– ಸೌಹಾರ್ದ ಪಂದ್ಯ 1-1 ಗೋಲುಗಳಿಂದ ಡ್ರಾ
ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಸೌಹಾರ್ದ ಫುಟ್ಬಾಲ್(Football) ಪಂದ್ಯದಲ್ಲಿ, ಫಿಫಾ ವಿಶ್ವ ರ್ಯಾಂಕಿಂಗ್ನಲ್ಲಿ ತನಗಿಂತ ಸಾಕಷ್ಟು ಮುಂದಿರುವ ಬಲಿಷ್ಠ ಪನಾಮಾ(Panama) ತಂಡವನ್ನು ಭಾರತ(India) ತಂಡವು 1-1 ಗೋಲುಗಳಿಂದ ತಡೆದು ರೋಚಕ ಡ್ರಾ ಸಾಧಿಸಿದೆ.
ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಭಾರತ ತಂಡಕ್ಕೆ 41ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಆಕಾಶ್ ಮಿಶ್ರಾ ನೀಡಿದ ಅತ್ಯುತ್ತಮ ಪಾಸ್ ಅನ್ನು ಬಳಸಿಕೊಂಡ ಮುಂಚೂಣಿ ಆಟಗಾರ ರಯಾನ್ ವಿಲಿಯಮ್ಸ್, ಎದುರಾಳಿ ರಕ್ಷಣಾ ಪಡೆಯನ್ನು ವಂಚಿಸಿ ಚೆಂಡನ್ನು ಗೋಲುಪೆಟ್ಟಿಗೆಗೆ ತಳ್ಳಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಇದರಿಂದ ಕ್ರೀಡಾಂಗಣದಲ್ಲಿದ್ದ ಸಾವಿರಾರು ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲುಮುಟ್ಟಿತ್ತು.
A clinical finish into the back of the net to give the Blue Tigers the breakthrough against Panama! 🦁
Watch India vs Panama, LIVE NOW on Sony Sports Network Channels, Sony LIV & Sony Aath!#SonySportsNetwork #SonyLIV #SonyAath #INDvPAN pic.twitter.com/Q62d56Swjk
— Sony Sports Network (@SonySportsNetwk) September 25, 2026
ಹಿನ್ನಡೆ ಅನುಭವಿಸಿದ ನಂತರ ಪುಟಿದೆದ್ದ ಪನಾಮಾ ಆಟಗಾರರು ಭಾರತದ ರಕ್ಷಣಾ ಕೋಟೆಯನ್ನು ಭೇದಿಸಲು ನಿರಂತರ ಯತ್ನ ನಡೆಸಿದರು. ಪಂದ್ಯದ 68ನೇ ನಿಮಿಷದಲ್ಲಿ ಪನಾಮಾದ ಒಮರ್ ವೇಲೆನ್ಸಿಯಾ, ಪೆನಾಲ್ಟಿ ಬಾಕ್ಸ್ನ ಹೊರಗಿನಿಂದ ಸಿಡಿಸಿದ ಲಾಂಗ್ ರೇಂಜ್ ಕಿಕ್ ಗೋಲುಬಲೆಯೊಳಗೆ ತೂರಿತು. ಇದರೊಂದಿಗೆ ಪಂದ್ಯ 1-1 ಅಂತರದಲ್ಲಿ ಸಮಬಲಗೊಂಡಿತು. ಉಳಿದ ಅವಧಿಯಲ್ಲಿ ಉಭಯ ತಂಡಗಳು ಮುನ್ನಡೆಗಾಗಿ ಸಾಕಷ್ಟು ಪ್ರಯತ್ನ ನಡೆಸಿದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
A special evening at the Kanteerava Stadium, witnessing the Blue Tigers take on Panama in an international football friendly, along with MLA, KSFA President, AIFF Vice President and SAFF Vice President Shri @mlanaharis, Indian football legend and former captain Shri… pic.twitter.com/WSIHibnSYB
— DK Shivakumar (@DKShivakumar) September 25, 2026
ವಿಶ್ವ ರ್ಯಾಂಕಿಂಗ್ನಲ್ಲಿ 44ನೇ ಸ್ಥಾನದಲ್ಲಿರುವ ಮತ್ತು ಇತ್ತೀಚೆಗಷ್ಟೇ 2026ರ ಫಿಫಾ ವಿಶ್ವಕಪ್ನಲ್ಲಿ ಕಣಕ್ಕಿಳಿದಿದ್ದ ಬಲಿಷ್ಠ ಪನಾಮಾ ವಿರುದ್ಧ, 138ನೇ ರ್ಯಾಂಕಿಂಗ್ ಹೊಂದಿರುವ ಭಾರತ ತಂಡ ಈ ಮಟ್ಟದ ಪ್ರದರ್ಶನ ನೀಡಿದ್ದು ಶ್ಲಾಘನೆಗೆ ಪಾತ್ರವಾಗಿದೆ. ಮುಖ್ಯ ಕೋಚ್ ಖಾಲಿದ್ ಜಮೀಲ್ ಅವರ ಮಾರ್ಗದರ್ಶನದಲ್ಲಿ ಕಣಕ್ಕಿಳಿದ ಭಾರತೀಯ ಯುವ ಆಟಗಾರರು ಶಿಸ್ತಿನ ರಕ್ಷಣಾತ್ಮಕ ಮತ್ತು ಸಾಂಘಿಕ ಆಟದ ಮೂಲಕ ಗಮನಸೆಳೆದರು.
