ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನ (Renukaswamy Case) ಆರೋಪಿ ದರ್ಶನ್ಗೆ (Darshan) ಇಂದು ಬಿಗ್ ಡೇ. ಸಿಸಿಎಚ್ 59ನೇ ಕೋರ್ಟ್ನಲ್ಲಿ ದಾಸನ ಆಪ್ತ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮಾಡಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಇನ್ಮುಂದೆ 16 ಆರೋಪಿಗಳು ಮಾತ್ರ ಇರಲಿದ್ದು, ಪ್ರದೋಷ್ (Pradosh) ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ವಿಟ್ನೆಸ್ ಆಗಿ ಇಂದು (ಸೆ.28) ಕೋರ್ಟ್ನಲ್ಲಿ ತನ್ನ ಹೇಳಿಕೆ ದಾಖಲು ಮಾಡಲಿದ್ದಾನೆ. ಇದು ನಟ ದರ್ಶನ್, ಪವಿತ್ರಾಗೌಡಗೆ ಬಹುದೊಡ್ಡ ಸಂಕಷ್ಟ ತಂದೊಡ್ಡುವ ಮಾತುಗಳು ಕೇಳಿಬರ್ತಿವೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ | ನಾಳೆ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ದಾಖಲು, ದರ್ಶನ್ಗೆ ಸಂಕಷ್ಟ!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿ ದರ್ಶನ್ಗೆ ಮಾಫಿ ಸಂಕಷ್ಟ ಶುರುವಾಗಿದೆ. ಕೊಲೆ ಕೇಸ್ ಸಂಬಂಧ ಮಾಫಿ ಸಾಕ್ಷಿ ನುಡಿಯುವುದಾಗಿ ಮುಂದೆ ಬಂದಿದ್ದ ಆರೋಪಿ ಪ್ರದೋಷ್ನನ್ನು ಕೋರ್ಟ್ ಪರಿಗಣಿಸಿದೆ. ಅದರಂತೆ ಇಂದು ಮಾಫಿ ಸಾಕ್ಷಿ ಹೇಳಿಕೆ ದಾಖಲು ಮಾಡಲಿದ್ದಾರೆ. ಇತ್ತ ಆಪ್ತನ ಮಾಫಿ ಹೇಳಿಕೆ ದಾಖಲು ಪ್ರಕ್ರಿಯೆ ತಡೆಯಲು ದರ್ಶನ್ ನಾನಾ ಪ್ರಯತ್ನಗಳನ್ನು ಮಾಡಿದ್ರೂ ಯಾವುದೂ ಸಕ್ಸಸ್ ಆಗಿಲ್ಲ.
ಪ್ರದೋಷ್ ಮಾಫಿ ಸಾಕ್ಷಿ ಮುಂದೂಡುವಂತೆ ಸಲ್ಲಿಸಿದ್ದ ಅರ್ಜಿಯನ್ನೂ ಸಹ ಕೋರ್ಟ್ ವಜಾ ಮಾಡಿ ಶಾಕ್ ಕೊಟ್ಟಿತ್ತು. ಹೀಗಾಗಿ ಇಂದಿನ ಹೇಳಿಕೆ ದಾಖಲು ದರ್ಶನ್ ಪಾಲಿಗೆ ಮುಂದಿನ ದಿನಗಳನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಲು ಮುನ್ನುಡಿ ಬರೆಯಲಿದೆ.ಇದನ್ನೂ ಓದಿ: ದರ್ಶನ್ಗೆ ಮತ್ತೆ ಶಾಕ್ – ಮಾಫಿ ಸಾಕ್ಷಿ ಹೇಳಿಕೆ ಮುಂದೂಡುವಂತೆ ಸಲ್ಲಿಸಿದ್ದ ಅರ್ಜಿ ವಜಾ
ಇನ್ನು ಪ್ರಾಸಿಕ್ಯೂಷನ್ ವಿಟ್ನೆಸ್ ಪ್ರದೋಷ್ಗೆ ಇಂದು ಕೋರ್ಟ್ನಲ್ಲಿ ಹಲವು ಪ್ರಶ್ನಾವಳಿಗಳನ್ನು ಕೇಳಲಾಗುತ್ತದೆ. 2024 ರೇಣುಕಾಸ್ವಾಮಿ ಕೊಲೆ ಪ್ರಕರಣದ ಇಂಚಿಂಚು ಮಾಹಿತಿಯನ್ನು ಪ್ರದೋಷ್ ಬಿಚ್ಚಿಡಲಿದ್ದಾನೆ. ಕೊಲೆಗೆ ಹಿಂದಿನ ಕಾರಣವೇನು? ಕೊಲೆಗೆ ಪ್ಲಾನ್ ಹೇಗೆ ಮಾಡಲಾಯ್ತು? ಇದೆಲ್ಲದರ ಹಿಂದಿನ ಮಾಸ್ಟರ್ ಮೈಂಡ್ ಯಾರು ಅಂತೆಲ್ಲ ಎಳೆಎಳೆಯಾಗಿ ಪ್ರದೋಷ್ ವಿವರಣೆ ನೀಡಬೇಕಾಗಿದೆ. ಇನ್ನು ಪ್ರಾಸಿಕ್ಯೂಷನ್ ಬಳಿಕ ಆರೋಪಿಗಳ ಪರ ವಕೀಲರು ಸಹ ಪ್ರದೋಷ್ಗೆ ಕ್ರಾಸ್ ಎಕ್ಸಾಮಿನೇಷನ್ ಮಾಡಲಿದ್ದಾರೆ. ಹೀಗಾಗಿ ವಿಟ್ನೆಸ್ ಪ್ರದೋಷ್ ಮುಂದೆ ಸಾಲು ಸಾಲು ಸವಾಲುಗಳಿವೆ.
ಇಷ್ಟು ದಿನ ಆರೋಪಿ ಆಗಿದ್ದ ಎ14 ಪ್ರದೋಷ್ ಇದೀಗ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಆಗಿದ್ದಾರೆ. ಹೀಗಾಗಿ ಜೊತೆಗಿದ್ದವನೇ ದರ್ಶನ್ ವಿರುದ್ಧ ಸಾಕ್ಷಿ ಹೇಳ್ತೀನಿ ಎಂದು ಮುಂದೆ ಬಂದಿರೋದು ದಾಸ & ಟೀಂಗೆ ನುಂಗಲಾರದ ತುತ್ತಾಗಿದೆ.
ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವಂತೆ ಪ್ರದೋಷ್ ಹೇಳಿಕೆ ದಾಖಲು ತಪ್ಪಿಸಲು ಎಷ್ಟೇ ಪ್ರಯತ್ನಿಸಿದ್ರೂ ದರ್ಶನ್ ಸಫಲರಾಗಿಲ್ಲ. ಹೀಗಾಗಿ ದರ್ಶನ್ ಅತ್ಯಾಪ್ತನ ಹೇಳಿಕೆಯಿಂದ ದಾಸನಿಗೆ ಇನ್ನಷ್ಟು ಟೆನ್ಷನ್, ಸಂಕಷ್ಟ ನಿಶ್ಚಿತವಾಗಿದೆ. ಪ್ರದೋಷ್ ಹೆಳಿಕೆ ಪ್ರಕರಣಕ್ಕೆ ಬಲವಾದ ತಿರುವು ನೀಡುವ ಸಾಧ್ಯತೆಯಿದೆ. ಈ ಸಾಕ್ಷಿ ವಿಚಾರಣೆ ದರ್ಶನ್ ಹಾಗೂ ಪವಿತ್ರಾಗೌಡಗೆ ಕಾನೂನುಬದ್ಧವಾಗಿ ದೊಡ್ಡ ಆತಂಕ ತಂದೊಡ್ಡಲಿದೆ.ಇದನ್ನೂ ಓದಿ: ಮಾಫಿ ಸಾಕ್ಷಿ ತಡೆಯಲು ದರ್ಶನ್ ಕಸರತ್ತು – ಹೇಳಿಕೆ ದಾಖಲು ಮುಂದೂಡಿಕೆಗೆ ಅರ್ಜಿ

