ಚಿತ್ರದುರ್ಗ: ಅಕ್ರಮವನ್ನು ತಡೆಯಲು ತೆರಳಿದ್ದ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಿಗೆ ರೈತರು ದಿಗ್ಬಂಧನ ಹಾಕಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು (Hiriyur) ತಾಲೂಕಿನ ಚಿಕ್ಕಸಿದ್ದವ್ವನಹಳ್ಳಿಬಳಿ ನಡೆದಿದೆ.
ಭದ್ರಾ ಕಾಲುವೆಯಿಂದ (Bhadra Canal) ಕೆರೆಗೆ ನೀರು ಪಂಪ್ ಮಾಡುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆ ಮೋಟರ್ ಪಂಪ್ ಕಡಿತಗೊಳಿಸಲು ಜಲ ನಿಗಮದ ಎಂಜಿನಿಯರ್ ಕಿರಣ್ ಹಾಗೂ ಅವರ ಸಿಬ್ಬಂದಿ ಕಾಲುವೆ ಪರಿಶೀಲನೆಗೆ ತೆರಳಿದ್ದರು. ಆದರೆ ಯೋಜನೆ ಪ್ರಕಾರ ಚಿಕ್ಕಸಿದ್ದವ್ವನಹಳ್ಳಿ ಕೆರೆ ಸೇರಿದಂತೆ ಐಮಂಗಲ ಹೋಬಳಿಯ ಅನೇಕ ಕೆರೆಗಳಿಗೆ ಭದ್ರಾ ನೀರು ಹರಿಯುವ ಮುನ್ನವೇ ಬ್ರೇಕ್ ಹಾಕಲಾಗಿದೆ. ಹೀಗಾಗಿ ಆಕ್ರೋಶಗೊಂಡಿದ್ದ ರೈತರು, ನಿಗಮದ ಅಧಿಕಾರಿಗಳ ಕಾರಿಗೆ ಮುತ್ತಿಗೆ ಹಾಕಿದ್ದು, ಅಸಮಧಾನ ಹೊರಹಾಕಿದರು. ಇದನ್ನೂ ಓದಿ: ಯುಪಿಐಗೆ ಶುಲ್ಕ| ಸಮಿತಿ ಶಿಫಾರಸಿಗೆ ಅಂದು ಕಾಂಗ್ರೆಸ್ ಸಮ್ಮತಿ, ಇಂದು ರಾಹುಲ್ ವಿರೋಧ!
ಈ ಭಾಗದ 12 ಕೆರೆಗಳಿಗೆ ನೀರು ಬಿಡುವವರೆಗೆ ಕಾರು ಬಿಡಲ್ಲ ಎಂದು ಪಟ್ಟು ಹಿಡಿದಿದ್ದರು. ಈ ವೇಳೆ ರೈತರ ಆಕ್ರೋಶಕ್ಕೆ ಅಧಿಕಾರಿಗಳು ಬೆದರಿದ್ದರು. ಅವರ ವಾಹನದಲ್ಲೇ ಕೆಲಹೊತ್ತು ಕುಳಿತಿದ್ದರು. ಬಳಿಕ ರೈತರ ಅಹವಾಲು ಸ್ವೀಕರಿಸಿ, ಪರಿಹರಿಸುವ ಭರವಸೆ ನೀಡಿದ ಪರಿಣಾಮ ಪರಿಸ್ಥಿತಿ ತಿಳಿಯಾಗಿದೆ. ಇದನ್ನೂ ಓದಿ: ಪ್ರೀತಿಸಿ ಮದುವೆ – ಲಾಡ್ಜ್ನಲ್ಲಿ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಂದು ಗಂಡ ಪರಾರಿ
ಈ ಘಟನೆ ಬುಧವಾರ ಸಂಜೆ ವೇಳೆ ನಡೆದಿದ್ದು, ಮೊಬೈಲ್ನಲ್ಲಿ ಸೆರೆಯಾಗಿದ್ದ ವೀಡಿಯೋಗಳು ಎಲ್ಲೆಡೆ ವೈರಲ್ ಆಗಿವೆ. ಈ ಪ್ರಕರಣ ಐಮಂಗಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ 6 ಬಾಲಕರು ದುರ್ಮರಣ

