ಕಲಬುರಗಿ: ಸಿಡಿಲು (Lightning) ಬಡಿದು ಇಬ್ಬರು ಮಹಿಳೆಯರು (Women) ಸಾವನಪ್ಪಿರುವ ಘಟನೆ ಕಮಲಾಪುರ್ ತಾಲೂಕಿನ ನಾಗೂರು ಗ್ರಾಮದ ಜಮೀನಿನಲ್ಲಿ ನಡೆದಿದೆ.
ಜಮೀನು ಮಾಲೀಕರಾದ ಲಕ್ಷ್ಮೀ ಗುತ್ತೇದಾರ್ (45) ಮತ್ತು ಕೂಲಿ ಮಹಿಳೆ ಸೈಜಾದ್ ಬಿ ಮೃತ ದುರ್ದೈವಿಗಳು. ಇಬ್ಬರು ಜಮೀನಿನಲ್ಲಿ ಕೆಲಸ ಮಾಡುವಾಗ ಜೋರಾಗಿ ಮಳೆ ಶುರುವಾಗಿದೆ. ಈ ವೇಳೆ ಇಬ್ಬರು ಮಹಿಳೆಯರು ಮರದಡಿ ಕುಳಿತು ಊಟ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹನೂರು ತಾಲೂಕಲ್ಲಿ ಮಳೆ ಆರ್ಭಟ; ಮನೆ, ಬೃಹತ್ ಮರ, ವಿದ್ಯುತ್ ಕಂಬಗಳು ಕುಸಿತ – ಕೊಚ್ಚಿಹೋದ ಚೆಕ್ ಡ್ಯಾಂ
ಸ್ಥಳಕ್ಕೆ ಕಮಲಾಪುರ ತಹಶಿಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ – ವಾಹನ ಸವಾರರ ಪರದಾಟ

