– ಹೃದಯಾಘಾತ ಶಂಕೆ
ಬೆಂಗಳೂರು: ಐಷಾರಾಮಿ ಕಾರಿನಲ್ಲಿ (Luxury Car) ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಕೋರಮಂಗಲ (Koramangala) ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆದಿದೆ.
ರಾತ್ರಿ ಸುಮಾರು 2.36 ಗಂಟೆಗೆ ಠಾಣೆ ಮುಂಭಾಗ ಫಾಸ್ಟ್ ಫುಡ್ ಹೋಟೆಲ್ ಬಳಿ ಕಾರು ನಿಂತಿದೆ. ಬೆಳಗ್ಗೆ ನೋಡಿದಾಗ ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಪೊಲೀಸರ ಪರಿಶೀಲನೆ ವೇಳೆ ಮೃತಪಟ್ಟ ವ್ಯಕ್ತಿ ಸಲೀಂ ಅಕ್ಬರ್ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಂಜನಿಗೆ ಹೊಡೆದು ಜೈಲಿಗೆ ಹೋದ ಸೌಂದರ್ಯ ಶೆಟ್ಟಿ
ಸ್ಥಳಕ್ಕೆ ಧಾವಿಸಿದ ಸೋಕೋ ತನಿಖಾ ತಂಡ ಹಾಗೂ ಕೋರಮಂಗಲ ಪೊಲೀಸ್ ಸಿಬ್ಬಂದಿ ಕಾರು ಮತ್ತು ಮೃತದೇಹದ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಚಾಲನೆ ಮಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಬಿಸಿನೆಸ್ ನಿಮಿತ್ತ ಮಡಿಕೇರಿಯಿಂದ ಬೆಂಗಳೂರಿಗೆ ಸಲೀಂ ಬಂದಿದ್ರು ಎನ್ನಲಾಗಿದೆ. ಸದ್ಯ ಕೋರಮಂಗಲ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ 3 ವರ್ಷದ ಮಗು ಬಲಿ

