ಬೆಂಗಳೂರು: ಟ್ರಾಫಿಕ್ ಹಾಗೂ ಕಸದ ಸಮಸ್ಯೆ ಬೆಂಗಳೂರಿನ ಟಾಪ್ ಟು ಸಮಸ್ಯೆಗಳು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ (GBA) ಸಚಿವ ಕೃಷ್ಣ ಬೈರೇಗೌಡ (Krishna Byregowda) ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ (Bengaluru) ಕಸ ನಿರ್ವಹಣೆ ಜಟಿಲ ಸಮಸ್ಯೆಯಾಗಿದೆ. ಹೇಗೆ ಪರಿಸ್ಥಿತಿ ಸುಧಾರಿಸಿಬೇಕು ಅನ್ನೋದರ ಬಗ್ಗೆ ಸಲಹೆ ತೆಗೆದುಕೊಳ್ಳಲು ಇಂದು ಸಾರ್ವಜನಿಕರ ಸಂವಾದ ನಡೆಸಿದ್ದೇವೆ. ವ್ಯವಸ್ಥೆಯಲ್ಲೂ ಸುಧಾರಣೆ ಮಾಡಬೇಕಿದೆ. ಟ್ರಾಫಿಕ್ ಮತ್ತು ಕಸ ಬೆಂಗಳೂರಿನ ಟಾಪ್ ಟು ಸಮಸ್ಯೆಗಳಾಗಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಗ್ಯಾಂಗ್ರೇಪ್ ಕೇಸ್ | ಸರ್ಚ್ ಹಿಸ್ಟರಿ ಡಿಲೀಟ್, ಬಟ್ಟೆ ವಾಶ್ – ಸಾಕ್ಷ್ಯ ನಾಶಕ್ಕೆ ಆರೋಪಿಗಳಿಂದ ಮಾಸ್ಟರ್ ಪ್ಲ್ಯಾನ್!
ಬೆಂಗಳೂರಿನಲ್ಲಿ ಟ್ರಾಫಿಕ್ ವಾರ್ಡನ್ ಮಾದರಿಯಲ್ಲಿ ಕಸದ ವಾರ್ಡನ್ ಮಾಡಲು ನಿರ್ಧರಿಸಿದ್ದೇವೆ. ಜನರಿಗೆ ಬೆಂಗಳೂರು ಸ್ವಚ್ಛವಾಗಿರಬೇಕು ಅನ್ನೋ ಆಸಕ್ತಿ ಇದೆ. ಹೀಗಾಗಿ ಆಸಕ್ತ ಜನ ವಾರ್ಡನ್ ಆಗಿ ನೇಮಕ ಮಾಡಿಕೊಳ್ಳುವ ಯೋಜನೆ ಇದೆ. ಜೊತೆಗೆ ಕಸದ ಸ್ವಚ್ಛತೆಯ ವಿಚಾರದಲ್ಲಿ ಜನರನ್ನು ಕೂಡ ಇನ್ವಾಲ್ವ್ ಮಾಡಿಕೊಳ್ಳೋಕೆ ನಿರ್ಧರಿಸಿದ್ದೇವೆ. ಎಂದಿದ್ದಾರೆ.
