ಚಿಕ್ಕಮಗಳೂರು: ಕುಡಿದ ಮತ್ತಲ್ಲಿ ಮಗನೇ ತಂದೆಯನ್ನು (Father) ಕೊಚ್ಚಿ ಕೊಲೆಗೈದ ಘಟನೆ ತರೀಕೆರೆ (Tarikere) ತಾಲೂಕಿನ ವಡ್ಡರದಿಬ್ಬ ಗ್ರಾಮದಲ್ಲಿ ನಡೆದಿದೆ.
ತಮ್ಮಯ್ಯ (59) ಮಗನಿಂದಲೇ ಕೊಲೆಯಾದ ದುರ್ದೈವಿ. ಗಣೇಶ್ (29) ಕೊಲೆ ಆರೋಪಿಯಾಗಿದ್ದಾನೆ. ಕುಡಿದ ಮತ್ತಲ್ಲಿ ಕುತ್ತಿಗೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಗಣೇಶ್, ತಮ್ಮಯ್ಯನ ಮೊದಲ ಹೆಂಡತಿಯ ಮಗ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವಿಜಯಪುರದಲ್ಲಿ ವ್ಯಕ್ತಿಯ ಮೇಲೆ ಗುಂಡಿನ ದಾಳಿ
ಕೊಲೆಯಾದ ತಮ್ಮಯ್ಯ ಪತ್ನಿ ಸತ್ತ ಬಳಿಕ 2ನೇ ಮದುವೆಯಾಗಿದ್ದ. ಅಪ್ಪ-ಮಗ ಯಾವಾಗಲೂ ಕುಡಿಯುತ್ತಾರೆ ಎಂದು ಪತ್ನಿ ಮನೆ ಬಿಟ್ಟು ಹೋಗಿದ್ದಳು. ಸೆ.19 ರಂದು ಪತ್ನಿಗೆ ಮನೆಗೆ ಬರುವಂತೆ ತಮ್ಮಯ್ಯ ಹೇಳಿದ್ದ. ಇಬ್ಬರು ಒಂದಾದರೆ ನನ್ನನ್ನು ಮನೆಯಿಂದ ಹೊರಗೆ ಹಾಕುತ್ತಾರೆ ಎಂದು ಆರೋಪಿ ಈ ಕೃತ್ಯ ಎಸಗಿದ್ದಾನೆ. ಈ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಟ್ರೇಡಿಂಗ್ ಹೆಸರಿನಲ್ಲಿ 93 ಲಕ್ಷ ವಂಚನೆ – ಮೂವರು ಆರೋಪಿಗಳು ಅರೆಸ್ಟ್