ಪಂದ್ಯ ಆರಂಭವಾಗುವ ಮುನ್ನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಂಠೀರವ ಮೈದಾನಕ್ಕೆ ಭೇಟಿ ನೀಡಿ, ಉಭಯ ತಂಡಗಳ ಆಟಗಾರರೊಂದಿಗೆ ಕೈಕುಲುಕಿ ಶುಭ ಹಾರೈಸಿದರು.
Ryan Williams lights up the Kanteerava before the break! 🇮🇳💥#INDPAN #BlueTigers #IndianFootball pic.twitter.com/5v5qynlzv6
— Indian Football (@IndianFootball) September 25, 2026
ಯಾರಿದು ರಯಾನ್ ವಿಲಿಯಮ್ಸ್?
ಆಸ್ಟ್ರೇಲಿಯಾದಲ್ಲಿ ಹುಟ್ಟಿ ಬೆಳೆದ ಆಟಗಾರ ರಯಾನ್ ವಿಲಿಯಮ್ಸ್ ಭಾರತ ತಂಡವನ್ನು ಪ್ರತಿನಿಧಿಸಲು ಕಾರಣವಿದೆ. ರಯಾನ್ ಅವರ ತಾಯಿ ಆಡ್ರಿ (Audrey) ಅವರು ಮುಂಬೈನ ಆಂಗ್ಲೋ-ಇಂಡಿಯನ್ (Anglo-Indian) ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ರಯಾನ್ ಅವರಿಗೆ ಹುಟ್ಟಿನಿಂದಲೇ ಭಾರತದ ಒಡನಾಟವಿತ್ತು. ಅವರ ಅಜ್ಜ ಕೂಡ ಭಾರತದಲ್ಲಿ ‘ಸಂತೋಷ್ ಟ್ರೋಫಿ’ ಫುಟ್ಬಾಲ್ ಆಡಿದ್ದರು.
ಭಾರತದಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲದ ಕಾರಣ ಮತ್ತು ಭಾರತ ಸರ್ಕಾರದ ಕ್ರೀಡಾ ನೀತಿಯ ಪ್ರಕಾರ ಸಂಪೂರ್ಣ ನಾಗರಿಕರು ಮಾತ್ರ ದೇಶವನ್ನು ಪ್ರತಿನಿಧಿಸಬಹುದಾಗಿದೆ. ಈ ಕಾರಣಕ್ಕಾಗಿ ಅವರು ತಮ್ಮ ಆಸ್ಟ್ರೇಲಿಯಾದ ಪಾಸ್ಪೋರ್ಟ್ ಮತ್ತು ಪೌರತ್ವವನ್ನು ಅಧಿಕೃತವಾಗಿ ತ್ಯಜಿಸಿ ಭಾರತದ ಪೌರತ್ವವನ್ನು ಪಡೆದುಕೊಂಡಿದ್ದಾರೆ.
ರಯಾನ್ ಈ ಹಿಂದೆ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಫಿಫಾದ ‘ಪ್ಲೇಯರ್ಸ್ ಸ್ಟೇಟಸ್ ಚೇಂಬರ್’ ಅವರ ಅರ್ಜಿಯನ್ನು ಪರಿಶೀಲಿಸಿ, ಅವರು ಭಾರತ ತಂಡದ ಪರ ಆಡಲು ಅಧಿಕೃತವಾಗಿ ಹಸಿರು ನಿಶಾನೆ ನೀಡಿದೆ. 2023 ರಿಂದ ಅವರು ಇಂಡಿಯನ್ ಸೂಪರ್ ಲೀಗ್ನಲ್ಲಿ (ISL) ಬೆಂಗಳೂರು ಎಫ್ಸಿ (Bengaluru FC) ತಂಡದ ಪ್ರಮುಖ ವಿಂಗರ್ ಆಗಿ ಆಡುತ್ತಿದ್ದಾರೆ.

