬ್ ಮೂಲಕ ಹಣ ವರ್ಗಾಯಿಸಿರುವ ಆರೋಪವಿದೆ, ಇದು ತನಿಖೆ ಹಂತದಲ್ಲಿದೆ ಈಗ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು. ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ಇಂಡಿ ಒಕ್ಕೂಟದಿಂದ ಅ.2ರಿಂದ 8ರವರೆಗೆ `ಪ್ರಜಾಪ್ರಭುತ್ವ ಉಳಿಸಿ’ ಜಾಥಾ
ಇದೇ ವೇಳೆ ಆರೋಪಿಗಳ ಪರ ವಕೀಲ ಬಿಪಿನ್ ಹೆಗ್ಡೆ, ಮತ್ತು ಸಂದೇಶ್ ಚೌಟ ವಾದ ಮಂಡಿಸಿ, ಆರೋಪಿಗಳಿಂದ ಇಡಿ ಅಧಿಕಾರಿಗಳು ಏನನ್ನೂ ಜಪ್ತಿ ಮಾಡಿಕೊಂಡಿಲ್ಲ. ನೋಟಿಸ್ ನೀಡಿದಾಗೆಲ್ಲಾ ವಿಚಾರಣೆಗೆ ಹಾಜರಾಗಿದ್ದಾರೆ. ಹಲವು ದಿನಗಳಿಂದ ಜೈಲಿನಲ್ಲಿದ್ದಾರೆ. ಜಾಮೀನು ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: 2,700 ಬೆಲೆಯ ಕ್ಯಾನ್ಸರ್ ಔಷಧಿಗೆ 27,000 ರೂ. ನಿಗದಿ: ಇದು ಹಗಲು ದರೋಡೆ ಅಲ್ಲದೆ ಮತ್ತೇನು?: ಸುಪ್ರೀಂ ಕೆಂಡಾಮಂಡಲ
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಇಬ್ಬರಿಗೂ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಜಯಂತಿ ಬಳಿಕ ಉರ್ದು ಹಬ್ಬ- ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ

