ಬೆಂಗಳೂರು: ಕೆಟ್ಟು ಅನ್ನೋದನ್ನ ಕಣ್ಣಿಂದ ನೋಡಬಾರದು, ಕೈಯಿಂದ ಮುಟ್ಟಬಾರದು, ಬಾಯಿಂದ ಆಡಬಾರದು ಎಂದು ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರಿಗೆ ನೊಣವಿನಕೆರೆ ಶ್ರೀಗಳು (Nonavinakere Swamiji) ಹಿತವಚನ ಹೇಳಿದ್ದಾರೆ.
ʻಪಬ್ಲಿಕ್ ಟಿವಿʼ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಅವರು ಡಿ.ಕೆ ಶಿವಕುಮಾರ್ ಅವರ ಜೊತೆ ನಡೆಸಿದ ಸಂದರ್ಶನದ ನಡುವೆ ಸಿಎಂ ಬಗ್ಗೆ ಶ್ರೀಗಳು ಮಾತನಾಡಿದರು. ಈ ವೇಳೆ, ಧರ್ಮಕ್ಕೆ ಮೂಲ ಗುರು ಅಧಿಪತಿ. ಗುರುವನ್ನು ನಂಬಿ ಹೊರಟವರಿಗೆ ಯಾರಿಗೂ ವಂಚನೆ ಇಲ್ಲ. ಅವರ ಶ್ರದ್ಧಾ ಭಕ್ತಿಯಿಂದ ಗುರುವಿನ ಆಶೀರ್ವಾದ ಇದೆ. ಆ ಧೈರ್ಯದಿಂದ ರಾಜಕೀಯದಲ್ಲಿ ಧರ್ಮದ ದಂಡ ಹಿಡಿದು ಸಾಗುತ್ತಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳು ಒಂದಷ್ಟು ತೊಂದರೆ ಕೊಟ್ಟಿವೆ – ʻಪಬ್ಲಿಕ್ ಟಿವಿ Exclusive ಸಂದರ್ಶನʼದಲ್ಲಿ ಒಪ್ಪಿಕೊಂಡ ಸಿಎಂ
ಸಕಲ ಜೀವಿಗಳಿಗೂ ಒಳಿತಾಗಲಿ. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ನಮ್ಮ ಗುರುಗಳು ಹೇಳಿದ್ದಾರೆ. ಅದನ್ನು ಡಿ.ಕೆ ಶಿವಕುಮಾರ್ ಅಳವಡಿಸಿಕೊಂಡು ನಡೆಯುತ್ತಿದ್ದಾರೆ.
ಅವರು ಮಾಡಲೇ ಬೇಕು ಎಂಬ ಕೆಲಸ ಏನಾದ್ರೂ ಇದ್ದರೆ, ಅದು ಸರ್ವೇ ಜನ ಸುಖಿನೋ ಭವಂತು ಎಂಬುದು. ಅವರು ಮಾಡಲೇ ಬಾರದು ಎಂಬ ಕೆಲಸ ಕೆಟ್ಟು ಅನ್ನೋದನ್ನ ಕಣ್ಣಿಂದ ನೋಡಬಾರದು, ಕೈಯಿಂದ ಮುಟ್ಟಬಾರದು, ಬಾಯಿಂದ ಆಡಬಾರದು ಎಂಬುದೇ ಒಂದು ಶ್ರದ್ಧೆ, ವಿಶ್ವಾಸ ಎಂದಿದ್ದಾರೆ.
ಅಪಾರ ಪ್ರಮಾಣದ ಮಾತೃಹೃದಯದ ಪ್ರೀತಿಯನ್ನು ಅವರು ಪಡೆದಿದ್ದಾರೆ. ನಮ್ಮ ಹಾಗೂ ನಮ್ಮ ಅಜ್ಜಯ್ಯನ ಆಶೀರ್ವಾದ ಅವರ ಮೇಲೆ ಇದೆ ಎಂದು ಹರಸಿದ್ದಾರೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ರೋಡ್ ಆಗ್ಲೇಬೇಕು, ನೈಸ್ ರಸ್ತೆ ವಶಕ್ಕೆ ತೆಗೆದುಕೊಳ್ಳಲು ಆಗಲ್ಲ: ಡಿಕೆಶಿ ಹೊಸ ಬಾಂಬ್

