ಬೆಂಗಳೂರು: ರಾಜ್ಯದಲ್ಲಿ ಹಾಲಿನ ದರ ಏರಿಕೆ ವಿಚಾರ ಸಂಬಂಧ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಕೆಎಂಎಫ್ಗೆ (KMF) ಪ್ರಸ್ತಾವನೆ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಕಳೆದ ಹಲವು ದಿನಗಳಿಂದ ಹಾಲಿನ ದರ ಲೀ.10ರೂ.ಯಿಂದ 14 ರೂ. ಏರಿಕೆ ಮಾಡುವಂತೆ ಹಾಲು ಒಕ್ಕೂಟಗಳು ಭಾರೀ ಬೇಡಿಕೆ ಇಟ್ಟಿದ್ದವು. ಈಗಾಗಲೇ 14 ಹಾಲು ಒಕ್ಕೂಟಗಳು ಸಿಎಂಗೆ ದರ ಏರಿಕೆಗೆ ಮಾಡುವಂತೆ ಮನವಿ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಇದೀಗ ಸಿಎಂ ಕೆಎಂಎಫ್ಗೆ ಪ್ರಸ್ತಾವನೆ ಕೇಳಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ | ಚಾರ್ಜ್ಶೀಟ್ನಲ್ಲಿ ಹೆಸರು ಡಿಲೀಟ್ – ಪ್ರದೋಷ್ ಇನ್ಮುಂದೆ ಆರೋಪಿ ಅಲ್ವಾ?
ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದ ಬಳಿಕ ಸಾಧಕ-ಬಾಧಕ ಪರಿಶೀಲನೆ ನಡೆಸಿ, ಆನಂತರ ಹಾಲಿನ ದರ ಏರಿಕೆ ಕುರಿತು ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ರೈತರ ಹಿತದ ಜೊತೆ ಜನಸಾಮಾನ್ಯರಿಗೆ ಹೊರೆಯಾಗದಂತೆ ದರ ಏರಿಸಲು ಸರ್ಕಾರದ ಚಿಂತನೆ ನಡೆಸಿದೆ.
ಇಂದು ಕೆಎಂಎಫ್ನಲ್ಲಿ ಸರ್ವಸದಸ್ಯರ ಸಭೆ ನಡೆಯಲಿದ್ದು, ಹಾಲಿನ ದರ ಏರಿಕೆ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ. ಪ್ರತಿ ಲೀಟರ್ಗೆ 4 ರಿಂದ 5 ರೂ. ಹೆಚ್ಚಳಕ್ಕೆ ಅನುಮತಿ ನೀಡುವ ಸಾಧ್ಯತೆಯಿದೆ.ಇದನ್ನೂ ಓದಿ: ಟೆಲಿಗ್ರಾಮ್ ಬಳಸಿ ಉಗ್ರಕೃತ್ಯಕ್ಕೆ ಸಂಚು ಮಾಹಿತಿ ಇಲ್ಲ: ಪರಮೇಶ್ವರ್
ಪ್ರಸ್ತುತ ಹಾಲಿನ ದರ – 4 ರೂ. ಹೆಚ್ಚಳ ಆದ್ರೆ 1 ಲೀಟರ್ ದರ:
ಟೋನ್ಡ್ ಹಾಲು
46- 50 ರೂ.
ಹೋಮೋಜಿನೈಸ್ಡ್ ಟೋನ್ಡ್ ಹಾಲು
47- 51 ರೂ.
ಹೋಮೋಜಿನೈಸ್ಡ್ ಹಸುವಿನ ಹಾಲು
50- 54 ರೂ.
ಶುಭಂ ಹಾಲು
52 – 56 ರೂ.
ಸಮೃದ್ಧಿ ಹಾಲು
55 – 59 ರೂ.
ಸ್ಪೆಷಲ್ ಹಾಲು
52 – 56 ರೂ.
ಡಬಲ್ ಟೋನ್ಡ್ ಹಾಲು
43 – 47 ರೂ.
ಆರೆಂಜ್ ಪ್ಯಾಕೆಟ್
ಹಸುವಿನ ಹಾಲು
50- 54 ರೂ.
ಗ್ರೀನ್ ಸ್ಪೆಷಲ್:
50 – 54 ರೂ.
ನಾರ್ಮಲ್ ಗ್ರೀನ್
ಹಸುವಿನಹಾಲು
50- 54 ರೂ.

