ಕಾರವಾರ/ಕೊಪ್ಪಳ/ಗದಗ: ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಇಂದು ಕೊಪ್ಪಳ, ಗದಗ ಹಾಗೂ ಕಾರವಾರದಲ್ಲಿ ವರುಣ ಅಬ್ಬರಿಸಿದ್ದಾರೆ. ಇದರ ನಡುವೆ ಅಲ್ಲಲ್ಲಿ ಅವಾಂತರ ಸೃಷ್ಟಿಯಾಗಿದೆ.
ಕಾದ ಕಬ್ಬಿಣದಂತಾಗಿದ್ದ ಉತ್ತರ ಕನ್ನಡ (North Karnataka) ಜಿಲ್ಲೆಯ ಕರಾವಳಿ ಭಾಗದಲ್ಲಿ ವರುಣ ತಂಪೆರೆದಿದ್ದಾನೆ. ಕಳೆದ 24 ಗಂಟೆಯಿಂದ ಜಿಲ್ಲೆಯಲ್ಲಿ ಗುಡುಗು ಸಹಿತ ಅಬ್ಬರದ ಮಳೆ ಸುರಿಯುತ್ತಿದ್ದು, ಕಾರವಾರ ಭಾಗದಲ್ಲಿ ಸಂಪೂರ್ಣ ಕತ್ತಲು ಆವರಿಸಿ, ಅತೀ ಹೆಚ್ಚು ಮಳೆ ಬೀಳುತ್ತಿದೆ. ಜಿಲ್ಲೆಯ ಅಂಕೋಲ, ಕಾರವಾರ, ಕುಮಟಾ ಭಾಗದಲ್ಲಿ ಮಳೆಯಾದರೇ, ಮಲೆನಾಡು ಭಾಗದಲ್ಲಿ ಹಗುರ ಮಳೆಯಾಗುತ್ತಿದೆ. ಇನ್ನು ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ರೌಡಿ ಶೀಟರ್ಗಳ ಜೊತೆ ಎಣ್ಣೆ ಪಾರ್ಟಿ – ಎಎಸ್ಐ ಅಮಾನತು
ಕೊಪ್ಪಳ:
ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಆಗಾಗ ಮಳೆಯಾಗುತ್ತಿದೆ. ಇಂದು ಬೆಳ್ಳಂಬೆಳಗ್ಗೆ ಮಳೆ ಶುರುವಾಗಿದ್ದು, ಮಳೆಯಿಲ್ಲದೇ ಕಂಗಾಲಾಗಿದ್ದ ರೈತರಲ್ಲಿ ಮೊಗದಲ್ಲಿ ಮಂದಹಾಸ ಮೂಡಿದೆ. ಅಲ್ಲದೇ ಬೆಳಿಗ್ಗೆ ಶಾಲಾ, ಕಾಲೇಜು, ಕಚೇರಿಗಳಿಗೆ ತೆರಳುವವರಿಗೆ ತೊಂದರೆ ಉಂಟಾಗಿದೆ.
ಗದಗ:
ಜಿಲ್ಲೆಯಲ್ಲಿ ನಿನ್ನೆ (ಸೆ.22) ಧಾರಾಕಾರ ಮಳೆಯಾಗಿದ್ದು, ನೀರಲಗಿ-ನಾಗರಾಳ ಮಧ್ಯದ ಹಳ್ಳ ಉಕ್ಕಿ ಹರಿಯುತ್ತಿದೆ. ರಾತ್ರಿ ವೇಳೆ ನೀರಿನ ರಭಸ ಲೆಕ್ಕಿಸದೇ ಕಾರಿನಲ್ಲಿ ಯುವಕರು ಹಳ್ಳದಾಟುವ ದುಸ್ಸಾಹಸಕ್ಕೆ ಮುಂದಾಗಿದ್ದರು. ಈ ವೇಳೆ ಕಾರು ಏಕಾಏಕಿ ನಡು ನೀರಿಲ್ಲಿ ಸಿಲುಕಿ, ಬಂದ್ ಆಗಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಜನರ ಸಮಯಪ್ರಜ್ಞೆಯಿಂದ ನಾಲ್ವರು ಅದೃಷ್ಟವಶಾತ್ ಪಾರಾಗಿದ್ದಾರೆ.ಇದನ್ನೂ ಓದಿ: ನವವಿವಾಹಿತೆ ನಿಗೂಢ ಕಣ್ಮರೆ – ನಾಲ್ಕನೇ ದಿನ ಮುಂದುವರಿದ ಶೋಧ

