– ಪೊಲೀಸರ ಸೋಗಿನಲ್ಲಿ ಬಂದು 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ
– ಮೂವರು ಆರೋಪಿಗಳು ಬಂಧನ
ನವದೆಹಲಿ: ಪೊಲೀಸರ ಸೋಗಿನಲ್ಲಿ ಬಂದು 17 ವರ್ಷದ ಬಾಲಕಿ ಮೇಲೆ (Delhi crime) ಅತ್ಯಾಚಾರ ನಡೆಸಿರುವ ಪ್ರಕರಣ ಇಡೀ ದೆಹಲಿಯನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆ ಬೆನ್ನಲ್ಲೇ ಕಲ್ಕಾಜಿ ಮಂದಿರದ ಬಳಿ ಇರುವ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ತರಗತಿಗಳನ್ನು ರದ್ದುಗೊಳಿಸಿ ಆನ್ಲೈನ್ ಕ್ಲಾಸ್ (Online Class) ನಡೆಸಲಾಗಿದೆ.
ಕಲ್ಕಾಜಿ ದೇವಾಲಯದ ಸಮೀಪವಿರುವ ಆಸ್ತಾ ಕುಂಜ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಲೇಡಿ ಶ್ರೀ ರಾಮ್ ಕ್ಯಾಂಪಸ್ ಘಟನೆ ನಡೆದ ಸ್ಥಳದಿಂದ 2 ಕಿಲೋಮೀಟರ್ ದೂರದಲ್ಲಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕಾಲೇಜು ಆಡಳಿತ ಈ ನಿರ್ಧಾರ ತೆಗೆದುಕೊಂಡಿದೆ.
ಅತ್ಯಾಚಾರ ಆರೋಪದ ಮೇಲೆ ಮೂವರ ಬಂಧನ
ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಸೋಮವಾರ ಸಂಜೆ ಬಾಲಕಿ ಸ್ನೇಹಿತನೊಂದಿಗೆ ದೇವಾಲಯ ದರ್ಶನ ಮುಗಿಸಿ ಪಾರ್ಕ್‌ಗೆ ಹೋಗಿದ್ದಳು. ಈ ವೇಳೆ ಪೊಲೀಸರ ಸೋಗಿನಲ್ಲಿ ಬಂದ ಮೂವರು ಬಂದೂಕು ತೋರಿಸಿ ಆಕೆಗೆ ಬೆದರಿಕೆ ಹಾಕಿದ್ದಾರೆ. ನಂತರ ಉದ್ಯಾನವನದ ಏಕಾಂತ ಪ್ರದೇಶಕ್ಕೆ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಇದನ್ನೂ ಓದಿ: ಬೇರೊಬ್ಬನ ಜೊತೆ ಸ್ನೇಹ ಬೆಳೆಸಿದ್ದಕ್ಕೆ ವಿದ್ಯಾರ್ಥಿನಿಯ ಕೊಲೆ – ಆತ್ಮಹತ್ಯೆ ಅಂತ ಬಿಂಬಿಸಿದ್ದ ಲೆಕ್ಚರರ್ ಅರೆಸ್ಟ್
ಆರೋಪಿಗಳನ್ನು ವಕೀಲ ಹೇಮಂತ್ ಮತ್ತು ಆತನ ಸಹೋದರ ಫೈನಲ್ ಈಯರ್ ಬಿಎಸ್ಸಿ ವಿದ್ಯಾರ್ಥಿ ಮುಖೇಶ್ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಸಿಎಂಗೆ ಶಾಸನದ ಗಂಧಗಾಳಿ ಗೊತ್ತಿಲ್ಲ – KPSC ಮುಚ್ಚುವೆ ಎಂದ ಮುಖ್ಯಮಂತ್ರಿಗೆ ಹೆಚ್‌ಡಿಕೆ ತರಾಟೆ

