– ಬರ ಪಟ್ಟಿಯಿಂದ ಇಂಡಿ, ಚಡಚಣ ತಾಲೂಕು ಕೈಬಿಟ್ಟಿದ್ದಕ್ಕೆ ಬೇಸರ
ವಿಜಯಪುರ: ಬರಗಾಲ ಪೀಡಿತ ಪಟ್ಟಿಯಿಂದ (Drought Hit District) ವಿಜಯಪುರ (Vijayapura) ಜಿಲ್ಲೆಯ ಇಂಡಿ, ಚಡಚಣ ತಾಲೂಕು ಕೈಬಿಟ್ಟ ಹಿನ್ನೆಲೆ ಇಂಡಿ (Indi) ಶಾಸಕ ಯಶವಂತರಾಯಗೌಡ ಪಾಟೀಲ್ (Yashvantharayagouda Patil) ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹಲವು ಬಾರಿ ಮನವಿ ಮಾಡಿದರೂ ಇಂಡಿ ಹಾಗೂ ಚಡಚಣ ತಾಲೂಕು ಬರ ಘೋಷಣೆ ಆಗಿಲ್ಲ. ನಮ್ಮ ಮಾತಿಗೆ, ನಮ್ಮ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಬೇಸರಗೊಂಡು ಸ್ಪೀಕರ್ ಅವರನ್ನ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ 50,000 ರೂ. ಬರ ಪರಿಹಾರ ಕೊಡಬೇಕು – ಎಂಎಲ್ಸಿ ಶಿವಕುಮಾರ್ ಆಗ್ರಹ
ಈಗಿನ ರಾಜಕೀಯ ವಾತಾವಣರದಲ್ಲಿ ಬಲಾಢ್ಯರಿಗೆ, ಒತ್ತಡ ತಂತ್ರಗಳನ್ನು ಹೆಣೆಯುವವರಿಗೆ ಮನ್ನಣೆ ಇದೆ. ನಮ್ಮಂತಹ ಸೌಮ್ಯ ಸ್ವಭಾವದವರಿಗೆ ಯಾವುದೇ ಕೆಲಸಗಳಿಗೆ ಮನ್ನಣೆ ದೊರೆಯುತ್ತಿಲ್ಲ. ಕಾರಣ ನನ್ನ ಕ್ಷೇತ್ರದ ಜನರ ಅಶೆ, ಆಶೋತ್ತರಗಳಿಗೆ ಸ್ಪಂದಿಸಲು ಸಾಧ್ಯವಾಗದ ಕಾರಣ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿಎಂಗೆ ಶಾಸನದ ಗಂಧಗಾಳಿ ಗೊತ್ತಿಲ್ಲ – KPSC ಮುಚ್ಚುವೆ ಎಂದ ಮುಖ್ಯಮಂತ್ರಿಗೆ ಹೆಚ್ಡಿಕೆ ತರಾಟೆ

