-ರೈತರ ದಿನದ ಸಂಬಳ 1,000 ರೂ. ದಾಟಿರುವಾಗ 2,500 ರೂ. ನೀಡಿ ಕೈತೊಳೆದುಕೊಂಡಿರುವುದು ಖಂಡನೀಯ
ಬೆಂಗಳೂರು: ಬರ ಪರಿಹಾರವಾಗಿ ರಾಜ್ಯ ಸರ್ಕಾರ ನೀಡಿರುವ 2,500 ರೂ. ಸಾಲದು. ಸರ್ಕಾರ ರೈತರ ಸಾಲಮನ್ನಾ ಮಾಡಬೇಕು ಅಂತ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಆಗ್ರಹಿಸಿದ್ದಾರೆ.
ಎಕ್ಸ್ನಲ್ಲಿ (X) ಪ್ರತಿಕ್ರಿಯೆ ನೀಡಿರುವ ಅವರು, ಕಾರ್ಮಿಕರಿಗೆ ದಿನನಿತ್ಯದ ಸಂಬಳವೇ 1,000 ರೂ. ಮೇಲ್ಪಟ್ಟಿದೆ. ಹೀಗಿರುವಾಗ ರಾಜ್ಯ ಸರ್ಕಾರ ರೈತರಿಗೆ ಕೇವಲ 2,500 ರೂ. ಪರಿಹಾರ ನೀಡಿ ಕೈ ತೊಳೆದುಕೊಂಡಿರುವುದು ಖಂಡನೀಯ. ರೈತರಿಗೆ 2,500 ರೂ. ಬರ ಪರಿಹಾರ ನೀಡುವುದರಿಂದ ನ್ಯಾಯ ಸಿಗುವುದಿಲ್ಲ. ರಿಯಲ್ ಎಸ್ಟೇಟ್ ಮುಖ್ಯಮಂತ್ರಿಗಳು ಈ ಕೂಡಲೇ ರೈತರ ಸಾಲವನ್ನು ಮನ್ನಾ ಮಾಡಲಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯದ 50 ಲಕ್ಷ ರೈತರಿಗೆ 2,500 ಇನ್ಪುಟ್ ಸಬ್ಸಿಡಿ: ಪರಮೇಶ್ವರ್ ಘೋಷಣೆ
ಕಾರ್ಮಿಕರಿಗೆ ದಿನನಿತ್ಯದ ಸಂಬಳವೇ ಸಾವಿರ ರೂಪಾಯಿ ಮೇಲ್ಪಟ್ಟಿದೆ. ಹೀಗಿರುವಾಗ ರಾಜ್ಯ ಸರ್ಕಾರ ರೈತರಿಗೆ ಕೇವಲ ಎರಡೂವರೆ ಸಾವಿರ ರೂಪಾಯಿ ಪರಿಹಾರ ನೀಡಿ ಕೈ ತೊಳೆದುಕೊಂಡಿರುವುದು ಖಂಡನೀಯ.
ರೈತರಿಗೆ ಎರಡೂವರೆ ಸಾವಿರ ರೂಪಾಯಿ ಬರ ಪರಿಹಾರ ನೀಡುವುದರಿಂದ ನ್ಯಾಯ ಸಿಗುವುದಿಲ್ಲ. ರಿಯಲ್ ಎಸ್ಟೇಟ್ ಮುಖ್ಯಮಂತ್ರಿಗಳು ಈ ಕೂಡಲೇ ರೈತರ ಸಾಲವನ್ನು ಮನ್ನಾ… pic.twitter.com/iRkv4joXhv
— R. Ashoka (@RAshokaBJP) September 25, 2026
ಗುರುವಾರ (ಸೆ.24) ತೀವ್ರ ಬರಗಾಲದಿಂದ ಕಂಗಾಲಾಗಿರುವ ರಾಜ್ಯದ ಸುಮಾರು 46 ರಿಂದ 50 ಲಕ್ಷ ರೈತರಿಗೆ ತಲಾ 2,500 ರೂ. ಇನ್ಪುಟ್ ಸಬ್ಸಿಡಿ ನೀಡುವುದಾಗಿ ಡಿಸಿಎಂ ಡಾ. ಜಿ. ಪರಮೇಶ್ವರ್ (Parameshwara) ಘೋಷಿಸಿದ್ದರು. ಈ ತೀರ್ಮಾನವು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಇದಕ್ಕಾಗಿ ಸರ್ಕಾರ 1,250 ಕೋಟಿ ರೂ. ವೆಚ್ಚ ಮಾಡಲಿದೆ.
ರಾಜ್ಯದಲ್ಲಿ ಒಟ್ಟು 40 ಸಾವಿರ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದೆ. ಹೀಗಾಗಿ ರಾಜ್ಯದ ಭೀಕರ ಬರ ಪರಿಸ್ಥಿತಿಯನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವಂತೆ ಕೋರಲು ಶೀಘ್ರದಲ್ಲೇ ನಿಯೋಗದೊಂದಿಗೆ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಲಿದ್ದೇವೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಹಾಲಿನ ದರ ಏರಿಕೆ ವಿಚಾರ – ಕೆಎಂಎಫ್ಗೆ ಪ್ರಸ್ತಾವನೆ ಕೇಳಿದ ಸಿಎಂ

