ಕಳೆದ 2 ವಾರದಲ್ಲಿ ಬಿಗ್ ಬಾಸ್ (Bigg Boss) ಮನೆಯ ಸ್ಪರ್ಧಿಗಳ ಆಟ, ವರ್ತನೆ, ನಡವಳಿಕೆಗಳ ಬಗ್ಗೆ ಕಿಚ್ಚ ಸುದೀಪ್ (Kichcha Sudeep) ಬೇಸರಗೊಂಡಿದ್ದಾರೆ. ಹೀಗಾಗಿ, ಈ ಬಾರಿ ಬಿಗ್ ಬಾಸ್ ವೀಕ್ಷಕರಾದ ಕರ್ನಾಟಕದ ಜನತೆಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.
‘ಅಗ್ನಿ ಗ್ಯಾಂಗ್’ ಆಟದ ವೈಖರಿಗೆ ವಾರದ ಕಥೆಯಲ್ಲಿ ಸುದೀಪ್ ಗರಂ ಆದರು. ಇನ್ಮುಂದೆ ಅಗ್ನಿ ಪರೀಕ್ಷೆಯಂತಹ ಆಯ್ಕೆ ಪ್ರಕ್ರಿಯೆ ತೆಗೆದುಬಿಡಿ ಅಂತ ಬಿಗ್ ಬಾಸ್ಗೆ ಕಿಚ್ಚ ಸಲಹೆ ನೀಡಿದರು. ಅಗ್ನಿ ಪರೀಕ್ಷೆ ಮೂಲಕ ಮನೆಗೆ ಎಂಟ್ರಿ ಕೊಟ್ಟಿದ್ದ ಅಷ್ಟೂ ಸ್ಪರ್ಧಿಗಳ ನಡವಳಿಕೆ ಬಗ್ಗೆ ಸುದೀಪ್ ಅಸಮಾಧಾನ ಹೊರಹಾಕಿದರು. ಸರಿಯಾಗಿ ಆಟ ಆಡುವಂತೆ ಕಿವಿಹಿಂಡಿದರು. ಇದನ್ನೂ ಓದಿ: ಮಂಜನಿಗೆ ಹೊಡೆದು ಜೈಲಿಗೆ ಹೋದ ಸೌಂದರ್ಯ ಶೆಟ್ಟಿ
ಇದೇ ವೇಳೆ, ಟಾಸ್ಕ್ ವೇಳೆ ಮಂಜನಿಗೆ ಹೊಡೆದ ಸೌಂದರ್ಯ ಶೆಟ್ಟಿ ಅವರನ್ನೂ ಸುದೀಪ್ ತರಾಟೆಗೆ ತೆಗೆದುಕೊಂಡರು. ಅವರ ತಪ್ಪಿಗೆ ಜೈಲು ಶಿಕ್ಷೆ ವಿಧಿಸಿದರು. ನಂತರ ಕಿಚ್ಚ ಚಪ್ಪಾಳೆ ಕುರಿತು ಮಾತನಾಡಿದ ಸುದೀಪ್, ತಮ್ಮ ದೃಷ್ಟಿಯಲ್ಲಿ ಎರಡು ವಾರದಲ್ಲಿ ಯಾರೊಬ್ಬರೂ ಚಪ್ಪಾಳೆಗೆ ಅರ್ಹರಲ್ಲ ಎಂಬುದನ್ನು ಸ್ಪರ್ಧಿಗಳಿಗೆ ಮನವರಿಕೆ ಮಾಡಿದರು.
ಕೊನೆಗೆ ಕರ್ನಾಟಕದ ಜನತೆಗೆ ಕಿಚ್ಚನ ಚಪ್ಪಾಳೆ ನೀಡಿದರು. ‘ಈ ಚಪ್ಪಾಳೆ ಕೊಡೋದಕ್ಕೆ ನಾನಿನ್ನೂ ಚಿಕ್ಕವನು. 2 ವಾರ ಈಗ ನಡೆದಿರುವ ಹಾಗೂ ಹಿಂದಿನ ಎಪಿಸೋಡ್ಗಳನ್ನೂ ನೋಡಿಯೂ ನಮ್ಮ ಮೇಲೆ ಇನ್ನೂ ಭರವಸೆ ಇಟ್ಟು ಬಿಗ್ ಬಾಸ್ನ ನೋಡುತ್ತಿರುವ ಕರುನಾಡಿನ ವೀಕ್ಷಕರಿಗೆ ನನ್ನ ಚಪ್ಪಾಳೆ’ ಎಂದು ಸುದೀಪ್ ತಿಳಿಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಹೃದಯಾಘಾತ ಆಗಿದ್ದು ನಿಜಾನಾ? – ಬಿಗ್ಬಾಸ್ ಪ್ರೋಮೋ ತಂದ ಆತಂಕ!
ಕರುನಾಡಿನ ಜನ, ಬಿಗ್ ಬಾಸ್ ವೀಕ್ಷಕರು ಕಳೆದ ಎರಡು ವಾರಗಳಿಂದ ನಿಮ್ಮನ್ನು ಕ್ಷಮಿಸಿದ್ದಾರೆ. ಕಳೆದ 12 ಸೀಸನ್ಗಳಿಂದಲೂ ನಮ್ಮೊಟ್ಟಿಗಿರುವ ಜನತೆಗೆ ನಾನು ಭರವಸೆ ನೀಡುತ್ತೇನೆ. ಕೆಲವು ಘಟನೆಗಳನ್ನು ಆಗಲು ನಾವು ಬಿಡಲ್ಲ ಎಂದು ಮಾತನಾಡಿದ್ದಾರೆ.

