ವಯಸ್ಸು, ತೂಕ, ನೋಟ, ಕೌಟುಂಬಿಕ ಹಿನ್ನೆಲೆ, ವೃತ್ತಿಜೀವನದ ಹಿನ್ನಡೆ ಅಥವಾ ತಾಯ್ತನದ ಆಧಾರದ ಮೇಲೆ ಇತರರನ್ನು ಟ್ರೋಲ್ ಮಾಡುವವರ ವಿರುದ್ಧ ನಟ ಸಲ್ಮಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆಕ್ಷೇಪಾರ್ಹ ರೀತಿಯಲ್ಲಿ ಮಹಿಳೆಯರ ಛಾಯಾಚಿತ್ರಗಳನ್ನು ತೆಗೆಯುವ ಪೆಪರಾಜಿಗಳಿಗೂ ಅವರು ಎಚ್ಚರಿಕೆ ನೀಡಿದ್ದಾರೆ.
ಬಿಗ್ ಬಾಸ್ 20ರ ‘ವೀಕೆಂಡ್ ಕಾ ವಾರ್’ ಸಂಚಿಕೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ಸಲ್ಮಾನ್ ಖಾನ್ ಸ್ಪರ್ಧಿಗಳೊಂದಿಗೆ ಟ್ರೋಲಿಂಗ್, ಏಜ್ ಶೇಮಿಂಗ್ ಹಾಗೂ ಬಾಡಿ ಶೇಮಿಂಗ್ ಕುರಿತು ಮಾತನಾಡಿದ್ದಾರೆ.
“ಇದ್ದಕ್ಕಿದ್ದಂತೆ ಎಲ್ಲರೂ ವಯಸ್ಸಿನ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಯಾರಾದರೂ ವಯಸ್ಸಾಗಿದ್ದಾರೆ ಎಂದು ಹೇಳುತ್ತಾರೆ. ನೀವು ಯಾರನ್ನಾದರೂ ಏಕೆ ಟ್ರೋಲ್ ಮಾಡಲು ಬಯಸುತ್ತೀರಿ? ಅವರ ತೂಕ, ನೋಟ, ಕುಟುಂಬ, ನಗು, ವೃತ್ತಿಜೀವನದ ವೈಫಲ್ಯ ಅಥವಾ ತಾಯಿಯಾಗುವುದನ್ನು ಇಟ್ಟುಕೊಂಡು ಏಕೆ ಟ್ರೋಲ್ ಮಾಡಬೇಕು? ಎಂದ ಸಲ್ಮಾನ್ ಖಾನ್ ಪ್ರಶ್ನಿಸಿದ್ದಾರೆ.
ಗರ್ಭಿಣಿಯಾಗಿರುವ ಮಹಿಳೆಯನ್ನು ನೀವು ಏಕೆ ಟ್ರೋಲ್ ಮಾಡುತ್ತೀರಿ? ಗರ್ಭಾವಸ್ಥೆಯಲ್ಲಿ ಎಲ್ಲರೂ ತೂಕ ಹೆಚ್ಚಿಸಿಕೊಳ್ಳುತ್ತಾರೆ. ಅವಳು ಗರ್ಭಿಣಿಯಾಗಿದ್ದರಿಂದ ತೂಕ ಹೆಚ್ಚಾಗಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ನಟಿ ಕತ್ರಿನಾ ಕೈಫ್ ವಿರುದ್ಧದ ಟ್ರೋಲ್‌ಗೆ ಖಡಕ್ ಉತ್ತರ ನೀಡಿದ್ದಾರೆ.ಇದನ್ನೂ ಓದಿ: ಟ್ರೇಡಿಂಗ್ ಹೆಸರಿನಲ್ಲಿ 93 ಲಕ್ಷ ವಂಚನೆ – ಮೂವರು ಆರೋಪಿಗಳು ಅರೆಸ್ಟ್
ವಿಡಿಯೋದಲ್ಲಿ ಸಲ್ಮಾನ್ ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ. ಆದರೆ, ತಾಯಿಯಾದ ಬಳಿಕ ತೂಕ ಹೆಚ್ಚಿಸಿಕೊಂಡಿದ್ದಕ್ಕಾಗಿ ಟ್ರೋಲ್‌ಗೆ ಒಳಗಾಗಿದ್ದ ನಟಿ ಕತ್ರಿನಾ ಕೈಫ್ ಅವರನ್ನು ಅವರು ಸಮರ್ಥಿಸಿಕೊಂಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಟ್ರೋಲಿಂಗ್ ಕುರಿತು ಸ್ಪರ್ಧಿಗಳೊಂದಿಗೆ ಚರ್ಚಿಸುವ ವೇಳೆ ಸಲ್ಮಾನ್ ಖಾನ್ ಕೋಪಗೊಂಡಿರುವುದು ಕೂಡ ವಿಡಿಯೋದಲ್ಲಿ ಕಂಡುಬಂದಿದೆ. ಅವರು ತಮ್ಮ ಕೋಟ್ ತೆಗೆದು ಕ್ಯಾಪ್ ಕೆಳಗೆ ಎಸೆದು ಟ್ರೋಲರ್ಸ್ ವಿರುದ್ಧ ಗರಂ ಆಗಿದ್ದಾರೆ.
ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ಅನುಮತಿಯಿಲ್ಲದೆ ಹಿಂದಿನಿಂದ ಛಾಯಾಚಿತ್ರ ತೆಗೆಯುವವರ ವಿರುದ್ಧವೂ ಸಲ್ಮಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಮಂಜನಿಗೆ ಹೊಡೆದು ಜೈಲಿಗೆ ಹೋದ ಸೌಂದರ್ಯ ಶೆಟ್ಟಿ

