ಬೆಂಗಳೂರು: ಕಾಲ್ ಪಿಕ್ ಮಾಡಿಲ್ಲವೆಂದು ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ ಪತಿರಾಯ, ಕುದಿಯೋ ಎಣ್ಣೆ ಸುರಿದು ಸಾಕ್ಷ್ಯನಾಶಕ್ಕೆ ಯತ್ನಿಸಿ ಅರೆಸ್ಟ್ ಆಗಿರುವ ಘಟನೆ ಬೆಂಗಳೂರಿನ (Bengaluru) ಮೈಕೋ ಲೇಔಟ್ನ ಬಿಳೇಕಹಳ್ಳಿಯಲ್ಲಿ ನಡೆದಿದೆ.
ಬಿಹಾರ ಮೂಲದ ರಂಜಿತ್ ಕುಮಾರ್ ಗುಪ್ತಾ ಬಂಧಿತ ಆರೋಪಿ. ಈತ ತನ್ನ ಪತ್ನಿ ಗುಂಜಾ ಮದೇಷಿಯಾ (38) ಜೊತೆ ಮೈಕೋ ಲೇಔಟ್ನ ಬಿಳೇಕಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ. ಫೋನ್ ಕರೆ ಸ್ವೀಕರಿಸುವುದಿಲ್ಲ ಎಂಬ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ನಿನ್ನೆ ಬೆಳಿಗ್ಗೆ ಮಕ್ಕಳು ಶಾಲೆಗೆ ತೆರಳಿದ ಬಳಿಕ ಮತ್ತೆ ಗಲಾಟೆ ಶುರುವಾಗಿದೆ.
ಆಕ್ರೋಶಗೊಂಡ ರಂಜಿತ್, ಪತ್ನಿ ಮೇಲೆ ಹಲ್ಲೆ ನಡೆಸಿ ವೇಲ್ ಹಾಗೂ ಸೀರೆಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಇದನ್ನ ಆಕಸ್ಮಿಕ ಸಾವು ಎಂದು ಬಿಂಬಿಸಲು ಮತ್ತು ಮೃತದೇಹ ವಿರೂಪಗೊಳಿಸಲು ದೇಹದ ಮೇಲೆ ಬಿಸಿ ಎಣ್ಣೆ ಎರಚಿ ಚರ್ಮ ಸುಲಿಯಲು ಯತ್ನಿಸಿದ್ದಾನೆ. ಇದನ್ನೂ ಓದಿ: ಕಡವೆ ಬೇಟೆಯಾಡಿ ಮಾಂಸ ಕತ್ತರಿಸುವಾಗ ಅಧಿಕಾರಿಗಳ ದಾಳಿ – ಮೂವರು ಅರೆಸ್ಟ್
ದಂಪತಿಯ ಜಗಳದ ಬಗ್ಗೆ ಮನೆ ಮಾಲೀಕರು ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಸದ್ಯ ಆರೋಪಿಯನ್ನು ಮೈಕೋ ಲೇಔಟ್ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈತನ ಕೋಪಕ್ಕೆ ಇತ್ತ ಅಪ್ಪನೂ ಇಲ್ಲದೇ ಅಮ್ಮನೂ ಇಲ್ಲದೆ ಮಕ್ಕಳು ಮಾತ್ರ ಬಡವಾಗಿವೆ. ಇದನ್ನೂ ಓದಿ: ಭೀಕರ ಬರ ಎದುರಿಸುತ್ತಿದ್ದರೂ ರಾಮದುರ್ಗ, ಸವದತ್ತಿಯನ್ನು ಕೈಬಿಟ್ಟ ಸರ್ಕಾರ – ಅನ್ನದಾತರಿಗೆ ಆಘಾತ

