ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಉಪಚುನಾವಣೆಯ (Nandigram Bypoll) ಮಮತಾ ಬ್ಯಾನರ್ಜಿ (Mamata Banerjee) ಟಿಎಂಸಿ ಬಣದ ಅಭ್ಯರ್ಥಿ ಯೂಟರ್ನ್ ಹೊಡೆದಿದ್ದಾರೆ. ಅಭ್ಯರ್ಥಿ ಸಂಚಿತಾ ದೇ ಪ್ರಧಾನ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ.
ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಭೇಟಿ ಬಳಿಕ ವಾಪಸ್ ಪಡೆದಿದ್ದಾರೆ. ಕೋಲ್ಕತ್ತಾದಲ್ಲಿ ಮಧ್ಯಾಹ್ನ ಸುಮಾರು 1 ಗಂಟೆಗೆ ಇಬ್ಬರ ನಡುವೆ ಭೇಟಿ ಹಾಗೂ ದೀರ್ಘ ಚರ್ಚೆ ನಡೆಯಿತು. ಈ ಭೇಟಿಯ ಬಳಿಕವೇ ಸಂಚಿತಾ ಅವರು ಉಪಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಇದನ್ನೂ ಓದಿ: ಟಿಎಂಸಿ ಬಣಗಳಿಗೆ ಹೊಸ ಹೆಸರು; ದೀದಿಗೆ ʻಫುಟ್ಬಾಲ್ ಪ್ಲೇಯರ್ʼ, ರೆಬೆಲ್ಗಳಿಗೆ ʻಲಕೋಟೆʼ ಚಿಹ್ನೆ!
ಉಪಚುನಾವಣೆಗೆ ಬಿಜೆಪಿ ಹಸಿರಾಣಿ ರಥ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಸುವೇಂದು ಅಧಿಕಾರಿಯ ಮಾಜಿ ಸಹಾಯಕ ಚಂದ್ರನಾಥ್ ರಥ್ ಅವರ ತಾಯಿ ಹಸಿರಾಣಿ ರಥ್ ಕಣದಲ್ಲಿದ್ದಾರೆ.
ನಂದಿಗ್ರಾಮ ಉಪಚುನಾವಣೆ ಅಕ್ಟೋಬರ್ 6ರಂದು ನಡೆಯಲಿದ್ದು, ಮತ ಎಣಿಕೆ ಅಕ್ಟೋಬರ್ 9ರಂದು ನಡೆಯಲಿದೆ. ಇದನ್ನೂ ಓದಿ: ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಜ್ – ದೀದಿ, ಅರೂಪ್ ರಾಯ್ ಬಣಗಳಿಗೆ ಚುನಾವಣಾ ಆಯೋಗ ಶಾಕ್

