ಬೆಂಗಳೂರು: KPSC ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಗ್ಯಾನೇಂದ್ರ (Gyanedra Kumar) ಹಾಗೂ ಬಸವರಾಜ್ ಕನ್ನಾಳೆ ಅವರನ್ನು ಜೈಲಿನಲ್ಲೇ ಬಂಧಿಸಿದೆ. ಜೈಲಿನಲ್ಲಿ ವಿಚಾರಣೆಗೆ ಅಸಹಾಕಾರ ನೀಡಿದ ಹಿನ್ನೆಲೆ ಇಡಿ ತನ್ನ ಕಸ್ಟಡಿಗೆ ಪಡೆದುಕೊಂಡಿದೆ.
ಹೌದು. ಬಂಧನದಲ್ಲಿದ್ದ ಇಬ್ಬರನ್ನು ಇಡಿ ಅಧಿಕಾರಿಗಳು ಮೂರು ದಿನ ಜೈಲಿನಲ್ಲೇ ವಿಚಾರಣೆ ನಡೆಸಿದ್ದರು. ಆದ್ರೆ ವಿಚಾರಣೆಗೆ ಅಸಹಾಕಾರ ನೀಡಿದ ಹಿನ್ನೆಲೆ ನಿನ್ನೆ ರಾತ್ರಿ ಜೈಲಿನಲ್ಲೇ ಗ್ಯಾನೇಂದ್ರ ಮತ್ತು ಬಸವರಾಜ್ ಕನ್ನಾಳೆ (Basavaraj Kannale) ಇಬ್ಬರನ್ನ ಬಂಧಿಸಲಾಗಿದೆ.

ಬಂಧನದ ಬಳಿಕ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ED, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದೆ.
KPSC ನೇಮಕಾತಿಗೆ ಸಂಬಂಧಿಸಿದ ಅಕ್ರಮ ಹಾಗೂ ಹಗರಣದ ತನಿಖೆಯ ಭಾಗವಾಗಿ ಈ ಬಂಧನ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ED ಅಧಿಕಾರಿಗಳು ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ.

