– ಹಣ ವರ್ಗಾವಣೆ, ಹುದ್ದೆ ಮಾರಾಟದ ಬಗ್ಗೆ ಸ್ಫೋಟಕ ಮಾಹಿತಿ
– ಕೆಪಿಎಸ್‌ಸಿ ಕೇಸ್ ತನಿಖೆ ಎಸ್‌ಐಟಿ ಹೆಗಲಿಗೆ
ಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಆರೋಪ ಪ್ರಕರಣ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಕೆಪಿಎಸ್‌ಸಿ ಹಗರಣದ ಕುರಿತು ಸಿಐಡಿ (CID) ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದೆ. ಎಸ್‌ಐಟಿ (SIT) ರಚನೆ ಬೆನ್ನಲ್ಲೇ ಸರ್ಕಾರಕ್ಕೆ ಸಿಐಡಿ ತನಿಖಾ ವರದಿ ಸಲ್ಲಿಸಿದೆ.
ಸಿಐಡಿ ಸಲ್ಲಿಸಿರುವ ತನಿಖಾ ವರದಿಯಲ್ಲಿ ಸ್ಫೋಟಕ ರಹಸ್ಯ ಬಯಲಾಗಿದೆ. ಹಣ ವರ್ಗಾವಣೆ, ಹುದ್ದೆಗಳ ಮಾರಾಟದ ಬಗ್ಗೆ ವರದಿಯಲ್ಲಿ ಎಳೆಎಳೆಯಾಗಿ ಉಲ್ಲೇಖಿಸಲಾಗಿದೆ. ಪಶುವೈದ್ಯಾಧಿಕಾರಿ ಹುದ್ದೆ ಅಕ್ರಮ ಸಂಬಂಧ ಸಿಐಡಿ 92 ಲಕ್ಷ ರೂ. ಜಪ್ತಿ ಮಾಡಿದೆ. ಭಾಲ್ಕಿಯ ಪಟ್ಟಣದ ಓಂ ಲಕ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಗಳಿಗೆ 92 ಲಕ್ಷ ರೂ. ಹಣ ಜಮೆಯಾಗಿರುವುದು ಪತ್ತೆಯಾಗಿದೆ. ಕನ್ನಾಳೆ ಸೂಚನೆಯಂತೆ ಐವರು ಅಭ್ಯರ್ಥಿಗಳು ಹಣ ವರ್ಗಾಯಿಸಿದ್ದರು. ಸಿದ್ಧಾರ್ಥ್ 20 ಲಕ್ಷ, ವಿ.ಬಸವರಾಜ್ 27 ಲಕ್ಷ, ಮಹೇಂದ್ರ 25 ಲಕ್ಷ ಹಾಗೂ ನಿರಂಜನ್ 14 ಲಕ್ಷ ರೂ. ಹಣವನ್ನ ಅಕೌಂಟ್‌ಗೆ ಜಮೆ ಮಾಡಿದ್ದರು. ಅಭ್ಯರ್ಥಿಗಳಾದ ಕಿರಣ್ ಗೌಡ 10 ಲಕ್ಷ, ಸಲೀಂ 30 ಲಕ್ಷ, ಮೊಹಮದ್ ಸುಹೈಲ್ 20 ಲಕ್ಷ ನಗದು ರೂಪದಲ್ಲಿ ಹಣ ನೀಡಿದ್ದರು. ಇದನ್ನೂ ಓದಿ: ಪೊಲೀಸರ ಸೋಗಿನಲ್ಲಿ ಬಂದ ಮೂವರಿಂದ 17ರ ಬಾಲಕಿ ಮೇಲೆ ಗ್ಯಾಂಗ್ ರೇಪ್
ಇನ್ನು ಅಭ್ಯರ್ಥಿಗಳು, ಮಧ್ಯವರ್ತಿಗಳು, ಕನ್ನಾಳೆ ವಾಟ್ಸಾಪ್‌ನಲ್ಲಿ ಸಂವಹನ ನಡೆಸಿದ್ದಾರೆ. ಪರೀಕ್ಷೆಗೆ ಮೊದಲು ಗ್ಯಾಂಗ್ ಅಭ್ಯರ್ಥಿಗಳಿಗೆ 60-80 ಪ್ರಶ್ನೆ ನೀಡಿತ್ತು. 5 ಅಭ್ಯರ್ಥಿಗಳಿಗೆ ಪ್ರಶ್ನೆಗಳಿಗೆ ಉತ್ತರಿಸುವ ಅಭ್ಯಾಸ ಮಾಡಿಸಲಾಗಿತ್ತು. ಕನ್ನಾಳೆ ಮಧ್ಯವರ್ತಿ ಪವನ್ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ್ದ. ಸಿದ್ದಾರ್ಥ್, ರಾಜ್ ಮೊಹಮದ್, ಬಸವರಾಜ್, ಮಹೇಂದ್ರ, ನಿರಂಜನ್ ಸಂಪರ್ಕ ಮಾಡಿದ್ದ. ಅಲ್ಲದೇ ವಿನೋದ್, ಕಿರಣ್ ಗೌಡ, ಚೈತ್ರಾ ನೇರವಾಗಿ ಸಂಪರ್ಕಿಸಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಿಐಡಿ ಒಟ್ಟು 40 ಅಭ್ಯರ್ಥಿಗಳನ್ನು ವಿಚಾರಣೆ ನಡೆಸಿದೆ. ಇದನ್ನೂ ಓದಿ: ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ – ಬೀದರ್‌ನಲ್ಲಿ 3 ಕಡೆ ಲೋಕಾಯುಕ್ತ ದಾಳಿ
