ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿಗೆ ಉದ್ಯಮಿ ಮೋಹನ್ ದಾಸ್ ಪೈ (Mohandas Pai) ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ಪೋಸ್ಟ್ ಹಂಚಿಕೊಂಡಿರುವ ಅವರು, ಟ್ರಾಫಿಕ್ ಪೊಲೀಸರು ರಸ್ತೆಯಲ್ಲಿರಲ್ಲ. ಕಿಯೋಸ್ಕ್‌ನಲ್ಲಿ ಕೂತಿರುತ್ತಾರೆ. ಟ್ರಾಫಿಕ್ ಪೊಲೀಸರು ಬೆಂಗಳೂರಿನಲ್ಲಿ (Bengaluru Traffic) ಕೇವಲ ಟ್ರಾಫಿಕ್ ಕಿಯೋಸ್ಕ್‌ನಲ್ಲಿ ಕೂತು ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಮಾಡುತ್ತಾ, ಮೊಬೈಲ್‌ನಲ್ಲಿ ವಿಡಿಯೋ ನೋಡುತ್ತಿರುತ್ತಾರೆ. ಅವರು ಕೆಲಸವನ್ನು ಸಂಪೂರ್ಣ ನಿರ್ವಹಿಸುತ್ತಿಲ್ಲ ಎಂದು ಉದ್ಯಮಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಅ.1 ರಿಂದ ಎಲ್‌ಪಿಜಿ ಬಳಕೆದಾರರಿಗೆ ಹೊಸ ರೂಲ್ಸ್; ಇನ್ಮುಂದೆ ಆಧಾರ್ ಇ-ಕೆವೈಸಿ ಇಲ್ಲದಿದ್ದರೆ ಸಿಗಲ್ಲ ಗ್ಯಾಸ್ ಸಿಲಿಂಡರ್
@CPBlr @Jointcptraffic avare All across city Traffic police are sitting in traffic kiosks manually controlling traffic, looking at their mobiles and videos and not doing their work fully. Please have the automated signals on. Manual control is messing up traffic. With no traffic… https://t.co/aS1VvUj4L3
— Mohandas Pai (@TVMohandasPai) September 20, 2026
ಮ್ಯಾನುವಲ್ ಕಂಟ್ರೋಲ್‌ನಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಿಗ್ನಲ್ಸ್ ಅನ್ನು ಆಟೋಮ್ಯಾಟಿಕ್ ಸಿಗ್ನಲ್ ಆನ್-ಆಫ್ ಆಗುವಂತೆ ನೋಡಿ. ಸಿಗ್ನಲ್ ಜಂಪ್, ರಾಂಗ್ ಸೈಡ್‌ನಿಂದ ವಾಹನ ಸವಾರರು ಬರುತ್ತಿದ್ದು, ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಕೇಳೋರೆ ಇಲ್ಲದಂತಾಗಿದೆ. ಮೊದಲು ಇದನ್ನು ಸರಿಪಡಿಸಿ ಎಂದು ಮನವಿ ಮಾಡಿದ್ದಾರೆ.
ಪೋಸ್ಟ್ ಅನ್ನು ಪೊಲೀಸ್ ಆಯುಕ್ತರು, ಟ್ರಾಫಿಕ್ ಪೊಲೀಸ್ ಅಧಿಕಾರಿ, ಸಿಎಂ, ಗೃಹಸಚಿವರು, ಜಿಬಿಎ ಕಮಿಷನರ್‌ಗೆ ಟ್ಯಾಗ್ ಮಾಡಿದ್ದಾರೆ. ಟ್ರಾಫಿಕ್ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರು | ವ್ಹೀಲಿಂಗ್ ಪುಂಡಾಟಕ್ಕೆ ಟಿಟಿ ವಾಹನ ಪಲ್ಟಿ; ಓರ್ವ ಸಾವು, ಐವರಿಗೆ ಗಂಭೀರ ಗಾಯ

