ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಕೈದಿಗಳಿಂದ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ವರ್ಷದಿಂದ ವರ್ಷಕ್ಕೆ ಕಠಿಣ ನಿಯಮಗಳನ್ನು ರೂಪಿಸಲಾಗುತ್ತಿದೆ. 9 ತಿಂಗಳ ಅವಧಿಯಲ್ಲಿ ಜೈಲುಗಳಲ್ಲಿ 410 ಮೊಬೈಲ್‌ಗಳು ಪತ್ತೆಯಾಗಿವೆ.
ಅನೇಕ ತಿಂಗಳಿಂದ ಜೈಲುಗಳಲ್ಲಿ ಮೊಬೈಲ್ ಎಂಟ್ರಿಗೆ ಫುಲ್ ಸ್ಟಾಫ್ ಹಾಕಲಾಗಿದೆ. ವರ್ಷದ ಹಿಂದೆ ಬಂದಿರುವ ಮೊಬೈಲ್‌ಗಳಷ್ಟೇ ಬಳಕೆಯಾಗಿವೆ. ಜೈಲು ಅಧಿಕಾರಿಗಳು ಆ ಮೊಬೈಲ್‌ಗಳನ್ನೂ ಪತ್ತೆ ಮಾಡಿದ್ದಾರೆ. ಕಳೆದ 9 ತಿಂಗಳಲ್ಲಿ ಬರೋಬ್ಬರಿ 410 ಮೊಬೈಲ್ ಪತ್ತೆಯಾಗಿದ್ದು, ಅದರಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲೇ 334 ಮೊಬೈಲ್ ಸೀಜ್ ಮಾಡಲಾಗಿದೆ. ಇದನ್ನೂ ಓದಿ: ಜೈಲಲ್ಲಿ ಪ್ರಜ್ವಲ್ ರೇವಣ್ಣ ಬಳಸಿದ್ದ ಮೊಬೈಲ್‌ನ ಸೀಕ್ರೆಟ್ ಬಯಲು – 7 ಜನರ ವಿರುದ್ಧ FIR
2023ರಲ್ಲಿ 72 ಮೊಬೈಲ್ & 28 ಸಿಮ್ ಪತ್ತೆಯಾಗಿವೆ. 2024ರಲ್ಲಿ 104 ಮೊಬೈಲ್ & 10 ಸಿಮ್ ಸಿಕ್ಕಿವೆ. 2025ರಲ್ಲಿ 148 ಮೊಬೈಲ್ & 68 ಸಿಮ್ ಹಾಗೂ 2026ರಲ್ಲಿ 410 ಮೊಬೈಲ್ & 228 ಸಿಮ್ ಪತ್ತೆಯಾಗಿವೆ. ವರ್ಷದಿಂದ ವರ್ಷಕ್ಕೆ ಮೊಬೈಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸೀಜ್ ಆಗಿವೆ.
ಅಲೋಕ್ ಕುಮಾರ್ ಅವಧಿಯಲ್ಲಿ ಹೆಚ್ಚು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ 6-7 ಮೊಬೈಲ್ ಅಷ್ಟೇ ಜೈಲಿನಲ್ಲಿ ಇರೋ ಸಾಧ್ಯತೆ ಇದೆ. 2025 ರ ಏಪ್ರಿಲ್‌ನಲ್ಲಿ ಪ್ರಜ್ವಲ್ ರೇವಣ್ಣ ಸೇಲ್‌ಗೆ ಮೊಬೈಲ್ ಸಪ್ಲೈ ಆಗಿದೆ. ಜೈಲು ಆಂತರಿಕ ತನಿಖೆ ವೇಳೆ ಪತ್ತೆಯಾಗಿರುವ ಸಾಧ್ಯತೆ ಇದೆ. 2025 ರಲ್ಲಿ ವಿಡಿಯೋ ಮಾಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಸಿಕ್ಕಿದೆ.

