– ಮುಂದೆ ಕಾನೂನು ಕೈಗೆತ್ತಿಕೊಳ್ಳದಂತೆ ಎಚ್ಚರಿಕೆ
ಬೆಂಗಳೂರು: ಕನ್ನಡಪರ ಹೋರಾಟಗಾರರ (Kannada Fighters) ಮೇಲಿನ ಪ್ರಕರಣಗಳನ್ನ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಭರವಸೆ ನೀಡಿದರು.
ಕೋಣನಕುಂಟೆ ಸಮೀಪ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಿಎಂ ಡಿಕೆ ಶಿವಕುಮಾರ್ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಇದೇ ವೇಳೆ ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ಗಳನ್ನ ವಾಪಸ್ ಪಡೆಯುವ ಭರವಸೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಬೆಂಗಳೂರಿನ ಕೋಣನಕುಂಟೆ ಕ್ರಾಸ್ನ ಪ್ರೆಸ್ಟೀಜ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದೆನು.
ಈ ಸಂದರ್ಭದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಶ್ರೀ ಯು. ಟಿ. ಖಾದರ್, ಶ್ರೀ ಎನ್. ಚಲುವರಾಯಸ್ವಾಮಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ… pic.twitter.com/w1pvQNL7W5
— DK Shivakumar (@DKShivakumar) September 19, 2026
ಕೇಸ್ ಗಳ ಪಟ್ಟಿ ಕೊಡಲಿ, ಗೃಹ ಸಚಿವರ ಜೊತೆ ಚರ್ಚಿಸಿ ವಾಪಸ್ ತೆಗೆದುಕೊಳ್ತೀನಿ. ಹೋರಾಟದ ಕೇಸ್ಗಳನ್ನ ಮಾತ್ರ ವಾಪಸ್ ತೆಗೆದುಕೊಳ್ತಿನಿ. ದರೋಡೆ ರೀತಿಯ ಕೇಸ್ ವಾಪಸ್ ತಗೊಳ್ಳಲ್ಲ. ಉಳಿದೆಲ್ಲ ಕೇಸ್ಗಳನ್ನ ವಾಪಸ್ ತೆಗೆದುಕೊಳ್ತೀನಿ, ಆದ್ರೆ ಇನ್ಮುಂದೆ ನೀವು ಕೂಡ ಕಾನೂನನ್ನ ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ಮುಂದುವರಿದು.. ನಾರಾಯಣ ಗೌಡ ಚುನಾವಣೆಗೆ ನಿಲ್ಲಲಿ. ನಮ್ಮ ಪಕ್ಷದಿಂದ ಅಲ್ಲ, ಬೇರೆ ಕ್ಷೇತ್ರ ಬಿಟ್ಟು ಕೊಡ್ತಿವಿ. ಕಳೆದ ಬಾರಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬಿಟ್ಟು ಕೊಟ್ಟಿದ್ದೇವು ಎಂದು ಹೇಳಿದರು.
ಇದೇ ಕಾರ್ಯಕ್ರಮದಲ್ಲಿ 27 ಮಂದಿ ಸಾಧಕರಿಗೆ ʻಕರ್ನಾಟಕ ಸಾರ್ವಭೌಮʼ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರವೇ ಯಿಂದ ಕೊಡಮಾಡುವ ಪ್ರಶಸ್ತಿಯನ್ನ ಮುಖ್ಯಮಂತ್ರಿಗಳು ಸಾಧಕರಿಗೆ ವಿತರಿಸಿ ಗೌರವಿಸಿದರು. ಸಚಿವ ಯು.ಟಿ ಖಾದರ್, ಶಾಸಕ ಹ್ಯಾರಿಸ್ ಸೇರಿ ಹಲವರಿಗೆ ಪ್ರಶಸ್ತಿ ನೀಡಲಾಯಿತು. ಇದೇ ವೇಳೆ ಕರವೇ ಯಿಂದ ಸಿಎಂಗೆ ಬೆಳ್ಳಿ, ತಾಮ್ರದಲ್ಲಿ ಮುದ್ರಿತವಾದ 10 ಬಿನ್ನವತ್ತಳೆ (ಮನವಿ ಪತ್ರ) ನೀಡಿ ಜಾರಿಗೆ ತರುವಂತೆ ಸೂಚಿಸಲಾಯಿತು.

