ಬೆಂಗಳೂರು: ಬೆಂಗಳೂರು ನಗರದ ಹೊರವಲಯದಲ್ಲಿ ಕಾರ್ಮಿಕನನ್ನು ಬಲಿ ತೆಗೆದುಕೊಂಡ ಕಾಡಾನೆಯನ್ನು ಅರಣ್ಯಕ್ಕೆ ಕಳುಹಿಸುವ ಕಾರ್ಯಾಚರಣೆ ಸಕ್ಸಸ್ ಆಗಿದೆ. ಆನೆಯನ್ನು ವಾಪಸ್ ಬನ್ನೇರುಘಟ್ಟ ಅರಣ್ಯಕ್ಕೆ (Bannerghatta Forest) ಕಳುಹಿಸಲಾಗಿದೆ.
ಅಧಿಕಾರಿಗಳು ರಾತ್ರಿ ಥರ್ಮಲ್ ಡ್ರೋನ್ ಕಾರ್ಯಾಚರಣೆ ಮಾಡಿದ್ದಾರೆ. ಬಿಎಂ ಕಾವಲು ಅರಣ್ಯದಲ್ಲಿ ಒಂಟಿ ಸಲಗ ಇತ್ತು. ಎಲಿಫೆಂಟ್ ಕಾರಿಡಾರ್ ಮೂಲಕ ಆನೆಯನ್ನು ಬನ್ನೇರುಘಟ್ಟಕ್ಕೆ ಓಡಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಆರ್.ಆರ್ ಮೆಡಿಕಲ್ ಕಾಲೇಜು ಹಿಂಭಾಗ ಆನೆ ದಾಳಿ – ವ್ಯಕ್ತಿ ಸಾವು
ಬಿಎಂ ಕಾವಲು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡಾನೆ ಅಡಗಿತ್ತು. ಆನೆ ಜಾಡು ಹಿಡಿದು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಡಿಸಿಎಫ್ ಚಕ್ರಪಾಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಗೆ 2 ಥರ್ಮಲ್ ಡ್ರೋನ್, 100 ಕ್ಕೂ ಅಧಿಕ ಸಿಬ್ಬಂದಿ ಬಳಕೆ ಮಾಡಲಾಗಿತ್ತು. ಬಿಎಂ ಕಾವಲು ಅರಣ್ಯದಿಂದ ಟಿಕೆ ಫಾರೆಸ್ಟ್ ಆನೆ ಪಥ ಸಂಚಾರದ ಮೂಲಕ ಬನ್ನೇರುಘಟ್ಟ ಅರಣ್ಯಕ್ಕೆ ಕಾಡಾನೆಯನ್ನು ಹಿಮ್ಮೆಟ್ಟಿಸಲಾಗಿದೆ. ಇದನ್ನೂ ಓದಿ:ಬೆಂಗಳೂರಲ್ಲಿ ರಾತ್ರಿಯಿಂದ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆ – ವಾಹನ ಸವಾರರ ಪರದಾಟ

