ಚಾಮರಾಜನಗರ: ಜಿಲ್ಲೆಯ ಹನೂರು ಪಟ್ಟಣದ ಅಜ್ಜಿಪುರ ರಸ್ತೆಯಲ್ಲಿ ಬರುವ ಅರಣ್ಯ ಇಲಾಖೆಗೆ ಸೇರಿರುವ ನರ್ಸರಿ ಮುಂಭಾಗ ಕಿಡಿಗೇಡಿಗಳು ಶ್ರೀಗಂಧದ ಮರ ತುಂಡರಿಸಿ ಕಳ್ಳತನ ಮಾಡಿದ್ದಾರೆ.
ಅರಣ್ಯ ಇಲಾಖೆಗೆ ಸೇರಿರುವ ನರ್ಸರಿ ಮುಂಭಾಗವೇ ಕಿಡಿಗೇಡಿಗಳು ಶ್ರೀಗಂಧದ ಮರವನ್ನು ತುಂಡರಿಸಿ ಕಳ್ಳತನ ಮಾಡಿ ಹೋಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕ್ರಮಕ್ಕೆ ಒತ್ತಾಯ: ಅರಣ್ಯ ಇಲಾಖೆಗೆ ಸೇರಿರುವ ನರ್ಸರಿ ಮುಂಭಾಗವೇ ಶ್ರೀಗಂಧದ ಮರವನ್ನು ದುಷ್ಕರ್ಮಿ ಕಳ್ಳರು ತುಂಡರಿಸಿ ಮರವನ್ನು ಕಳ್ಳತನ ಮಾಡಿರುವುದು ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ನಾಗರಿಕರು ಆರೋಪಿಸಿದ್ದಾರೆ. ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಕಳ್ಳರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