ಪ್ರಕರಣ ಸಂಬAಧ 22 ಲಕ್ಷ ಮೌಲ್ಯದ ವಜ್ರದ ಹಾರವನ್ನು ಸಿಐಡಿ ಸೀಜ್ ಮಾಡಿದೆ. ಗ್ಯಾನೇಂದ್ರ ತನ್ನ ಸ್ನೇಹಿತೆಗಾಗಿ ಚಿನ್ನಾಭರಣ ಖರೀದಿಸಿದ್ದ. ಇನ್ನು ಮಧ್ಯವರ್ತಿ ಬಸವರಾಜ್ ಕನ್ನಾಳೆಯಿಂದ 5.76 ಲಕ್ಷ ರೂ. ಹಣವನ್ನು ಸೀಜ್ ಮಾಡಲಾಗಿದೆ. ಕನ್ನಾಳೆ ಮತ್ತು ಪತ್ನಿ ಅಕೌಂಟ್‌ನಲ್ಲಿದ್ದ 71.18 ಲಕ್ಷ ರೂ. ಹಣವನ್ನು ಫ್ರೀಜ್ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲಿ ಅಕ್ರಮ ಗನ್ ಡೀಲಿಂಗ್ – ಏಳು ಮಂದಿ ಅರೆಸ್ಟ್
ನೇಮಕಾತಿಯಲ್ಲಿ ಅಕ್ರಮ ಸಂಬಂಧ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ಶುರುವಾಗಿದೆ. ಇಂದು ಅಥವಾ ನಾಳೆ ತನಿಖಾ ತಂಡದಿಂದ ಮೀಟಿಂಗ್ ನಡೆಯಲಿದ್ದು, ನೇಮಕಾತಿ ಅಕ್ರಮ ಸಂಬಂಧ ಕಡತಗಳ ಪರಿಶೀಲನೆ, ಸಿಐಡಿ ದಾಖಲೆ, ಸಾಕ್ಸ್ಯವನ್ನು ಎಸ್‌ಐಟಿ ಪರಿಶೀಲಿಸಲಿದೆ. ಅಲ್ಲದೇ ಸಿಐಡಿ ವಿಚಾರಣೆ ಎದುರಿಸಿದ ಎಲ್ಲರಿಗೂ ಬುಲಾವ್ ನೀಡುವ ಸಾಧ್ಯತೆಯಿದೆ. ಅಭ್ಯರ್ಥಿಗಳು, ಮಧ್ಯವರ್ತಿಗಳು, ಕೆಪಿಎಸ್‌ಸಿ ಸಿಬ್ಬಂದಿ ಹಾಗೂ ಕೆಪಿಎಸ್‌ಸಿ ಸದಸ್ಯರ ವಿಚಾರಣೆಯನ್ನು ಎಸ್‌ಐಟಿ ನಡೆಸಲಿದೆ. ಇದನ್ನೂ ಓದಿ: ಬೆಂಗಳೂರು | ಮಳೆ ಅವಾಂತರಕ್ಕೆ ಬೃಹತ್ ಮರ ಧರೆಗೆ – ತಪ್ಪಿದ ಭಾರೀ ಅನಾಹುತ
ಕೆಪಿಎಸ್‌ಸಿ ಅಕ್ರಮದ ಬಗ್ಗೆ ಹೈಕೋರ್ಟ್ ಎಸ್‌ಐಟಿ ರಚಿಸಲು ಆದೇಶ ನೀಡಿದ್ದು, ಎಸ್‌ಐಟಿಗೆ ಪೊಲೀಸ್ ಠಾಣೆ ಮಾನ್ಯತೆ ಬಗ್ಗೆ ಆದೇಶದಲ್ಲಿ ಪ್ರಸ್ತಾಪಿಸಿದೆ. ಪೊಲೀಸ್ ಠಾಣೆ ಮಾನ್ಯತೆ ಸಿಕ್ಕ ಹಿನ್ನೆಲೆ ಎಫ್‌ಐಆರ್ ಮಾಡಲು ಅವಕಾಶವಿದೆ. ಈ ಹಿಂದೆ ಹಲವು ಸಿಐಡಿ ತಂಡ ಎಸ್‌ಐಟಿಗಳ ತನಿಖೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಪೊಲೀಸ್ ಠಾಣೆ ಮಾನ್ಯತೆ ಇಲ್ಲ ಎಂದು ಕೋರ್ಟ್‌ನಲ್ಲಿ ವಾದ ಮಾಡಲಾಗಿತ್ತು. ಹೀಗಾಗಿ ಎಸ್‌ಐಟಿಗೆ ಪೊಲೀಸ್ ಠಾಣೆ ಮಾನ್ಯತೆ ಬಗ್ಗೆ ಹೈಕೋರ್ಟ್ ಆದೇಶ ಹೊರಡಿಸಿದೆ. ಹೈಕೋರ್ಟ್‌ನಿಂದ ಠಾಣಾ ಮಾನ್ಯತೆ ನೀಡಲು ಆದೇಶಿಸಲಾಗಿದೆ. ಎಸ್‌ಐಟಿಯಿಂದ ಮತ್ತೆ ಹೊಸದಾಗಿ ತನಿಖೆ ಶುರುವಾಗಲಿದ್ದು, ತನಿಖೆ ವೇಳೆ ಆರೋಪಿ ವಿಚಾರಣೆಯ ಅಗತ್ಯ ಕಂಡು ಬಂದಲ್ಲಿ ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ಭಾರತ ನೆಕ್ಸ್ಟ್ ಸೂಪರ್ ಪವರ್ – ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನಕ್ಕೆ 4 ಯುರೋಪಿಯನ್ ರಾಷ್ಟ್ರಗಳ ಬೆಂಬಲ