ವಿರೋಧ ಪಕ್ಷದ ಶಾಸಕರ ಕ್ಷೇತ್ರ ಸ್ವಚ್ಛವಾಗಿಲ್ಲ ಅನ್ನೋ ಬಗ್ಗೆ ಆರ್.ಅಶೋಕ್ ಆರೋಪ ಬಗ್ಗೆ ಮಾತನಾಡಿ, ಒಂದೇ ಕ್ಷೇತ್ರದಲ್ಲಿ ಇದ್ದಾಗಲೂ ಅಕ್ಕಪಕ್ಕದ ವಾರ್ಡ್ ವೈಸ್ ಸ್ವಚ್ಛತೆ ಒಂದೇ ತರಹ ಇರಲ್ಲ. ಇದು ಅಧಿಕಾರಿಗಳ ಅಥವಾ ಕಾಂಟ್ರಾಕ್ಟರ್ ನಿರ್ಲಕ್ಷ್ಯ ಇರುತ್ತದೆ. ಕಸದ ವಿಚಾರದಲ್ಲಿ ರಾಜಕೀಯ ಮಾಡಿದ್ರೇ ಅದು ಕ್ಷುಲ್ಲಕ. ಆಶೋಕ್ ಅವರಿಗೆ ಅವರ ರಾಜಕೀಯ ಅನುಭವದ ಆಧಾರದ ಮೇಲೆ ಖಂಡಿತಾ ಅವರ ಸಲಹೆಗೆ ಗೌರವ ಕೊಡುತ್ತೇವೆ. ರಾಜಕೀಯ ಬೆರೆಸೋದು ಬೇಡ ಎಂದು ಹೇಳಿದ್ದಾರೆ.ಇದನ್ನೂ ಓದಿ: ಉಡುಪಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ – ಮಾದಕವಸ್ತು ಸೀಜ್; 9 ಮಂದಿ ಅರೆಸ್ಟ್
ಇನ್ನೂ ಕಸದ ರೀ ಟೆಂಡರ್ ಕರೆಯೋಕೆ ಸಜ್ಜಾಗಿದ್ದೇವೆ. ಈಗಾಗಲೇ 21 ಪ್ಯಾಕೇಜ್ ಟೆಂಡರ್ಗೆ ಗುತ್ತಿಗೆದಾರರು ಮುಂದೆ ಬಂದಿದ್ದಾರೆ. ಏಳು ಟೆಂಡರ್ಗೆ ಇನ್ನು ಜನ ಬಂದಿಲ್ಲ. ಹೀಗಾಗಿ ರೀ ಟೆಂಡರ್ ಕರೆಯುವ ಪ್ಲ್ಯಾನ್ನಲ್ಲಿದ್ದೇವೆ. ಜೊತೆಗೆ ಕಸದ ಗಾಡಿ ಬಹುತೇಕ ಗುಜರಿಯಾಗಿದೆ. ಗುಜರಿ ಗಾಡಿಗಳಿಂದ ಒಂದು ಟನ್ ಕಸ ತೆಗೆದುಕೊಂಡು ಹೋಗುವ ಕೆಪಾಸಿಟಿಯೇ ಇಲ್ಲ. ಹೀಗಾಗಿಯೇ ಸಮಸ್ಯೆಯಾಗುತ್ತಿದೆ. ತುಂಬಾ ಕಡೆ ಕಸದ ಗಾಡಿಗಳೇ ಹೋಗುತ್ತಿಲ್ಲ. ಆದ್ರೇ ಕೆಲ ಕಡೆ ಪ್ರಾಮಾಣಿಕವಾಗಿ ಕೆಲ್ಸ ಮಾಡುವ ಸಿಬ್ಬಂದಿ ಇದ್ದಾರೆ ಎಂದು ತಿಳಿಸಿದ್ದಾರೆ.
ಬೀದಿ ದೀಪ, ಕಸದ ಗಾಡಿಗಳ ಕಂಟ್ರಾಕ್ಟರ್ಗಳಿಗೆ ಲಕ್ಷಗಟ್ಟಲೇ ದಂಡ ಹಾಕಿದ್ದೇವೆ. ದಂಡವನ್ನು ಅವರು ಕಟ್ಟೋಕೆ ಆಗುತ್ತೋ ಇಲ್ವೋ ಗೊತ್ತಿಲ್ಲ. ಬೆಂಗಳೂರು ಉತ್ತರ ಒಂದು ವಲಯದಲ್ಲಿಯೇ ಬರೋಬ್ಬರಿ 18 ಲಕ್ಷ ರೂ. ದಂಡ ಸಂಗ್ರಹ ವಾಗಿದೆ. ಅವರಿಗೆ ಎಚ್ಚರಿಕೆ ಮೂಡಿಸಬೇಕು ಅನ್ನುವ ಕಾರಣಕ್ಕೆ ದಂಡ ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚುನಾವಣಾ ಆಯೋಗವನ್ನು ಹೈಜಾಕ್ ಮಾಡಿ ಅದರ ಕೆಲಸವನ್ನ ಕಿಡ್ನ್ಯಾಪ್ ಮಾಡಲಾಗಿದೆ: ಸುರ್ಜೇವಾಲ

